ಕಲಘಟಗಿ –
ಮಹಾಮಾರಿ ಕೋವಿಡ್ ಗೆ ಧಾರವಾಡ ಜಿಲ್ಲೆಯಲ್ಲಿ ಮತ್ತೊರ್ವ ಶಿಕ್ಷಕಿ ಸಾವಿಗೀಡಾಗಿದ್ದಾರೆ. ಹೌದು ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿಕ್ಷಕಿ ಎನ್ ಎಮ್ ಜಾಫರಬಾಯಿ ಮೃತರಾದ ಶಿಕ್ಷಕಿಯಾಗಿದ್ದಾರೆ.

ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಎನ್ ಎಮ್ ಜಾಫರಭಾಯಿ ನಿಧನರಾದವರಾಗಿದ್ದಾರೆ. ಕೋವಿಡ್ ಸೋಂಕು ಕಾಣಿಸಿಕೊಂಡ ನಂತರ ಇವರು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಚಿಕಿತ್ಸೆ ಫಲಿಸ ದೇ ಮೃತರಾಗಿದ್ದಾರೆ

ಇನ್ನೂ ಮೃತರಾದ ಶಿಕ್ಷಕಿಗೆ ಕಲಘಟಗಿ ತಾಲ್ಲೂಕಿನ ಶಿಕ್ಷಕ ಬಳಗ ಮತ್ತು ಶಾಲೆಯ ಶಿಕ್ಷಕರು ಭಾವಪೂ ರ್ಣ ನಮನ ಸಲ್ಲಿಸಿ ಸಂತಾಪ ಸೂಚಿಸಿದ್ದಾರೆ.ಇದ ರೊಂದಿಗೆ ಶಿಕ್ಷ ಬಂಧುಗಳಾದ ಪವಾಡೆಪ್ಪ,ಅಶೋಕ ಸಜ್ಜನ, ಗುರು ತಿಗಡಿ, ಎಸ್ ಎಫ್ ಪಾಟೀಲ, ಶರಣು ಪೂಜಾರ, ಬಾಬಾಜಾನ ಮುಲ್ಲಾ, ನಂದಕುಮಾರ ದ್ಯಾಪೂರ, ರಾಜೀವಸಿಂಗ ಹಲವಾಯಿ, ಅಕ್ಬರಲಿ ಸೋಲಾಪುರ,ಶಂಕರ ಘಟ್ಟಿ, ಕಾಶಪ್ಪ ದೊಡವಾಡ ಸಿ ಎಂ ಹೂಲಿ,ಎಲ್ ಐ ಲಕ್ಕಮ್ಮನವರ ಮಲ್ಲಿಕಾ ರ್ಜುನ ಉಪ್ಪಿನ, ಬೂದಿಹಾಳ ಚಂದ್ರಶೇಖರ್ ಶೆಟ್ರು, ಶರಣಬಸವ ಬನ್ನಿಗೋಳ, ಆರ್ ನಾರಾ ಯಣ ಸ್ವಾಮಿ ಚಿಂತಾಮಣಿ, ಜಿ ಟಿ ಲಕ್ಷ್ಮೀದೇವಮ್ಮ ಎಂ ವಿ ಕುಸುಮ, ವಿ ಎನ್ ಕೀರ್ತಿವತಿ, ಜೆ ಟಿ ಮಂಜುಳಾ,ಸಂಗಮೇಶ ಖನ್ನಿನಾಯ್ಕರ್,ಸೇರಿದಂತೆ ಹಲವರು ಸಂತಾಪವನ್ನು ಸೂಚಿಸಿದ್ದಾರೆ