ಒಂದೇ ದಿನ ರಾಜ್ಯದಲ್ಲಿ ಇಬ್ಬರು ಹಿರಿಯ ಅಧಿಕಾರಿಗಳ ಬಂಧನ ಬಂಧನದ ಬೆನ್ನಲ್ಲೇ ಇಬ್ಬರು ಅಧಿಕಾರಿಗಳ ಅಮಾನತು…..

Suddi Sante Desk

ಬೆಂಗಳೂರು –

ಒಂದೇ ದಿನ ರಾಜ್ಯದಲ್ಲಿ ಇಬ್ಬರು ಹಿರಿಯ ಅಧಿಕಾರಿಗಳನ್ನು ಬಂಧನ ಮಾಡಿದ ಬೆನ್ನಲ್ಲೇ ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.ಹೌದು ಡಿಸಿ ಮಂಜುನಾಥ್ ಹಾಗೂ ಎಡಿಜಿಪಿ ಅಮೃತ್ ಪೌಲ್ ಅವರನ್ನು ಸಸ್ಪೆಂಡ್ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ.ಇನ್ನು ಒಂದೇ ದಿನ ಭ್ರಷ್ಟಾಚಾರದ ಆರೋಪ ಮೇಲೆ IAS,IPS ಅಧಿಕಾರಿಗ ಳನ್ನು ಬಂಧಿಸಲಾಗಿತ್ತು.ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅರಗ ಜ್ಞಾನೇಂದ್ರ, IPS ಅಧಿಕಾರಿ ಅಮೃತ್ ಪೌಲ್ ಅವರನ್ನು ಬಂಧಿಸಲಾಗಿದೆ.ಅಕ್ರಮದ ಆರೋಪ ಹಿನ್ನೆಲೆ ತನಿಖೆ ನಡೆಸಿದ್ದೇವೆ.ಸಿಐಡಿ ತಂಡ 2 ಗಂಟೆಯಲ್ಲಿ ಒಬ್ಬರನ್ನು ಅರೆಸ್ಟ್ ಮಾಡಿತ್ತು.ಕಲಬುರಗಿಗೆ ತೆರಳಿ ಬಂಧಿ ಸಿತ್ತು ಬ್ರೋಕರ್ ಹಾಗೂ ಹಣ ಕೊಟ್ಟವರನ್ನ ಬಂಧಿಸಲಾ ಗಿದೆ.ಪ್ರಕರಣದ ಬಗ್ಗೆ ಪಾರದರ್ಶಕವಾಗಿ ವಿಚಾರಣೆ ನಡೆದಿದೆ.ಇದರಲ್ಲಿ ಸರ್ಕಾರದ ಹಸ್ತಕ್ಷೇಪವಿರಲಿಲ್ಲ ಎಂದರು.

ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ರಾಜ್ಯ ಆಂತರಿಕಾ ಭದ್ರತಾ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಅವರನ್ನು ಸಿಐಡಿ‌ ಪೊಲೀಸರು ಬಂಧಿಸಿದ್ದಾರೆ.ಈ ಮೂಲಕ ಇಷ್ಟು ದಿನಗಳ ಕಾಲ ಕೆಳ ಹಂತದ ಅಧಿಕಾರಿ- ಸಿಬ್ಬಂದಿಯನ್ನ ಬಂಧನ ಮಾಡುತ್ತಿದ್ದ ಪೊಲೀಸರು‌ ಇದೀಗ ಹಿರಿಯ ಐಪಿಎಸ್ ಅಧಿಕಾರಿಯನ್ನು ಬಂಧಿಸಿದ್ದು ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಂಡಿದೆ.ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪೌಲ್ ಅವರ ವಿರುದ್ಧ ಅಕ್ರಮ ಆರೋಪ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಗೃಹ ಇಲಾಖೆ ವರ್ಗಾವಣೆ ಮಾಡಿತ್ತು.

