ಬೆಳ್ಳಂ ಬೆಳಿಗ್ಗೆ ರಾಜ್ಯದಲ್ಲಿ ಶಾಲಾ ಆವರಣದ ವಿದ್ಯುತ್ ತಂತಿಗೆ ಮತ್ತೊರ್ವ ವಿದ್ಯಾರ್ಥಿ ಬಲಿ ಎಷ್ಟೇ ಹೇಳಿದರು ಇನ್ನೂ ತೆರುವಾಗದ ವಿದ್ಯುತ್ ತಂತಿಗಳು…..

Suddi Sante Desk

ರಾಯಚೂರು –

ಶಾಲಾ ಆವರಣದಲ್ಲಿ ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿ ಯೊರ್ವ ಸಾವಿಗೀಡಾದ ಘಟನೆ ರಾಯಚೂರಿನಲ್ಲಿ ನಡೆದಿದೆ.ಹೌದು ಜಿಲ್ಲೆಯ ಲಿಂಗಸೂರು ತಾಲ್ಲೂಕಿನ ಕಿಲ್ಲಾರಹಟ್ಟಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದ್ದು ವಿದ್ಯುತ್ ತಂತಿ ತಗುಲಿ ಶಾಲಾ ಆವರಣದಲ್ಲಿ ಆಟವಾಡ್ತಿದ್ದ ವಿದ್ಯಾರ್ಥಿ ಸಾವಿಗೀಡಾಗಿದ್ದಾನೆ.ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಕಿಲ್ಲಾರಹಟ್ಟಿ ಗ್ರಾಮದಲ್ಲಿನ ಸರ್ಕಾರಿ ಶಾಲೆಯಲ್ಲಿ ಈ ಒಂದು ಘಟನೆ ನಡೆದಿದೆ.

ಕಿಲ್ಲಾರಹಟ್ಟಿ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಮಲ್ಲಿಕಾ ರ್ಜುನ ಮೃತನಾಗಿರುವ ಬಾಲಕನಾಗಿದ್ದಾನೆ.ಶಾಲಾ ಆವರಣದಲ್ಲಿ ಕ್ರಿಕೇಟ್ ಆಡುವಾಗ ಚೆಂಡು ತರಲು ಹೋಗಿದ್ದ ಬಾಲಕ ಮಲ್ಲಿಕಾರ್ಜುನ ನಿರ್ಮಾಣ ಹಂತದಲ್ಲಿ ರುವ ಬಿಸಿಯೂಟದ ಕೋಣೆಯ ಮೇಲಿನ ವಿದ್ಯುತ್ ತಂತಿ ತಗುಲಿ ಸಾವಿಗೀಡಾಗಿದ್ದಾರೆ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇನ್ನೂ ಈ ಒಂದು ವಿಚಾರ ಕುರಿತಂತೆ ಈಗಾಗಲೇ ಶಿಕ್ಷಣ ಇಲಾಖೆ ಶಾಲಾ ಆವರಣದಲ್ಲಿನ ವಿದ್ಯುತ್ ತಂತಿಗಳನ್ನು ತೆರುವುಗೊಳಿ ಸುವಂತೆ ಖಡಕ್ ಸೂಚನೆಯನ್ನು ನೀಡಿದ್ದು ಆದರೂ ಕೂಡಾ ಈವರೆಗೆ ಅಲ್ಲಲ್ಲಿ ವಿದ್ಯುತ್ ತಂತಿಗಳನ್ನು ತೆರುವು ಗೊಳಿಸಿಲ್ಲ ಎಂಬೊದಕ್ಕೆ ಈ ಒಂದು ಘಟನೆ ಸಾಕ್ಷಿಯಾ ಗಿದ್ದು ಬಾಲಕನ ಸಾವಿಗೆ ಕಾರಣರಾರು ಎಂಬೊದಕ್ಕೆ ವಿದ್ಯುತ್ ಇಲಾಖೆಯ ಅಧಿಕಾರಿಗಳೇ ಉತ್ತರಿಸಬೇಕು.

ಚಕ್ರವರ್ತಿ ಜೊತೆ ಮಂಜುನಾಥ,ಪರಶುರಾಮ ಗೌಡರ ಸುದ್ದಿ ಸಂತೆ ನ್ಯೂಸ್ ರಾಯಚೂರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.