ಕೃಷಿ ಯಲ್ಲಿ ಯಶಸ್ಸು ಕಂಡ ಹಳ್ಳಿ ಮೇಷ್ಟ್ರು – 70 ರ ಹರೆತದಲ್ಲೂ ಕೃಷಿ ಯಲ್ಲಿ ಸಾಧನೆ ಮಾಡಿ ಮಾದರಿ ಆಗಿದ್ದಾರೆ ನಾಗೇಂದ್ರಯ್ಯ ಹಿರೇಮಠ…..

Suddi Sante Desk

ಹಾವೇರಿ –

ಬ್ಯಾಡಗಿ ತಾಲ್ಲೂಕಿನ ತುಮರಿಕೊಪ್ಪ ಗ್ರಾಮದ ನಿವೃತ್ತ ಪ್ರೌಢಶಾಲಾ ಸಹ ಶಿಕ್ಷಕ ನಾಗೇಂದ್ರಯ್ಯ ಅಜ್ಜಯ್ಯ ಹಿರೇ ಮಠ ತಮ್ಮ 70ರ ಹರೆಯದಲ್ಲಿಯೂ ಕೃಷಿಯಲ್ಲಿ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ.ಹೌದು ಮನಸ್ಸು ಮಾಡಿ ದರೆ ಏನಾದರೂ ಮಾಡಬಹುದು ಎಂಬೊದಕ್ಕೆ ಇವರೇ ಸಾಕ್ಷಿಯಾಗಿದ್ದು ಇವರ ಸಾಧನೆಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯ 2016-17ರಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.ಹರಿಹರದ ಎಂಆರ್‌ಬಿ ಪ್ರೌಢಶಾಲೆ ಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕೆಲಸ ನಿರ್ವಹಿಸಿ ನಿವೃತ್ತರಾದ ಬಳಿಕ ಗ್ರಾಮದಲ್ಲಿ ವಾಸವಾಗಿದ್ದು ತಮ್ಮ 4 ಎಕರೆ ಜಮೀನಿ ನಲ್ಲಿ ಸಮಗ್ರ ಕೃಷಿ ಅಳವಡಿಸಿಕೊಂಡು ಸಾಂಪ್ರದಾಯಿಕ ಕೃಷಿಗೆ ಆದ್ಯತೆ ನೀಡಿದ್ದಾರೆ.

ಎರೆಹುಳು ಗೊಬ್ಬರ,ಕೂಲಿ ಕಾರ್ಮಿಕ ರಹಿತ ಬೇಸಾಯಕ್ಕೆ ಒತ್ತು ನೀಡಿದ್ದಾರೆ.ಕಳೆದ ವರ್ಷ ಒಂದೂವರೆ ಎಕರೆ ಜಮೀ ನಿನಲ್ಲಿ ದೇಸಿ ಭತ್ತದ ತಳಿಗಳಾದ ಬರ್ಮಾಬ್ಲ್ಯಾಕ್‌, ಸಿದ್ರಾ ಸನ್‌,ರಾಜಮುಡಿ, ದೊಡ್ಡ ಬೀರುನೆಲ್ಲಿ ಬೆಳೆದಿದ್ದಾರೆ.ಈ ಪೈಕಿ ರಾಜಮುಡಿ ಕೆಂಪು ಅಕ್ಕಿಯಾಗಿದ್ದು ಇದನ್ನು ಕ್ಯಾನ್ಸರ್‌, ಮಧುಮೇಹ ರೋಗ ನಿಯಂತ್ರಣಕ್ಕಾಗಿ ಹೆಚ್ಚು ಬಳಸು ತ್ತಾರೆ.

ರಾಜಮುಡಿ ಅಕ್ಕಿಯನ್ನು ವಿದೇಶಗಳಿಗೂ ರಪ್ತು ಮಾಡಲಾ ಗುತ್ತದೆ.ಪ್ರತಿ ಎಕರೆಗೆ 25 ಕ್ವಿಂಟಲ್‌ ಇಳುವರಿ ಬಂದಿದ್ದು, ಮಾರುಕಟ್ಟೆಯಲ್ಲಿ ತುಂಬಾ ಬೇಡಿಕೆ ಇದೆ. ಪಾಲಿಶ್‌ ಮಾಡದೆ ಈ ಅಕ್ಕಿಯನ್ನು ಬಳಸಿದ್ದಲ್ಲಿ ಹೇರಳವಾಗಿ ಪೋಷಕಾಂಶಗಳು ಲಭ್ಯವಾಗಲಿವೆ. ಪ್ರತಿ ಕ್ವಿಂಟಲ್‌ಗೆ ಭತ್ತಕ್ಕೆ ₹5,000 ರಂತೆ,ಅಕ್ಕಿ ಪ್ರತಿ ಕೆ.ಜಿಗೆ ₹80ರಂತೆ ಮಾರಾಟವಾಗುತ್ತದೆ ಎಂದು ನಾಗೇಂದ್ರಯ್ಯ ಹಿರೇಮಠ ಮಾಹಿತಿ ನೀಡಿದರು.

