JDS ಪಕ್ಷದಿಂದ ನಾಲ್ವರ ಉಚ್ಚಾಟನೆ ಮಾಡಿದ ಜಯಾನಂದ ಜಾವಣ್ಣನವರ – ಜಿಲ್ಲಾಧ್ಯಕ್ಷರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದಕ್ಕಾಗಿ ಅಮಾನತು ಶಿಕ್ಷೆ…..

Suddi Sante Desk

ಹಾವೇರಿ –

ಜೆಡಿಎಸ್‌ ಜಿಲ್ಲಾ ಅಧ್ಯಕ್ಷರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿ ದಕ್ಕಾಗಿ ನಾಲ್ವರನ್ನು ಅಮಾನತು ಮಾಡಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.ಪಕ್ಷ ವಿರೋಧಿ ಚಟುವಟಿಕೆ ಗಳಲ್ಲಿ ತೊಡಗಿರುವ ಮಾಹಿತಿ ಮೇರೆಗೆ ಉಮೇಶ ತಳವಾರ,ಮಾಂತೇಶ ಶಿಡಗನಾಳ,ರವಿ ಭತ್ತದ, ಮಲ್ಲಿಕಾರ್ಜುನ ಬೇವಿನಮರದ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಜಯಾನಂದ ಜಾವಣ್ಣನವರ ಹೇಳಿದರು.ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಜೆಡಿಎಸ್‌ ಕಾರ್ಯಕರ್ತರು ಪಕ್ಷದ ನಿಯಮಾವಳಿಗೆ ಬದ್ಧರಾಗಿರ ಬೇಕು.ವರಿಷ್ಠರ ಸೂಚನೆ ಆದೇಶಗಳನ್ನು ತಪ್ಪದೇ ಪಾಲಿಸ ಬೇಕು.ಆದರೆ ಈ ನಾಲ್ವರು ಶಿಸ್ತು ನಡವಳಿಕೆ ಮತ್ತು ಬದ್ಧತೆ ಯನ್ನು ಮೀರಿ ಪಕ್ಷದ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ.ನನ್ನ ಬಗ್ಗೆ ವಾಟ್ಸ್‌ ಆಪ್‌ ಗ್ರೂಪ್‌ಗಳಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.ಈ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿತ್ತು.ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಈ ನಾಲ್ವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದ್ದಾರೆ ಎಂದರು.

ಈ ಒಂದು ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಹಲಗೇರಿ,ಬಸವನಗೌಡ ಸಿದ್ದಪ್ಪಗೌಡ, ಕೆ.ಎಂ.ಸುಂಕದ,ಆರ್‌.ಬಿ.ಪಾಟೀಲ,ಪ್ರಕಾಶ ಬಾರ್ಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.