ಬೆಂಗಳೂರು –
ಕೋವಿಡ್ ಮಹಾಮಾರಿಗೆ ರಾಜ್ಯದಲ್ಲಿ ಶಿಕ್ಷಕರ ಸಾವಿನ ಸರಣಿ ಮುಂದುವರೆದಿದೆ.ಸಾಲು ಸಾಲಾಗಿ ಶಿಕ್ಷಕರು ಈ ಒಂದು ಕೋವಿಡ್ ಸೋಂಕಿಗೆ ಸಾಯು ತ್ತಿದ್ದಾರೆ.ತೀವ್ರವಾಗಿ ಹಬ್ಬುತ್ತಿರುವ ಈ ಒಂದು ಕೋ ವಿಡ್ ಹಿನ್ನಲೆಯಲ್ಲಿ ನಮ್ಮ ಶಿಕ್ಷಕರು ಭಯಗೊಂಡಿ ದ್ದಾರೆ.ಇನ್ನೂ ಇವತ್ತು ಮತ್ತೆ ರಾಜ್ಯದ ತುಂಬೆಲ್ಲಾ ಒಟ್ಟು ಹತ್ತು ಜನ ಶಿಕ್ಷಕ ಶಿಕ್ಷಕಿಯರು ಮೃತರಾಗಿ ದ್ದಾರೆ.

ಪಿ ಎಮ್ ಗೊಂದಳಿ ಇಂಡಿಯ ಗೋಳಸಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಇವರಿಗೆ ಕಳೆದ ಮೂರು ದಿನಗಳ ಹಿಂದೆ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಿಸದೇ ಸಾವಿಗೀ ಡಾಗಿದ್ದಾರೆ.

ಶ್ರೀಮತಿ ಬಿ ಎಸ್ ಛಲವಾದಿ ವಿಜಯಪುರ ಬಾಲಕಿ ಯರ ಶಾಲೆ ನಂ 3 ರಲ್ಲಿ ಶಿಕ್ಷಕಿಯರಾಗಿದ್ದ ಇವರಿಗೆ ಮೂರು ನಾಲ್ಕು ದಿನಗಳ ಹಿಂದೆ ಸೋಂಕು ಕಾಣಿಸಿ ಕೊಂಡು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲೀಸ ದೇ ಇವರು ಕೂಡಾ ಇಂದು ಸಾವಿಗೀಡಾಗಿದ್ದಾರೆ.

ಉಮೇಶ ಬಿರಾದಾರ ಖಾನಾಪೂರದ ಶಿಕ್ಷಣ ಸಂಯೋಜಕ ಇವರು ಕೂಡಾ ಮಹಾಮಾರಿಗೆ ಬಲಿಯಾಗಿದ್ದಾರೆ.ಕಳೆದ ಹತ್ತು ದಿನಗಳ ಹಿಂದೆ ಇವರಿಗೆ ಸೋಂಕು ಕಾಣಸಿಕೊಂಡು ಆಸ್ಪತ್ರೆಗೆ ದಾಖ ಲಾಗಿದ್ದರು ಚಿಕಿತ್ಸೆ ಫಲಿಸದೇ ಬೆಳಗಾವಿಯಲ್ಲಿ ಇಂದು ಮೃತರಾಗಿದ್ದಾರೆ.

ನರಸಿಂಹಲು ರಾಯಚೂರಿನ ಅಲ್ಕೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿದ್ದ ಇವರಿಗ ಕರೋನಾ ಸೋಂಕು ಕಾಣಿಸಿಕೊಂಡಿತ್ತು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು ಚಿಕಿತ್ಸೆ ಫಲಿಸದೇ ಇಂದು ಮೃತರಾಗಿದ್ದಾರೆ.

ಗೌರಮ್ಮಾ ಮೇತ್ರಿ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಯಾಗಿದ್ದ ಇವರು ಕೂಡಾ ಕೋವಿಡ್ ನಿಂದಾಗಿ ಮೃತರಾಗಿದ್ದಾರೆ. ಇವರ ನಿಧನಕ್ಕೆ ಭಾಲ್ಕಿ ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ಭಾವಪೂರ್ಣಸಂತಾಪವನ್ನು ಸೂಚಿಸಿದ್ದಾರೆ.

ಕೆ ವಿ ಚವ್ಹಾಣ ವಿಜಯಪುರದ ಯಂಕಂಚಿಯ CRP ಇವರು ವೆಂಟಿಲೇಟರ್ ಸಿಗದೇ ಮೃತರಾಗಿದ್ದಾರೆ. ಚಿಕಿತ್ಸೆ ಫಲಿಸದೇ ಆಸ್ಪತ್ರೆಗೆ ತೆರಳಿದ್ದ ಇವರಿಗೆ ಸಮ ಯಕ್ಕೆ ಸರಿಯಾಗಿ ವೆಂಟಿಲೇಟರ್ ಸಿಗಲಿಲ್ಲ ಹೀಗಾಗಿ ಅಲ್ಲಿಯೇ ಸಾವಿಗೀಡಾಗಿದ್ದಾರೆ.

ರವೀಂದ್ರ ನಂದವಾಡಗಿ ವಿಜಯಪುರದ ತಿಕೋಟಾ ದಲ್ಲಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿದ್ದ ಇವರು ಕೂಡಾ ಕೋವಿಡ್ ಗೆ ಸಾವಿಗೀಡಾಗಿದ್ದಾರೆ.

