ನಿವೃತ್ತಿ ವಯಸ್ಸು 65 ಕೇಳಿದ್ದವರ ಅರ್ಜಿ ತೀರಸ್ಕ್ರತ ಸರ್ಕಾರಕ್ಕೆ ಹೊರೆ ಎಂದ ಹೈಕೋರ್ಟ್‌ ಮೇಲ್ಮನವಿ ತಿರಸ್ಕೃತ…..

Suddi Sante Desk

ಬೆಂಗಳೂರು –

ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 65ಕ್ಕೆ ನಿಗದಿಪಡಿ ಸುವು ದರಿಂದ ಖಜಾನೆ ಹಾಗೂ ಇತರರಿಗೆ ಉದ್ಯೋಗಾವ ಕಾಶಗಳ ಮೇಲೆ ನೇರ ಪರಿಣಾಮ ಉಂಟಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.ನನ್ನ ಸೇವೆಯನ್ನು 62 ವರ್ಷಗಳ ಬದಲಿಗೆ 65 ವರ್ಷದವರೆಗೆ ಮುಂದುವರಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಕೃಷಿ ಕಾಲೇಜಿನ ಮಾಜಿ ಡೀನ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾಯ ಮೂರ್ತಿ ಪಿ.ಕೃಷ್ಣ ಭಟ್ ಅವರಿದ್ದ ವಿಭಾಗೀಯ ನ್ಯಾಯ ಪೀಠ ತಿರಸ್ಕರಿಸಿದೆ.ಹಳೆಯ ರಕ್ತವನ್ನು ಉಳಿಸಿಕೊಳ್ಳು ವುದು ಅಥವಾ ತಾಜಾ ರಕ್ತವನ್ನು ತುಂಬುವುದು ರಾಜ್ಯ ಸರ್ಕಾರ ಅಥವಾ ವಿಶ್ವವಿದ್ಯಾನಿಲಯಗಳ ಬುದ್ಧಿವಂತಿಕೆಗೆ ಬಿಟ್ಟದ್ದು.ವಿವಿಧ ವಿಶ್ವವಿದ್ಯಾಲಯಗಳು ಮತ್ತು ಸಂಯೋ ಜಿತ ಕಾಲೇಜುಗಳಲ್ಲಿ ಸಾವಿರಾರು ಉದ್ಯೋಗಿಗಳು ಇದ್ದಾರೆ ಅರ್ಜಿದಾರರ ಈಗಿನ ಪ್ರಾರ್ಥನೆಯನ್ನು ಮನ್ನಿಸಿದ್ದೇ ಆದರೆ ಈ ಎಲ್ಲಾ ಉದ್ಯೋಗಿಗಳೂ ಮೂರು ವರ್ಷಗಳ ಹೆಚ್ಚುವರಿ ಅವಧಿಗೆ ಮುಂದುವರಿಯುತ್ತಾರೆ.ಆಗ ಹೊಸ ನೇಮಕಾತಿ ಗಳಿಗೆ ಖಾಲಿ ಹುದ್ದೆ‌ಗಳೇ ಉಳಿಯುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಪ್ರಾಧ್ಯಾಪಕರು,ಶಿಕ್ಷಕರಂತಹ ಸಾರ್ವಜನಿಕ ಸೇವಕರು ಯಾವ ವಯಸ್ಸಿನಲ್ಲಿ ನಿವೃತ್ತರಾಗಬೇಕು ಎಂಬುದು ಸಂಪೂರ್ಣವಾಗಿ ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಒಳಪಟ್ಟ ವಿಚಾರ.ಒಬ್ಬ ನೌಕರನ ಸಂಬಳದ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ.ಹೀಗಾಗಿ ಹಣಕಾಸು ಮತ್ತು ಇತರ ಅಂಶಗಳ ಮುಖೇನ ನಿರ್ಧಾರ ತೆಗೆದುಕೊಳ್ಳುವ ವಿಷಯ ಗಳಲ್ಲಿ ನ್ಯಾಯಾಲಯಗಳು ಸುಲಭವಾಗಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ವಿವರಿಸಿದೆ.
ಹನುಮನಮಟ್ಟಿಯ ಕೃಷಿ ವಿಜ್ಞಾನ ಕಾಲೇಜಿನ ಮಾಜಿ ಡೀನ್ ಡಾ. ಚಿದಾನಂದ್ ಪಿ ಮನ್ಸೂರ್ ಅವರು ನಿವೃತ್ತಿಯ ವಯಸ್ಸನ್ನು 62 ವರ್ಷ ಎಂದು ಸೂಚಿಸುವ ವಿವಿ ಕಾಯ್ದೆ 1964ರ ಕಲಂ 30(8) ಅನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿ ಲೇರಿದ್ದರು.ಅಂತೆಯೇ ಯುಜಿಸಿ ನಿಯಮಾವಳಿ ಅನು ಸಾರ 65 ವರ್ಷ ವಯಸ್ಸಿನವರೆಗೆ ಸೇವೆಯಲ್ಲಿ ಮುಂದು ವರಿಯಲು ನಿರ್ದೇಶಿಸಬೇಕು ಎಂದು ಕೋರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.