ಹುಬ್ಬಳ್ಳಿ –
ಪೊಲೀಸರಲ್ಲೂ ಮಾನವೀಯತೆ ಇರುತ್ತದೆ ಎನ್ನೊ ದಕ್ಕೆ ಈ ಘಟನೆಯೇ ಸಾಕ್ಷಿ.ಕರ್ತವ್ಯದ ನಡುವೆಯೂ ಹುಬ್ಬಳ್ಳಿಯಲ್ಲಿ ಪೊಲೀಸರು ಮಾನವೀಯತೆಯನ್ನು ಮೆರೆದು ಇಲಾಖೆಯ ಗೌರವ ಕರ್ತವ್ಯ ನಿಷ್ಠೇಯನ್ನು ಎಲ್ಲರೂ ಮೆಚ್ಚುವಂತೆ ಮಾಡಿದ್ದಾರೆ.
ಹೌದು ಒಂದೆಡೆ ರಾಜ್ಯದಲ್ಲಿ ಪೊಲೀಸರ ಲಾಠಿ ಏಟಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದರೆ ಇತ್ತ ನಗರದಲ್ಲಿ ಇನ್ನೊಂದೆಡೆ ಪೊಲೀಸರು ತಮ್ಮ ಕರ್ತವ್ಯದ ನಡುವೆ ಜೀವವೊಂ ದನ್ನು ಉಳಿಸುವ ಕಾರ್ಯವನ್ನು ಮಾಡಿದ್ದಾರೆ ಅಲ್ಲ ದೇ ಉಳಿಸಿ ಬದುಕಿಸಿ ಮಾನವೀಯತೆಯನ್ನು ಮೆರೆ ದಿದ್ದಾರೆ.
ಹುಬ್ಬಳ್ಳಿಯ ಪರಾಗ ಹೋಟೆಲ್ ಬಳಿಯಲ್ಲಿ ಬೈಕ್ ಸವಾರನೊಬ್ಬ ಸಣ್ಣ ನಾಯಿಯ ಮರಿಯ ಮೇಲೆ ಬೈಕ್ ಹತ್ತಿಸಿಕೊಂಡು ಹೋಗಿದ್ದ ಚಿಕ್ಕದಾದ ಆ ಒಂದು ನಾಯಿ ಮರಿ ನೆಲಕ್ಕೆ ಬಿದ್ದು ಒದ್ದಾಡ ತೊಡ ಡಗಿತು.ಇನ್ನೇನು ಸಾಯುತ್ತದೆ ಸತ್ತೆ ಹೋಗುತ್ತದೆ ಎಂದುಕೊಂಡಿದ್ದರು
ಎಲ್ಲರೂ ಕೂಡಲೇ ಅಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಶಹರ ಠಾಣೆಯ ಪೊಲೀಸ ಕೃಷ್ಣಾ ಕಟ್ಟಿಮನಿ ಹಾಗೂ ದಕ್ಷಿಣ ಸಂಚಾರಿ ಠಾಣೆಯ ಪೊಲೀಸ್ ಸಿಬ್ಬಂದಿ ದ್ಯಾಮಣ್ಣ ಯಂಕನ್ನವರ ನಾಯಿ ಮರಿಗೆ ನೀರನ್ನು ಕುಡಿಸಿ ಅದಕ್ಕೆ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಿಸು ವ ಕಾರ್ಯವನ್ನು ಮಾಡಿ ಜೀವವನ್ನು ಉಳಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.
ಹೌದು ಬೈಕ್ ಸವಾರ ನಾಯಿ ಮರಿಗೆ ಹಾಯಿಸಿಕೊಂ ಡು ಹೋಗಿದ್ದನ್ನು ನೋಡಿ ಪೊಲೀಸರು ಸುಮ್ಮನೆ ಕುಳಿತುಕೊಳ್ಳದೇ ಸ್ಥಳದಲ್ಲಿದ್ದ ಪೊಲೀಸರು ಗಾಯ ಗೊಂಡಿದ್ದ ನಾಯಿ ಮರಿಯನ್ನು ನೋಡಿ ಹಾರೈಕೆ ಮಾಡಿ ನಂತರ ಅದನ್ನು ಚೇತರಿಸಿಕೊಳ್ಳುವಂತೆ ಮಾಡಿದರು.
ನಾಯಿ ಮರಿ ತನ್ನ ತಾಯಿಯ ಬಳಿ ತೇವಳುತ್ತಾ ಸಾಗಿದರೆ,ತನ್ನ ಕಂದನನ್ನು ರಕ್ಷಣೆ ಮಾಡಿದ ಪೊಲೀ ಸರಿಗೆ ತಾಯಿ ನಾಯಿ ಧನ್ಯವಾದಗಳನ್ನು ಹೇಳುವ ರೀತಿಯಲ್ಲಿ ಪೊಲೀಸರನ್ನೇ ನೋಡುತ್ತಿತ್ತು.ಒಂದೆಡೆ ಮಾನವೀಯತೆ ಮರೆತು ಪೊಲೀಸರು ಮನಬಂದಂ ತೆ ಹೊಡೆಯುತ್ತಿದ್ದರೆ ಹುಬ್ಬಳ್ಳಿಯಲ್ಲಿ ನಡೆದ ಈ ಘಟನೆ ಪೊಲೀಸರಲ್ಲಿ ಮಾನವೀಯತೆ ಇನ್ನು ಇದೆ ಎಂಬುದನ್ನು ತೋರಿಸುವಂತಿತ್ತು.ಏನೇ ಆಗಲಿ ಪೊಲೀಸ್ ಪೇದೆಗಳಿಬ್ಬರು ಮಾಡಿದ ಈ ಒಂದು ದೊಡ್ಡ ಮಾನವೀಯತೆ ಕಾರ್ಯ ಮೆಚ್ಚುವಂತದ್ದು.