ಕೊಪ್ಪಳ –
ಮಹಾಮಾರಿ ಕೋವಿಡ್ ಗೆ ರಾಜದಲ್ಲಿ ತಹಶೀಲ್ದಾರ್ ರೊಬ್ಬರು ಬಲಿಯಾಗಿದ್ದಾರೆ. ಹೌದು ವೇದವ್ಯಾಸ್ ಮುತಾಲಿಕ್ ಮಹಾಮಾರಿ ಕೋವಿಡ್ ಗೆ ಬಲಿಯಾ ದ ಅಧಿಕಾರಿಯಾಗಿದ್ದಾರೆ.ಈ ಹಿಂದೆ ಇಲಕಲ್ ನಲ್ಲಿ ತಹಶೀಲ್ದಾರ ಆಗಿ ಸದ್ಯ ಮನೆಯಲ್ಲಿದ್ದರು.ಹದಿನೈದು ದಿನಗಳ ಹಿಂದೆ ಇವರಿಗೆ ಕರೋನಾ ಸೋಂಕು ಕಾಣಿ ಸಿಕೊಂಡು ನಂತರ ಚಿಕಿತ್ಸೆಗಾಗಿ ಕೊಪ್ಪಳದಲ್ಲಿ ಖಾಸ ಗಿ ಆಸ್ಪತ್ರೆಗೆ ದಾಖಲಾಗಿದ್ದರು.ಕಳೆದ 12 ದಿನಗಳಿಂದ ಕೊಪ್ಪಳದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಚಿಕಿತ್ಸೆ ಫಲಿಸ ದೇ ಇಂದು ಮೃತರಾಗಿದ್ದಾರೆ.

ಕೊಪ್ಪಳದ ಜಿಲ್ಲೆಯವ ರಾಗಿರುವ ಇವರು ಕುಷ್ಟಗಿ ತಹಶೀಲ್ದಾರ ಕಚೇರಿಯಲ್ಲಿ ಶಿರಸ್ತೆದಾರರಾಗಿ ಹನು ಮನಾಳದಲ್ಲಿ ಉಪ ತಹಶೀಲ್ದಾರ ಆಗಿ ನಂತರ ಕೊಪ್ಪಳದ ತರಭೇತಿ ಸಂಸ್ಥೆಯಲ್ಲಿ ಉಪ ಪ್ರಾಚಾ ರ್ಯರಾಗಿ ಸೇವೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇನ್ನೂ ಇವರ ನಿಧನಕ್ಕೆ ನಾಡಿನ ಕಂದಾಯ ಇಲಾಖೆ ಯ ಅಧಿಕಾರಿಗಳು ನೌಕರರು ಸಿಬ್ಬಂದಿ ವರ್ಗ ಹಾಗೇ ಕೊಪ್ಪಳದ ಇಲಕಲ್ಲ್ ನ ಕಚೇರಿಯ ಸಿಬ್ಬಂದಿ ಗಳು ಆಪ್ತರು ಸೇರಿದಂತೆ ಹಲವರು ಸಂತಾಪವನ್ನು ಸೂಚಿಸಿದ್ದಾರೆ.
ಮಂಜುನಾಥ ಸರ್ವಿ ವರದಿಗಾರರು ಸುದ್ದಿ ಸಂತೆ ನ್ಯೂಸ್ ಡೆಸ್ಕ್