ಲಕ್ನೋ –
ಜೀವನದಲ್ಲಿ ಪ್ರತಿಯೊಬ್ಬರಿಗೂ ಆಸೆ ಇದ್ದೇ ಇರು ತ್ತದೆ.ನಾವು ಅದನ್ನು ಇದನ್ನು ಖರೀದಿ ಮಾಡಬೇಕು ಹಾಗೇ ಇರಬೇಕು ಹೀಗೆ ಎಲ್ಲರ ಹಾಗೇ ಅವರಿವರ ಹಾಗೇ ಇರಬೇಕು ಜೀವನ ಮಾಡಬೇಕು ಜೊತೆಗೆ ಐಶಾರಾಮಿ ಆಗಿ ಲೈಫ್ ಮಾಡಬೇಕು ಅಂತಾ ಕನಸು ಆಸೆ ಬಯಕೆ ಇದ್ದೇ ಇರುತ್ತದೆ ಹೀಗೆ ಕಾರಿನ ಆಸೆಗೆ ಬಿದ್ದ ದಂಪತಿ ನವಜಾತ ಶಿಶುವನ್ನೇ ಮಾರಾ ಟ ಮಾಡಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಹೌದು ಇಂತಹದೊಂದು ಅಮಾನವೀಯ ಘಟನೆ ಯೊಂದು ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯಲ್ಲಿ ನಡೆದಿದೆ.ಈ ದಂಪತಿ ತಮ್ಮ ನವಜಾತ ಶಿಶುವನ್ನು ಉದ್ಯಮಿಗಳಿಗೆ ರೂ.1.5 ಲಕ್ಷಕ್ಕೆ ಮಾರಾಟ ಮಾಡಿ ದ್ದಾರೆ.ಅದೂ ಇವರು ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ತಮ್ಮ ಮುದ್ದು ಮಗುವನ್ನು ಮಾರಾಟ ಮಾಡಿದ್ದಾರೆ.
ಹೌದು ಅತ್ತ ಕಾರು ಮಾರಾಟ ಮಾಡಿ ಕಾರು ಖರೀದಿ ಮಾಡುತ್ತಿದ್ದಂತೆ ಇತ್ತ ಈ ಒಂದು ಸುದ್ದಿ ತಿಳಿಯುತ್ತಿ ದ್ದಂತೆ ಇತ್ತ ಮಗುವಿನ ಅಜ್ಜ ಅಜ್ಜಿ ಗುರುವಾರ ಪೊಲೀಸರನ್ನು ಸಂಪರ್ಕಿಸಿ ಪೋಷಕರ ವಿರುದ್ಧ ದೂರು ದಾಖಲಿಸಿದ್ದಾರೆ.ಆ ನಂತರ ಈ ವಿಷಯ ಬೆಳಕಿಗೆ ಬಂದಿದೆ.ಸಧ್ಯ ಈ ಒಂದು ಕುರಿತು ತಿರ್ವಾ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪಾಪಿ ದಂಪತಿಗೆ ಮೂರು ತಿಂಗಳ ಹಿಂದೆ ಮಗು ಜನಿಸಿತ್ತು.ಮಗಳು ಮತ್ತು ಅಳಿಯ ಮಗುವನ್ನು ಗುರ್ಸಹೈಗಂಜ್ ಮೂಲದ ಉದ್ಯಮಿಯೊಬ್ಬರಿಗೆ ರೂ. 1.5 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ.ಸದ್ಯ ಮಗು ಉದ್ಯಮಿಯ ಬಳಿಯಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.ಆದರೆ ಈಗಾಗಲೇ ದಂಪತಿ ಕಾರು ಖರೀದಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