ಬೆಂಗಳೂರು –
ಮಹಾಮಾರಿ ಕೋವಿಡ್ ಗೆ ರಾಜ್ಯದಲ್ಲಿಂದು ಮತ್ತೆ ಏಳು ಜನ ಶಿಕ್ಷಕರು ಸಾವಿಗೀಡಾಗಿದ್ದಾರೆ. ರಾಜ್ಯದ ಹಲವೆಡೆ ಇಂದು ಕೂಡಾ ಕೋವಿಡ್ ನಿಂದಾಗಿ ಶಿಕ್ಷಕರು ಸಾವಿಗೀಡಾಗಿದ್ದಾರೆ. ಶಾಲೆಗಳಿಗೆ ರಜೆ ಇದ್ದರೂ ಕೂಡಾ ಮನೆಯಲ್ಲಿದ್ದ ಶಿಕ್ಷಕರಿಗೆ ಕರೋನಾ ಸೋಂಕು ಕಾಣಿಸಿಕೊಂಡು ನಂತರ ಚಿಕಿತ್ಸೆ ಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಶಿಕ್ಷಕರು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ. ಇಂದು ರಾಜ್ಯದ ಹಲವೆಡೆ ಮೃತರಾದ ಶಿಕ್ಷಕರ ವಿವರನ್ನು ನೊಡೊದಾದರೆ

ಮತ್ತಪ್ಪ ಹರಿಜನ ವಿಜಯಪುರದ ಇಂಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಇವರಿಗೆ ಮೂರು ದಿನಗಳ ಹಿಂದೆ ಕರೋನಾ ಸೋಂಕು ಕಾಣಿಸಿಕೊಂಡು ನಂತರ ಇಂಡಿಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಇಂದು ಇವರು ನಿಧನರಾಗಿದ್ದಾರೆ.

ಎಸ್ ಎಸ್ ಅಸಂಗಿ ಸಿಂದಗಿಯ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಇವರಿಗೆ ಕಳೆದ ವಾರ ಕರೋನಾ ಸೋಂಕು ಕಾಣಿಸಿಕೊಂಡಿತ್ತು. ನಂತರ ಇವರನ್ನು ಆಸ್ಪತೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೇ ಇಂದು ಇವರು ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.

ಇನ್ನೂ ಎಮ್ ಬಿ ಮುಜಾವರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಇವರು ಕೂಡಾ ಕೋವಿಡ್ ಸೋಂಕಿನಿಂದಾಗಿ ಮೃತರಾಗಿದ್ದಾರೆ.ಕರೋನಾ ಸೋಂಕು ಕಾಣಿಸಿಕೊಂಡ ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಇವರು ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ.

ಮಲ್ಲಿಕಾರ್ಜುನ ವಸ್ತಿ ಸಿಂದಗಿಯ ಕೋರಹಳ್ಳಿಯಲ್ಲಿ ಶಿಕ್ಷಕರಾಗಿರುವ ಇವರಿಗೆ ಕರೋನಾ ಸೋಂಕು ಕಾಣಿಸಿಕೊಂಡು ಆಸ್ಪತ್ರಗೆ ದಾಖಲಾಗಿದ್ದು ಚಿಕಿತ್ಸೆ ಫಲಿಸದೇ ಇವರು ಇಂದು ನಿಧನರಾಗಿದ್ದಾರೆ. ಕೋವಿ ಡ್ ಕರ್ತವ್ಯದ ಮೇಲಿದ್ದಾಗ ಇವರಿಗೆ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿ ದ್ದರು.

ಶಾಂತಕುಮಾರ ವಾಲಿಕರ ಹಿರಿಯ ಪ್ರಾಥಮಿಕ ಶಾಲೆ ಶಿವಪುರ ಗುಲ್ಬರ್ಗಾ ಇವರು ಕೂಡಾ ಕೋವಿ ಡ್ ಕರ್ತವ್ಯಕ್ಕೆ ಹಾಜರಾಗಿ ಕರ್ತವ್ಯ ಮಾಡುತ್ತಿದ್ದರು. ಇವರಿಗೂ ಕೂಡಾ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು.ಇವರು ಇಂದು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ.

