ಬ್ರಹ್ಮಾಂಡ ಭ್ರಷ್ಟಾಚಾರದ ಕೇಂದ್ರ ವಾಗುತ್ತಿದೆ ಶಿಕ್ಷಣ ಕ್ಷೇತ್ರ ಪವಿತ್ರ ಕ್ಷೇತ್ರದಲ್ಲಿನ ಲಂಚಗುಳಿತನದ ರೇಟ್ ಕಾರ್ಡ್ ವೈರಲ್…..

Suddi Sante Desk

ಬೆಂಗಳೂರು –

ಶಿಕ್ಷಣ ಕ್ಷೇತ್ರ ಪವಿತ್ರ.ಇಲ್ಲಿ ಲಂಚಗುಳಿತನ ಇಲ್ಲ ಎಂಬ ಮಾತು ಈಗ ಸುಳ್ಳಾಗಿವೆ.ಪಠ್ಯಪುಸ್ತಕ ಮುದ್ರಣ ಸೇರಿ ಇತ್ತೀಚೆಗೆ ಒಂದಾದ ಮೇಲೊಂದು ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು ಇಲಾಖೆಯಲ್ಲಿನ ಲಂಚ ಗುಳಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಇಲಾಖೆಯಲ್ಲಿ ಯಾವುದಕ್ಕೆ ಎಷ್ಟು ರೇಟ್ ಫೀಕ್ಸ್ ಆಗಿದೆ ಎಂಬ ವಿಚಾರ ಕುರಿತು ರೇಟ್ ಕಾರ್ಡ್ ವೊಂದು ವೈರಲ್ ಆಗಿದ್ದು ಅದು ಈ ಕೆಳಗಿನಂತೆ ಇದೆ

ರೇಟ್ ಕಾರ್ಡ್ ಲಂಚ ಎಲ್ಲಿ, ಎಷ್ಟು?

  • ಕಾಲಮಿತಿ ವೇತನ ಬಡ್ತಿ: 1,000-2,000 ರೂ.
  • ವೈದ್ಯಕೀಯ ವೆಚ್ಚ ಮರುಪಾವತಿ: 1 ಲಕ್ಷ ಬಿಲ್ ಗೆ 4,000-5,000 ರೂ.
  • ಶಿಶುಪಾಲನಾ ರಜೆ: 4000-5000 ರೂ.
  • ವರ್ಗಾವಣಾ ಚಲನ-ವಲನ ಆದೇಶ (2 ಬಿಇಒ, 2 ಡಿಡಿಪಿಐ: 4 ಹಂತ): 6,000-8,000 ರೂ.
  • ಡೆಪ್ಯೂಟೇಷನ್: ಎ ವಲಯ-10,000-15,000 ರೂ., ಬಿ ವಲಯ(ಹೊರ ಜಿಲ್ಲೆ/ತಾಲೂಕಿನಿಂದ ಬರುವವರು): 20,000-25,000 ರೂ.
  • ವೈಯಕ್ತಿಕ ಬಾಕಿ ವೇತನ ಬಿಡುಗಡೆ (ಬಿಲ್ ಮೊತ್ತ ಆಧರಿಸಿ): 5,000-10,000 ರೂ.
  • ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ: 15,000-25,000 ರೂ. (ಕೆಲವೆಡೆ ಸಣ್ಣಪುಟ್ಟ ಲೋಪದ ನೆಪದಲ್ಲಿ ಲಕ್ಷಗಟ್ಟಲೆ ಸುಲಿಗೆ)
  • ಗಳಿಕೆ ರಜೆ ನಗದೀಕರಣ (ಒಬ್ಬ ಶಿಕ್ಷಕರಿಗೆ): 100-200 ರೂ.
  • ಸ್ಥಗಿತ ವೇತನ ಬಡ್ತಿ: 2,000-3,000 ರೂ.
  • ಅಮಾನತು ಹಿಂಪಡೆಯುವಾಗ (ಪ್ರಕರಣದ ಗಂಭೀರತೆ ಆಧರಿಸಿ) 5,000-10,000 ರೂ.
  • ವಾರ್ಷಿಕ ಬಜೆಟ್ ತಯಾರಿಕೆ (ಖಾಸಗಿ: ವರ್ಷಕ್ಕೆ): 500-1,000 ರೂ.
  • ಶಾಲೆ ತಪಾಸಣೆಗೆ ಬಂದಾಗ ಸಣ್ಣಪುಟ್ಟ ನೆಪವೊಡ್ಡಿ ಸುಲಿಗೆ: 2,000-3,000 ರೂ.
  • ಮುಖ್ಯೋಪಾಧ್ಯಾಯರ ವರ್ಗಾವಣೆ/ನಿವೃತ್ತಿ ಸಂದರ್ಭದಲ್ಲಿ ವಾರ್ಷಿಕ ತಪಾಸಣೆ ನೆಪ: 5,000-10,000 ರೂ.
  • ನಿವೃತ್ತಿ ನಂತರ ಎಜಿಗೆ ಫೈಲ್ ಕಳಿಸುವಾಗ: 5,000-8,000 ರೂ.
  • ಗಳಿಕೆ ರಜೆ ನಗದೀಕರಣ(ರಜೆ ಪ್ರಮಾಣ ಆಧರಿಸಿ): 8,000-10,000 ರೂ.