ಕೆಂಚಪ್ಪ ಬೆನಕಪ್ಪಗೋಳ ಸರ್ಕಾರಿ ಪ್ರೌಢ ಶಾಲೆಯ ಲ್ಲಿ ಶಿಕ್ಷಕರಾಗಿದ್ದ ಇವರಿಗೆ ಕಳೆದ ವಾರ ಸೋಂಕು ಕಾಣಿಸಿಕೊಂಡು ಚಿಕಿತ್ಸೆಗಾಗಿ ಅಶ್ವಿನಿ ಆಸ್ಪತ್ರೆಗೆ ದಾಖ ಲಾಗಿದ್ದರು ಚಿಕಿತ್ಸೆ ಫಲಿಸದೇ ಮೃತರಾಗಿದ್ದಾರೆ.

ಇನ್ನೂ ಧಾರವಾಡದ ವೆಂಕಟಾಪೂರ ಶಾಲೆಯ ಶಿಕ್ಷಕ ಪಿ ಬಿ ಕಾಳೆನವರ ನಿಧನರಾಗಿದ್ದಾರೆ. ಕ್ರಿಯಾ ಶೀಲ ಶಿಕ್ಷಕರಾಗಿದ್ದರು ಅಲ್ಲದೇ ಸಂಘದ ಪದಾಧಿ ಕಾರಿಯಾಗಿದ್ದರು

ಇನ್ನೂ ಮೃತರಾದ ಈ ಎಲ್ಲಾ ಶಿಕ್ಷಕರಿಗೆ ಹನಮಂತ ಬೂದಿಹಾಳ, ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥ ಮಿಕ ಶಾಲಾ ಶಿಕ್ಷಕರ ಸಂಘದ ಸರ್ವ ಸದಸ್ಯರಾದ, ಎಲ್ ಐ ಲಕ್ಕಮ್ಮನವರ,ಶರಣಬಸವ ಬನ್ನಿಗೊಳ, ಸಂಗಮೇಶ ಕನ್ನಿನಾಯ್ಕರ್,ಎಸ್ ಎಫ್ ಪಾಟೀಲ, ರವಿ ಬಂಗೇನವರ,ಅಕ್ಬರಅಲಿ ಸೋಲಾಪೂರ, ರಾಜುಸಿಂಗ್ ಹಲವಾಯಿ,ಚಂದ್ರಶೇಖರ ಶೆಟ್ರು, ನಾರಾಯಣಸ್ವಾಮಿ, ಕೆ ಎಮ್ ಮುನವಳ್ಳಿ, ಎಸ್ ಎ ಜಾಧವ, ಎಸ್ ಎಫ್, ಧನಿಗೊಂಡ, ರುಸ್ತಂ ಕನವಾ ಡೆ,ಬಿ ವಿ ಪ್ರೇಮಾವತಿ, ಕೀರ್ತಿವತಿ ವಿ ಎನ್, ಜೆ ಟಿ ಮಂಜುಳಾ,ಸೀಮಾ ನಾಯಕ, ಭಾರತಿ ಭಂಡಾರಿ, ಮಂಜುಳಾ ಬಾಗಲೂರು, ನಾಗವೇಣಿ, ಇಂದಿರಾ. ಮುಕಾಂಬಿಕಾ ಭಟ್.ನಾಗರತ್ನ,ಲಕ್ಷ್ಮೀದೇವಮ್ಮ, ಎಂ ವಿ,ಕುಸುಮಾ ಎಸ್ ಹೊಳೆಯಣ್ಣನವರ,ಬಿ ವಿ ಅಂಗಡಿ ,ಜಗದೀಶ್ ಬೋಳಸೂರ, ಅಶೋಕ ಸಜ್ಜನ,ಸೇರಿದಂತೆ ಹಲವರು ಸಂತಾಪವನ್ನು ಸೂಚಿ ಸಿದ್ದಾರೆ ಅಲ್ಲದೇ ಮೃತ ಕುಟುಂಬಕ್ಕೆ ಕೂಡಲೇ ರಾಜ್ಯ ಸರ್ಕಾರ ಕರೋನಾ ವಾರಿಯರ್ಸ್ ಅಂತಾ ಘೋಷಣೆ ಮಾಡಿ ಸೂಕ್ತ ಪರಿಹಾರವನ್ನು ನೀಡು ವಂತೆ ಒತ್ತಾಯವನ್ನು ಮಾಡಿದ್ದಾರೆ.
ಇನ್ನೂ ಪ್ರಮುಖವಾಗಿ ರಾಜ್ಯದಲ್ಲಿ ಸಾಲು ಸಾಲಾಗಿ ಶಿಕ್ಷಕರು ಮೃತರಾಗುತ್ತಿದ್ದಾರೆ ಆದರೂ ಸರ್ಕಾರ ಶಿಕ್ಷಣ ಸಚಿವರು ಸಂಘಟನೆಯ ಲೀಡರ್ಸ್ ಸೇರಿ ದಂತೆ ಎಲ್ಲರೂ ಅದ್ಯಾಕೋ ಏನೋ ಮಾತನಾಡುತ್ತಿ ಲ್ಲ ಇತ್ತ ಒಮ್ಮೆ ನೋಡಿ ಸ್ಪಂದಿಸಿ ಗಮನ ಹರಿಸಿ ನೋವಿಗೆ ಸ್ಪಂದಿಸಿ ಎಂಬೊದೆ ನಮ್ಮ ಆಶಯ