ಹೊಲದಲ್ಲಿ ಸೋಲಾರ್‌ ಅಳವಡಿಸಿದ್ದು ಬೆಳಕು ಹಾಗೂ ಟಿ.ವಿ.ಗಳನ್ನು ವೀಕ್ಷಣೆಗೆ ಬಳಸಲಾಗುತ್ತದೆ.ಕೃಷಿ ಹೊಂಡ ನಿರ್ಮಿಸಿದ್ದು,ಅದರ ಸುತ್ತಲೂ ರೇಷ್ಮೆ ಸೊಪ್ಪು ಹಾಗೂ ಚೊಗಚೆ ಬೆಳೆಯಲಾಗಿದೆ.ಜಾನುವಾರುಗಳ ಹಾಲು ಉತ್ಪಾದನೆಗೆ ಬಳಸಲಾಗುತ್ತದೆ.ಕಳೆದ ವರ್ಷ ವೆಲ್ಲೆಟ್‌ ಬೀನ್ಸ್‌ ಬೆಳೆಯಲಾಗಿದ್ದು,ಅದು ಸೂರ್ಯನ ಕಿರಣಗಳು ಭೂಮಿಗೆ ತಾಗದಂತೆ ತಡೆಯುತ್ತವೆ.ಇದರಿಂದ ಕಳೆ ಬೆಳೆ ಯಲು ಅವಕಾಶ ಸಿಗದಂತಾಗುತ್ತದೆ.300 ಗ್ರಾಂನಿಂದ ಈಗ 50 ಕೆ.ಜಿ. ವೆಲ್ಲೆಟ್‌ ಬೀನ್ಸ್‌ ಬೆಳೆಯಲಾಗಿದೆ ಎಂದು ಅವರು ವಿವರಿಸಿದರು.

ವಿಜ್ಞಾನ ಶಿಕ್ಷಕರಾಗಿದ್ದ ಅವರು ದೇಸಿ ತಳಿಗಳಾದ ದೊಡ್ಡ ಭತ್ತ,ರಾಗಿ,ನವಣಿಯನ್ನು ಸಂರಕ್ಷಣೆ ಮಾಡಿದ್ದಾರೆ. ಸಹಾ ಯಕ್ಕೆ ಒಬ್ಬರನ್ನು ಮಾತ್ರ ಬಳಸಿಕೊಂಡು ಎಲ್ಲಾ ಕೆಲಸ ಗಳನ್ನು ತಾವೇ ಮಾಡುತ್ತಿದ್ದಾರೆ.ಹರಿಹರದಲ್ಲಿ ತಾವಿದ್ದ ಮನೆಯನ್ನು ಪ್ರತಿಭಾನ್ವಿತ ಬಡ ಮಕ್ಕಳಿಗೆ ಉಳಿದು ಕೊಳ್ಳಲು ನೀಡುವ ಮೂಲಕ ಮಾನವೀಯತೆ ಮೆರೆದಿ ದ್ದಾರೆ.

150 ಅಡಿಕೆ ಹಚ್ಚಿದ್ದು ಅವುಗಳಲ್ಲಿ 80 ಫಲ ನೀಡುತ್ತಿವೆ. ಇದರಿಂದ ನಿರಂತರ ಆದಾಯ ಹೆಚ್ಚಲಿದೆ.ಈಗ ಅದರಲ್ಲಿ ಕಾಳು ಮೆಣಸು ಹಾಗೂ ಎಲೆ ಬಳ್ಳಿ ಹಾಕಲಾಗಿದೆ.200 ಬಾಳೆ ಗಿಡಗಳನ್ನು ಹಚ್ಚಲಾಗಿದೆ.ಪ್ರತಿ ವರ್ಷ ಎಲ್ಲಾ ಖರ್ಚು ತೆಗೆದು ₹3 ಲಕ್ಷ ಆದಾಯ ಬರುತ್ತದೆ.

ಡೀಸೆಲ್‌ ಪಂಪ್‌ ಬಳಸಿ ಹನಿ ಹಾಗೂ ತುಂತುರು ನೀರಾ ವರಿ ಅಳವಡಿಸಲಾಗಿದೆ.ಜೀವನಕ್ಕೆ ಬೇಕಾಗುವ ಪದಾರ್ಥ ಗಳನ್ನು ತಮ್ಮ ಹೊಲದಲ್ಲಿಯೇ ಕಂಡುಕೊಂಡಿದ್ದುಆದಾಯ ಹೆಚ್ಚಿಸಿಕೊಂಡಿದ್ದಾರೆ.ಆಧುನಿಕತೆಯ ತಾಂತ್ರಿಕತೆಯನ್ನು ಸಂಪೂರ್ಣವಾಗಿ ಬಳಸಿಕೊಂಡಿರುವುದು ನಾಗೇಂದ್ರಯ್ಯ ಹಿರೇಮಠರ ವಿಶೇಷ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.