PUC ಪರೀಕ್ಷೆ ಯಲ್ಲಿ ಒಟ್ಟಿಗೆ ತಂದೆ ಮಗ ಪಾಸ್ – ಮಗನಿಗಿಂತ ಹೆಚ್ಚು ಅಂಕ ಪಡೆದ ತಂದೆ…..

Suddi Sante Desk

ಕೊಪ್ಪಳ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಮಗ ನಿಗಿಂತ ತಂದೆಯೊಬ್ಬರು ಹೆಚ್ಚು ಅಂಕಗಳನ್ನು ಪಡೆದು ಗಮನ ಸೆಳೆದಿದ್ದಾರೆ ಹೌದು ಒಂದು ಕಡೆಗೆ ಹಲವು ವಿದ್ಯಾರ್ಥಿಗಳು ಮನನೊಂದು ಆತ್ಮಹತ್ಯೆ ಮಾಡಿಕೊಂಡಿ ರುವುದು ನೋವಿನ ಸಂಗತಿಯಾಗಿದ್ದು ಆದರೆ ಇಪ್ಪತ್ತು ವರ್ಷಗಳ ಹಿಂದೆ ಪರೀಕ್ಷೆಯಲ್ಲಿ ಫೇಲಾದ ತಂದೆಯೊಬ್ಬರು ಮಗನೊಂದಿಗೆ ಅಭ್ಯಾಸ ಮಾಡಿ ಪರೀಕ್ಷೆ ಬರೆದಿರುವುದ ಲ್ಲದೇ ಪುತ್ರನಿಗಿಂತ ಹೆಚ್ಚು ಅಂಕ ಪಡೆದು ಪಾಸಾಗಿದ್ದಾರೆ.

ಕೊಪ್ಪಳ ನಗರಸಭೆ ಮಾಜಿ ಸದಸ್ಯ ಪ್ರಾಣೇಶ ಮಹೇಂದ್ರ ಕರ್ ಎಂಬುವರು 1999ರಲ್ಲಿ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಶಿಕ್ಷಣ ವಿಭಾಗದಲ್ಲಿ ದ್ವೀತಿಯ ಪಿಯುಸಿ ಮುಗಿಸಿದ್ದಾರೆ. ಎಲ್ಲ ವಿಷಯಗಳಲ್ಲಿ ಪಾಸ್ ಆದರೂ ಇಂಗ್ಲಿಷ್ ನಲ್ಲಿ ಅನುತ್ತೀರ್ಣಗೊಂಡಿದ್ದರು.

2000ರಲ್ಲಿ ಮರು ಪರೀಕ್ಷೆ ಕಟ್ಟಿದರೂ ತೇರ್ಗಡೆಯಾಗಿ ರಲಿಲ್ಲ ಅಲ್ಲಿಗೆ ಪ್ರಯತ್ನ ಕೈ ಬಿಟ್ಟಿದ್ದರು.ಈ ವರ್ಷ ಇವರ ಪುತ್ರ ವಿನಾಯಕ ದ್ವಿತೀಯ ಪಿಯುಸಿ ಪೂರ್ಣಗೊಳಿಸಿ ದ್ದಾನೆ.ಮಗನೊಂದಿಗೆ ಪರೀಕ್ಷೆ ಕಟ್ಟಿದ ಪ್ರಾಣೇಶ್ ಇಂಗ್ಲಿಷ್ ನಲ್ಲಿ 40 ಅಂಕಗಳಿಸಿ ಪಾಸಾಗಿದ್ದಾರೆ.ಇವರು ಒಟ್ಟಾರೆ 344 ಅಂಕ ಪಡೆದಿದ್ದರೆ ಇವರ ಮಗ 333 ಅಂಕ ಪಡೆದಿದ್ದಾನೆ. ಮಗನಿಗಿಂತ 10 ಹೆಚ್ಚು ಅಂಕಗಳನ್ನು ಪಡೆದಿದ್ದು ಓದಿಗೆ ವಯಸ್ಸಿನ ಹಂಗಿಲ್ಲವೆಂದು ಸಾಬೀತು ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಪ್ರಾಣೇಶ ಮಹೇಂದ್ರಕರ್ ಅಂಕಗಳು ಜೀವನದ ಮಾನದಂಡವಲ್ಲ ಮೊದಲು ನಾನು ಫೇಲಾದೆ ಎಂಬ ಭಾವ ಇತ್ತು.ಅದನ್ನು ಬದಿಗಿಟ್ಟು ಜೀವನ ಕಟ್ಟಿಕೊಂಡಿದ್ದೇವೆ.ನನ್ನ ಮಗ ದ್ವಿತೀಯ ಪಿಯುಸಿ ಇದ್ದ ಕಾರಣ ಆತನೊಂದಿಗೆ ಪರೀಕ್ಷೆ ಕಟ್ಟಿ ಈಗ ಉತ್ತೀರ್ಣನಾಗಿ ರುವೆ.ಯಾವ ಮಕ್ಕಳು ನಪಾಸಾದವೆಂದು ಬೇಸರಿಸಿ ಕೊಂಡು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.