ಬಾಗಲಕೋಟೆ –
ಕೋವಿಡ್ ಗೆ ನಗರಸಭೆ ಅಧ್ಯಕ್ಷ ಮತ್ತು ರಾಷ್ಟ್ರೀಯ ಕುಸ್ತಿ ಪಟು ಒಬ್ಬರು ಸಾವಿಗೀಡಾದ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ

ಮುಧೋಳ ನಗರಸಭೆ ಅಧ್ಯಕ್ಷ ಸಂಜು(ಸಿದ್ದನಾಥ) ಮಾನೆ ಮೃತರಾದ ದುರ್ದೈವಿಗಳಾಗಿದ್ದಾರೆ.32 ವರ್ಷ ದ ಸಂಜು ಮಾನೆಗೆ ಸೋಂಕು ಕಾಣಿಸಿತ್ತು.ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ

ಬಾಗಲಕೋಟೆ ಜಿಲ್ಲೆಯ ಮುಧೋಳ ನಗರಸಭೆಯ ಅಧ್ಯಕ್ಷರಾಗಿದ್ದು ರಾಷ್ಟ್ರೀಯ ಕುಸ್ತಿ ಪಟು ಆಗಿದ್ದರು. ಮಹಾಮಾರಿ ಕುಸ್ತಿಪಟುವನ್ನು ಬಲಿ ತೆಗೆದುಕೊಂಡಿ ದೆ. ಇನ್ನೂ ಇವರು ಧಾರವಾಡದ ಜೆಎಸ್ಎಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು ನಿಧನಕ್ಕೆ ಕಾಲೇಜಿ ನ ಮುಖ್ಯಸ್ಥರಾದ ನ ವಜ್ರಕುಮಾರ್,ಅಜೀತ್ ಕುಮಾರ್, ಜೀನಪ್ಪ ಕುಂದಗೋಳ, ಮಹಾವೀರ ಉಪಾಧ್ಯಾಯ, ಜೀನದತ್ತ ಹಡಗಲಿ,ರಜನಿ ದಾಸ್ ಚನ್ನು ,ಸೂರಜ್ ಪ್ರಸಾದ್,ವಿದ್ಯಾ ಕೊಲ್ಹಾಪುರಿ, ಶ್ರೀಮತಿ ಸಾಧನಾ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.