ಹುಬ್ಬಳ್ಳಿ –
ಕರ್ನಾಟಕಕ್ಕೆ ನಿರಂತರವಾಗಿ ಆಕ್ಸಿಜನ್ ತಲುಪಿಸುವ ನಿಟ್ಟಿನಲ್ಲಿ ಕೇಂದ್ರ ವಿದೇಶಾಂಗ ವ್ಯವಹಾರ ಸಚಿವಾ ಲಯದಿಂದ ಮೂರು 25 MT (75 ಟನ್) ಲಿಕ್ವಿಡ್ ಆಮ್ಲಜನಕದ ಕಂಟೇನರಗಳು ನಾಳೆ ಮುಂಬೈನ ನವಶೇವಾ ಬಂದರುಗೆ ಬಂದು ತಲುಪಲಿವೆ ನಂತರ ಅವುಗಳು ಧಾರವಾಡ ಜಿಲ್ಲೆಗೆ ಬರಲಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ
ಈ ದ್ರವ ಆಮ್ಲಜನಕವನ್ನು ಧಾರವಾಡ, ಬೆಳಗಾವಿ, ಹಾವೇರಿ, ಗದಗ, ಬಾಗಲಕೋಟ ಜಿಲ್ಲೆಗಳ ಆಸ್ಪತ್ರೆಗ ಳಿಗೆ ನೀಡಲಾಗುವದು.ತುರ್ತು ಸಂದರ್ಭದಲ್ಲಿ ಕೇಂ ದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರ ವಿನಂತಿ ಯ ಮೇರೆಗೆ ನಮ್ಮ ಜಿಲ್ಲೆಗಳಿಗೆ ಆಮ್ಲಜನಕ ವ್ಯವಸ್ಥೆ ಮಾಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ, ಆಮ್ಲಜನಕ ಹಂಚಿಕೆ ಮಾಡುತ್ತಿರುವ ಕೇಂದ್ರ ಸಚಿವ ರಾದ ಪಿಯುಶ್ ಗೋಯಲ್ ಅವರಿಗೆ ಹಾಗೂ ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಇವರಿಗೆ ಧನ್ಯವಾದಗಳನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