ಹುನಗುಂದ –
ಕರೋನಾ ಮಹಾಮಾರಿಯ ನಡುವೆ ಹಗಲಿರುಳು ಕರ್ತವ್ಯವನ್ನು ಮಾಡುತ್ತಿರುವ ಕರೋನಾ ವಾರಿಯ ರ್ಸ್ ಗೆ ಬಾಗಲಕೋಟಿಯ ಹುನಗುಂದ ದಲ್ಲಿ ಸರ್ವ ಧರ್ಮ ಸೇವಾ ಸಮಿತಿ ಯ ಯುವಕರು ದಿವಂಗತ ಬಸಪ್ಪ ಆಲೂರ ಇವರ ಸ್ಮರಣಾರ್ಥವಾಗಿ ಉಪಹಾ ರ ವನ್ನು ವಿತರಣೆ ಮಾಡಿದರು.

ನಗರದ ಪ್ರಮುಖ ಸ್ಥಳಗಳಲ್ಲಿ ಕರ್ತವ್ಯವನ್ನು ಮಾಡುತ್ತಿರುವ ವಾರಿಯರ್ಸ್ ಗೆ ಯುವಕರು ಉಪಹಾರವನ್ನು ವಿತರಣೆ ಮಾಡಿ ನೆರವಾದರು. ಶಿವು ಭಾವಿಕಟ್ಟಿ ಮತ್ತು ಸ್ನೇಹಿತರು ಸೇರಿಕೊಂಡು ಈ ಒಂದು ಸೇವಾ ಕಾರ್ಯವನ್ನು ಮಾಡಿದರು.

ನಗರದ ತುಂಬೆಲ್ಲಾ ಬಿಡುವಿಲ್ಲದೇ ಕೆಲಸದಲ್ಲಿ ತೊಡ ಗಿರುವ ವಾರಿಯರ್ಸ್ ಗೆ ಈ ಒಂದು ವ್ಯವಸ್ಥೆಯನ್ನು ಮಾಡಿದರು.ಹುನಗುಂದ ನಗರದಲ್ಲಿ ಸರ್ವ ಧರ್ಮ ಸೇವಾ ಸಮಿತಿ ಹುನಗುಂದ. ಹಾಗೂ ದಿ. ಬಸಪ್ಪ. ಎಚ್. ಆಲೂರ ಅವರ ಸ್ಮರಣಾರ್ಥವಾಗಿ ಕರೋನ ವಾರಿಯರ್ಸ್‌ಗೆ ಉಪಹಾರವನ್ನು ನೀಡಲಾಗಿತು.

ಇದೇ ವೇಳೆ ಪವಿತ್ರ ರಮಜಾನ್ ಹಬ್ಬದ ಪ್ರಯುಕ್ತ ವಾಗಿ ಮುಸ್ಲಿಮ್ ಬಡ ಕುಟುಂಬದವರಿಗೆ ದಿನಸಿ ಕಿಟ್ಟ ವಿತರಿಸಿದರು.ಮಂಜುನಾಥ ಆಲೂರ, ವಿಶ್ವ ನಾಥ ಹಿರೇಮಠ.



ಮುನ್ನಾ ಭಾಗವಾನ್,ಚಂದ್ರು ಗಂಗೂರ,ಯಾಸೀನ್ ಬಿಜಾಪೂರ,ಮೃತ್ತುಜಾ ತಾಳಿಕೋಟಿ,ಕಾರ್ತಿಕ ಆಲೂರ,ಸೇರಿದಂತೆ ಹಲವರು ಈ ಒಂದು ಸಂದರ್ಭ ದಲ್ಲಿ ಇದ್ದರು.