ಇನ್ನು ಇಂದು ಡಿವೈಎಸ್ಪಿ ಶೇಖರ್ ಅಂಡ್ ಟೀಂ ಎಡಿಜಿಪಿ ಅಮೃತ್ ಪೌಲ್ ಅವರನ್ನು ಕೋರ್ಟ್‌ಗೆ ಕರೆತರಲಾಗಿದೆ. ಸಿಐಡಿ ತಂಡ ಎಡಿಜಿಪಿ ಜೊತೆ ಮತ್ತೆ ನಾಲ್ವರು ಆರೋಪಿ ಗಳನ್ನು ಕೋರ್ಟ್ ಗೆ ಹಾಜರು ಪಡಿಸಿದೆ.ಈಗಾಗಲೇ ಬಂಧಿತರಾಗಿ ಜೈಲಿನಲ್ಲಿರೋ ನಾಲ್ವರನ್ನು ಬಾಡಿ ವಾರೆಂಟ್ ಮೇಲೆ ಸಿಐಡಿ ವಶಕ್ಕೆ ಪಡೆದಿತ್ತು.

ಇತ್ತ ಐಎಎಸ್ ಅಧಿಕಾರಿ ಲಂಚ ಪಡೆದ ಪ್ರಕರಣದಲ್ಲಿ ಡಿಸಿ ಮಂಜುನಾಥ್ ಅರೆಸ್ಟ್

ಹೌದು 5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೆಂಗಳೂರು ನಗರದ ಹಿಂದಿನ ಡಿಸಿ ಮಂಜುನಾಥ್ ರನ್ನು ಎಸಿಬಿ ಅಧಿಕಾರಿ ಗಳು ಬಂಧಿಸಿದ್ದಾರೆ.ಹೈಕೋರ್ಟ್ ಚಾಟಿ ಬೀಸಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಇಬ್ಬರು ಅಧಿಕಾರಿಗಳನ್ನು ಬಂಧಿಸಲಾಗಿದೆ.ಡಿಸಿ ಮಂಜುನಾಥ್ ಅವರನ್ನು ಯಶವಂ ತಪುರ ಫ್ಲಾಟ್ ನಲ್ಲಿ ಬಂಧಿಸಲಾಗಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ಸ್ಥಾನದಿಂದ ಎತ್ತಂಗಡಿ ಮಾಡಿರುವ ಜೆ ಮಂಜುನಾಥ್ ಅವರನ್ನು ಮಕ್ಕಳ ಹಕ್ಕು ಗಳ ಸಂರಕ್ಷಣೆ ಯೋಜನೆಯ ನಿರ್ದೇಶಕರ ಹುದ್ದೆಗೆ ವರ್ಗಾ ಯಿಸಿದೆ.ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಂಗಪ್ಪ ಅವರಿಗೆ ಬೆಂಗ ಳೂರು ನಗರ ಜಿಲ್ಲಾಧಿಕಾರಿ ಜವಾಬ್ದಾರಿಯನ್ನು ಹೆಚ್ಚುವರಿ ಯಾಗಿ ನೀಡಲಾಗಿದೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅರಗ ಜ್ಞಾನೇಂದ್ರ IPS ಅಧಿಕಾರಿ ಅಮೃತ್ ಪೌಲ್ ಅವರನ್ನು ಬಂಧಿಸಲಾಗಿದೆ.ಅಕ್ರಮದ ಆರೋಪ ಹಿನ್ನೆಲೆ ತನಿಖೆ ನಡೆಸಿದ್ದೇವೆ.ಸಿಐಡಿ ತಂಡ 2 ಗಂಟೆಯಲ್ಲಿ ಒಬ್ಬರನ್ನು ಅರೆಸ್ಟ್ ಮಾಡಿತ್ತು.ಕಲಬುರಗಿಗೆ ತೆರಳಿ ಬಂಧಿಸಿತ್ತು ಬ್ರೋಕರ್ ಹಾಗೂ ಹಣ ಕೊಟ್ಟವರನ್ನ ಬಂಧಿಸಲಾಗಿದೆ. ಪ್ರಕರಣದ ಬಗ್ಗೆ ಪಾರದರ್ಶಕವಾಗಿ ವಿಚಾರಣೆ ನಡೆದಿದೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪವಿರಲಿಲ್ಲ ಎಂದು ಅರಗ ಜ್ಞಾನೇಂದ್ರ ಹೇಳಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.