ಇದು ಶಿಕ್ಷಣ ತಜ್ಞರನ್ನು ಕಳವಳಕ್ಕೀಡು ಮಾಡಿದೆ ಅಷ್ಟೇ ಅಲ್ಲ ಇಲಾಖೆ ಉನ್ನತಾಧಿಕಾರಿಗಳಿಗೂ ತಲೆನೋವಾಗಿದೆ.

ತಳ ಹಂತದಲ್ಲಿ ನಡೆಯುತ್ತಿದೆ ಎನ್ನಲಾಗುವ ಭ್ರಷ್ಟಾಚಾರಕ್ಕೆ ಕಡಿವಾಣ ಕಷ್ಟವಾಗಿದೆ.ಮೇಲಿನ ಹಂತದಲ್ಲಿ ಮಾಡುವ ಕಾನೂನು ಮತ್ತು ನಿಯಮಗಳು ಕಾಲಕಾಲಕ್ಕೆ ಹೊರಡಿ ಸುವ ಸುತ್ತೋಲೆ,ಜ್ಞಾಪನೆಗಳು ಕಾಸು ಕಮಾಯಿ ಗೆ ರಹ ದಾರಿ ಮಾಡಿಕೊಡುತ್ತಿವೆ ಎಂಬುದು ಶಿಕ್ಷಕರ ಅಳಲು. ರಾಜ್ಯಮಟ್ಟದ ವರ್ಗಾವಣಾ ಕೌನ್ಸಿಲಿಂಗ್ನ ಚಲನ-ವಲನ ಆದೇಶದಿಂದ ಹಿಡಿದು ಸಣ್ಣಪುಟ್ಟದ್ದಕ್ಕೆಲ್ಲ ಅಧಿಕಾರಿ, ಸಿಬ್ಬಂದಿ ಕೈಬಿಸಿ ಮಾಡಬೇಕಾದ ಪರಿಸ್ಥಿತಿ ನಿರ್ವಣವಾಗಿರು ವುದು ಶೈಕ್ಷಣಿಕ ರಂಗದಲ್ಲಿ ಕಪ್ಪುಚುಕ್ಕೆಗೆ ಕಾರಣವಾಗುತ್ತಿದೆ. ಟೈಮ್ ಬಾಂಡ್,ವೈದ್ಯಕೀಯ ವೆಚ್ಚ ಮರುಪಾವತಿ, ಶಿಶು ಪಾಲನಾ ರಜೆ ಮಂಜೂರು ವರ್ಗಾವಣೆ ಚಲನ-ವಲನ ಆದೇಶ,ಡೆಪ್ಯೂಟೇಷನ್,ವೈಯಕ್ತಿಕ ಬಾಕಿ ವೇತನ ಬಿಡು ಗಡೆ,ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ,ಖಾಸಗಿ ಶಾಲೆಗಳ ವಾರ್ಷಿಕ ಬಜೆಟ್ ಹೀಗೆ ಎಲ್ಲದ್ದಕ್ಕೂ ಲಂಚಾ ವತಾರ ತಾಂಡವವಾಡುತ್ತಿದೆ.ಕೆಲ ಕ್ಷೇತ್ರ ಶಿಕ್ಷಣಾಧಿಕಾರಿ, ಉಪ ನಿರ್ದೇಶಕರ ಕಚೇರಿಯ ಕೆಳ ಹಂತದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ.ಕೆಲವು ಕಡೆ ಬಿಇಒ,ಡಿಡಿಪಿಐಗಳು ದಕ್ಷ, ಪ್ರಾಮಾಣಿಕರಾಗಿದ್ದರೂ ಅಲ್ಲಿನ ಅಧಿಕಾರೇತರ ಸಿಬ್ಬಂದಿ ನಿಯಂತ್ರಣ ಕಷ್ಟವಾಗಿದೆ.ಅದರಲ್ಲೂ ಮಹಿಳಾ ಶಿಕ್ಷಕರೇ ಹೆಚ್ಚು ಸುಲಿಗೆಗೆ ಒಳಗಾಗುತ್ತಿದ್ದಾರೆ.ಕಚೇರಿಗೆ ಪದೇಪದೆ ಅಲೆದಾಡ ಲಾರದೆ ಕೇಳಿದಷ್ಟು ಹಣ ಕೊಟ್ಟು ಮಧ್ಯವ ರ್ತಿಗಳ ಮೂಲಕ ಕೆಲಸ ಮಾಡಿಸಿಕೊಳ್ಳುವುದು ಇವರಿಗೆ ಅನಿವಾರ್ಯ ಎನಿಸಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.