ಜಿ ಎಎಮ್ ಪಾರಸಗೊಡ ಐನಾಪೂರದ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿರುವ ಇವರೂ ಕೂಡಾ ಇಂದು ಮೃತರಾಗಿದ್ದಾರೆ. ಗ್ರಾಮೀಣ ವಲಯದಲ್ಲಿ ರುವ ಈ ಒಂದು ಶಾಲೆಯಲ್ಲಿ ಆದರ್ಶ ಶಿಕ್ಷಕರಾಗಿ ರುವ ಇವರಿಗೆ ಕರೋನಾ ಸೋಂಕು ಕಾಣಿಸಿಕೊಂಡು ನಂತರ ಆಸ್ಪತ್ರೆಗೆ ದಾಖಲಾಗಿದ್ದರು.

ಡಿ ಎಸ್ ರಾಠೋಡ ಹಿಟ್ನಳ್ಳಿ ಕಿರಿಯ ಪ್ರಾಥಮಿಕ ಶಾಲೆ ಇವರು ಕೂಡಾ ಕೋವಿಡ್ ಸೋಂಕಿನಿಂದಾಗಿ ನಿಧನರಾಗಿದ್ದಾರೆ. ಇವರೊಂದಿಗೆ ಸಿಆರ್ ಪಿ ಯಾಗಿದ್ದ ಪಿ ವೈ ಧನ್ನೂರ ಇವರು ಕೂಡಾ ಇಂದು ಕೋವಿಡ್ ನಿಂದಾಗಿ ನಿಧನರಾಗಿದ್ದು ವಿಜಯಪುರ ಜೆಲ್ಲೆಯಲ್ಲಿಯೇ ಇಂದು ಅತಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ನಿಂದಾಗಿ ಮೃತರಾಗಿದ್ದಾರೆ.

ಇನ್ನೂ ಮೃತರಾದ ಶಿಕ್ಷಕರಿಗೆ ರಾಜ್ಯ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆ ಯ ಪವಾಡೆಪ್ಪ ಅಶೋಕ ಸಜ್ಜನ ಗುರು ತಿಗಡಿ, ಎಸ್ ಎಫ್ ಪಾಟೀಲ,ಶರಣು ಪೂಜಾರ, ಬಾಬಾ ಜಾನ ಮುಲ್ಲಾ, ನಂದಕುಮಾರ ದ್ಯಾಪೂರ, ರಾಜೀವ ಸಿಂಗ ಹಲವಾಯಿ, ಅಕ್ಬರಲಿ ಸೋಲಾಪುರ,ಶಂಕರ ಘಟ್ಟಿ, ಕಾಶಪ್ಪ ದೊಡವಾಡ ಸಿ ಎಂ ಹೂಲಿ,ಎಲ್ ಐ ಲಕ್ಕಮ್ಮನವರ ಮಲ್ಲಿಕಾರ್ಜುನ ಉಪ್ಪಿನ ಬೂದಿಹಾ ಳ ಚಂದ್ರಶೇಖರ್ ಶೆಟ್ರು, ಶರಣಬಸವ ಬನ್ನಿಗೋಳ, ಆರ್ ನಾರಾಯಣಸ್ವಾಮಿ ಚಿಂತಾಮಣಿ, ಜಿ ಟಿ ಲಕ್ಷ್ಮೀದೇವಮ್ಮ ಎಂ ವಿ ಕುಸುಮ, ವಿ ಎನ್ ಕೀರ್ತಿ ವತಿ, ಜೆ ಟಿ ಮಂಜುಳಾ,ಹಲವರು ಇಂದು ನಿಧನ ರಾದ ಶಿಕ್ಷಕರಿಗೆ ಭಾವಪೂರ್ಣ ಸಂತಾಪವನ್ನು ಸೂಚಿಸಿ ಕುಟುಂಬದವರಿಗೆ ನೋವಿನ ಶಕ್ತಿಯನ್ನು ತಡೆದುಕೊಳ್ಳುವ ಶಕ್ತಿಯನ್ನು ಕೊಡಲಿ ಹಾಗೇ ಇವರನ್ನು ಕರೋನಾ ವಾರಿಯರ್ಸ್ ಅಂತಾ ಘೋಷಣೆ ಮಾಡಿ ಸೂಕ್ತವಾದ ಪರಿಹಾರವನ್ನು ಘೋಷಣೆ ಮಾಡಿ ನೀಡುವಂತೆ ಒತ್ತಾಯ ಮಾಡಿ ದ್ದಾರೆ.