ಕೋಲಾರ –
ಲಾಕ್‌ಡೌನ್ ಮಾರ್ಗಸೂಚಿ ಉಲ್ಲಂಘಿಸಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಸ್ಮಿತಾ ಎಂಬ ಮಂಗಳಮುಖಿಗೆ ಕೋಲಾರ ದಲ್ಲಿ ಮಹಿಳಾ ಎಸ್ಐ ಒಬ್ಬರು ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ನಡೆದಿದೆ. ಪಟ್ಟಣದಲ್ಲಿನ ಗಲ್‌ಪೇಟೆ ಠಾಣೆ ಎಸ್‌ಐ ವೇದಾವತಿ ಅವರೇ ಹಲ್ಲೆ ಮಾಡಿ ಈಗ ಸುದ್ದಿಯಾಗಿದ್ದಾರೆ ಅಲ್ಲದೇ ಯುವತಿಗೆ ಕಪಾಳ ಮೋಕ್ಷ ಮಾಡಿದ್ದಾರೆ

ಜನರು ಅಗತ್ಯ ವಸ್ತುಗಳ ಖರೀದಿಗೆ ವಾಹನದಲ್ಲಿ ಬರಬಾರದೆಂದು ಸರ್ಕಾರ ಲಾಕ್‌ಡೌನ್ ಮಾರ್ಗಸೂ ಚಿಯಲ್ಲಿ ತಿಳಿಸಿದೆ. ಆದರೆ, ಸ್ಮಿತಾ ಅವರು ಸೋಪ್ ಖರೀದಿಸಲು ಬೈಕ್‌ನಲ್ಲಿ ಬೆಳಿಗ್ಗೆ ನಗರದ ಅಮ್ಮವಾರಿ ಪೇಟೆ ವೃತ್ತದಲ್ಲಿನ ಅಂಗಡಿಗೆ ಬಂದಿದ್ದರು ಇದನ್ನು ನೋಡಿದ ಮಹಿಳಾ ಪೊಲೀಸ್ ಅಧಿಕಾರಿ ವಿಚಾರಣೆ ಮಾಡಿ ಮಾತಿಗೆ ಮಾತು ಬೆಳೆದು ಈ ಒಂದು ಘಟನೆ ನಡೆದಿದೆ

ಅವರ ಬೈಕ್ ತಡೆದ ಎಸ್‌ಐ ವೇದಾವತಿ ಜತೆ ಸ್ಮಿತಾ ಅನುಚಿತವಾಗಿ ವರ್ತಿಸಿ ಕರ್ತವ್ಯಕ್ಕೆ ನಿರ್ವಹಣೆಗೆ ಅಡ್ಡಿಪಡಿಸಿದರು. ಆಗ ವೇದಾವತಿ ಅವರು ಸ್ಮಿತಾರ ತಲೆಗೂದಲು ಹಿಡಿದು ಠಾಣೆಗೆ ಎಳೆದೊಯ್ಯಲು ಮುಂದಾದರು.

ಇದಕ್ಕೆ ಪ್ರತಿರೋಧ ತೋರಿದ ಸ್ಮಿತಾ ಪೊಲೀಸರ ವಿರುದ್ಧ ತಿರುಗಿಬಿದ್ದರು.ಬಳಿಕ ವೇದಾವತಿ ಅವರು ಸ್ಮಿತಾಗೆ ಕಪಾಳಮೋಕ್ಷ ಮಾಡಿ ಲಾಠಿಯಿಂದ ಹಿಗ್ಗಾ ಮುಗ್ಗಾ ಥಳಿಸಿ ವಾಹನಕ್ಕೆ ಹತ್ತಿಸಿದರು.

ನಂತರ ಸ್ಮಿತಾ ಕ್ಷಮೆ ಕೋರಿದ್ದರಿಂದ ಪೊಲೀಸರು ಅವರನ್ನು ಬಿಟ್ಟು ಕಳುಹಿಸಿದರು.ಲಾಠಿ ಏಟಿನಿಂದ ಸ್ಮಿತಾರ ಬಲ ಕೈಗೆ ತೀವ್ರ ಪೆಟ್ಟಾಗಿ ರಕ್ತ ಸ್ರಾವವಾಯಿ ತು ಒಟ್ಟಾರೆ ನಡು ರಸ್ತೆಯಲ್ಲಿಯೇ ಮಂಗಳಮುಖಿ ಹಾಗೂ ಮಹಿಳಾ ಪೊಲೀಸ್ ಅಧಿಕಾರಿಯ ಜಟಾಪ ಟಿ ಜೋರಾಗಿತ್ತು ಏನೇ ಆಗಲಿ ಬುದ್ದಿ ಹೇಳಿ ಕಳಿಸು ವ ಬದಲಿಗೆ ಹೀಗೆ ಮಾಡಿದ್ದು ಸರಿನಾ ಇದಕ್ಕೆ ಹಿರಿ ಯ ಪೊಲೀಸ್ ಅಧಿಕಾರಿಗಳೇ ಉತ್ತರಿಸಬೇಕು