ಶೃಂಗೇರಿ –
ಮಹಾಮಾರಿ ಕೋವಿಡ್ ಗೆ ರಾಜ್ಯದಲ್ಲಿ ಮತ್ತೊರ್ವ ಆದರ್ಶ ಶಿಕ್ಷಣ ಅಧಿಕಾರಿ ಬಲಿಯಾಗಿದ್ದಾರೆ. ಶಿಕ್ಷಕ ರಿಗೆ ಅಚ್ಚುಮೆಚ್ಚು ಶೈಕ್ಷಣಿಕ ಕ್ಷೇತ್ರದಲ್ಲಿ ಹತ್ತು ಹಲ ವಾರು ಅಭಿವೃದ್ದಿ ಕಾರ್ಯಗಳ ಮೂಲಕ ಶಿಕ್ಷಕರಿಗೆ ಮಕ್ಕಳ ಪ್ರೀತಿಗೆ ಪಾತ್ರರಾಗಿದ್ದ ಬಿಇಓ ರೊಬ್ಬರು ಕೋವಿಡ್ ನಿಂದಾಗ ನಿಧನರಾಗಿದ್ದಾರೆ.ಹೌದು
ಡಾ ನಾಗರಾಜ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶೃಂಗೇರಿ ಅವರು ಇಂದು ಕೋವಿಡ್ ನಿಂದ ನಿಧನರಾಗಿದ್ದಾರೆ.
ಕಳೆದ ವಾರ ಕರ್ತವ್ಯದ ಮೇಲಿದ್ದ ಇವರಿಗೆ ಕರೋ ನಾ ಸೋಂಕು ಕಾಣಿಸಿಕೊಂಡು ನಂತರ ಪರೀಕ್ಷೆ ಮಾಡಿಸಿದ ಮೇಲೆಪಾಸಿಟಿವ್ ಅಂತಾ ತಿಳಿದು ಚಿಕಿ ತ್ಸೆಗೆ ದಾಖಲಾಗಿದ್ದರು.ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದ ಇವರು ಚಿಕಿತ್ಸೆ ಫಲಿಸದೇಇಂದು ಬೆಳಗಿನ ಜಾವ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.
ಇನ್ನೂ ಮೃತರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕರು ಭಗವಂತನಲ್ಲಿ ಪ್ರಾರ್ಥನೆ ಮಾಡಿಸಂತಾಪವನ್ನು ಸೂಚಿಸಿದ್ದಾರೆ.ಇದರೊಂದಿಗೆ ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸರ್ವ ಸದಸ್ಯ ರಾದ ಪವಾಡೆಪ್ಪ,ಅಶೋಕ ಸಜ್ಜನ, ಗುರು ತಿಗಡಿ, ಎಸ್ ಎಫ್ ಪಾಟೀಲ, ಶರಣು ಪೂಜಾರ, ಬಾಬಾ ಜಾನ ಮುಲ್ಲಾ, ನಂದಕುಮಾರ ದ್ಯಾಪೂರ, ರಾಜೀವ ಸಿಂಗ ಹಲವಾಯಿ, ಅಕ್ಬರಲಿ ಸೋಲಾಪುರ,ಎಲ್ ಐ ಲಕ್ಕಮ್ಮನವರ ಹನುಮಂತಪ್ಪ ಬೂದಿಹಾಳ, ಚಂದ್ರ ಶೇಖರ್ ಶೆಟ್ರು, ಶರಣಬಸವ ಬನ್ನಿಗೋಳ,ಆರ್ ನಾರಾಯಣಸ್ವಾಮಿ ಚಿಂತಾಮಣಿ, ಜಿ ಟಿ ಲಕ್ಷ್ಮೀದೇ ವಮ್ಮ ಎಂ ವಿ ಕುಸುಮ,ವಿ ಎನ್ ಕೀರ್ತಿವತಿ, ಸೇರಿ ದಂತೆ ಹಲವು ಶಿಕ್ಷಕರು ಅಗಲಿದ ಮಹಾನ್ಆದರ್ಶ ಅಧಿಕಾರಿಗೆ ಸಂತಾಪ ಸೂಚಿಸಿ ನಮನವನ್ನು ಸಲ್ಲಿಸಿ ದ್ದಾರೆ.ಇದರೊಂದಿಗೆ ಅವರಿಲ್ಲದ ನೋವಿನ ಶಕ್ತಿಯ ನ್ನು ಆ ಒಂದು ಕುಟುಂಬ ತಡೆದುಕೊಳ್ಳುವ ಶಕ್ತಿಯ ನ್ನು ಕೊಡಲೇಂದು ಪ್ರಾರ್ಥಿಸಿದ್ದಾರೆ.