ಬೆಳಗಾವಿ –
ಬೆಳಗಾವಿಯ ಖಾನಾಪೂರ ರಸ್ತೆಯ ಅನಮೋಲ್ ಚೇಕ್ ಪೊಸ್ಟ್ ನಲ್ಲಿ ಭಯಾನಕ ಅಪಘಾತವೊಂದು ನಡೆದಿದೆ. ಅರಣ್ಯ ಇಲಾಖೆಯ ಈ ಒಂದು ಚೇಕ್ ಪೊಸ್ಟ್ ನಲ್ಲಿ ಅಕ್ರಮವಾಗಿ ಸಂಚರಿಸುವ ವಾಹನ ಗಳ ಪರಿಶೀಲನೆಗೆ ಒಂದು ಚೇಕಿಂಗ್ ಪೊಸ್ಟ್ ಮಾಡಲಾಗಿದೆ.
ಯಾವುದೇ ವಾಹನಗಳು ಬಂದರೆ ಅವುಗಳನ್ನು ಪರಿಶೀಲನೆ ಮಾಡಿ ಕಳಿಸಲಾಗುತ್ತದೆ.ಇದು ಸಾಮಾ ನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಚಾರ ಆದರೆ ಮೇ 22 ರಂದು ಮಧ್ಯಾಹ್ನ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಬೈಕ್ ನಲ್ಲಿ ಇಬ್ಬರು ಬೈಕ್ ಸವಾರರು ಹೊರಟಿರುತ್ತಾರೆ.
ಇವರು ಬರೊದನ್ನು ನೋಡಿದ ಅರಣ್ಯ ಇಲಾಖೆಯ ಸಿಬ್ಬಂದಿ ದೂರದಿಂದ ನಿಲ್ಲು ವಂತೆ ಸೂಚನೆ ಮಾಡು ತ್ತಾರೆ ಕೈ ಮಾಡಿ ಹೇಳುತ್ತಾರೆ ಅದನ್ನು ನೋಡಿ ನೋಡಲಾರದಂತೆ ಬೈಕ್ ಸವಾರ ವೇಗವಾಗಿ ಬರು ತ್ತಾನೆ.ಈ ಒಂದು ಸಮಯದಲ್ಲಿ ಚೇಕ್ ಪೊಸ್ಟ್ ಸಿಬ್ಬಂದಿ ಸ್ವಲ್ಪು ಮೇಲೆ ಬ್ಯಾರಿಕೇಡ್ ಏರಿಸಿ ಕೆಳಗೆ ಇಳಿಸುತ್ತಾರೆ.
ಇದನ್ನು ನೋಡಿದ ಬೈಕ್ ಸವಾರ ತಾನು ಸ್ವಲ್ಪು ಬೈಕ್ ಮೇಲೆ ಮಲಗಿಕೊಂಡು ವೇಗವಾಗಿದ್ದ ಬೈಕ್ ನ್ನು ತಗೆದುಕೊಂಡು ಪಾರಾಗುತ್ತಾನೆ ಆದರೆ ಬೈಕ್ ಸವಾರನ ಹಿಂದೆ ಕುಳಿತ ಯುವಕ ಕಬ್ಬಿಣದ ಬ್ಯಾರಿ ಕೇಡ್ ಗೆ ಬಡಿದು ಬೈಕ್ ನಿಂದ ಕೆಳಗೆ ಬೀಳುತ್ತಾನೆ ಅಲ್ಲದೇ ಮೃತರಾಗಿದ್ದು ಈ ಒಂದು ಅಪಘಾತದ ಭಯನಾಕ ದೃಶ್ಯ ಸಿಸಿ ಟಿವಿ ಯಲ್ಲಿ ಸೆರೆಯಾಗಿದೆ
ಇನ್ನೂ ಚೇಕ್ ಪೊಸ್ಟ್ ಬಂದ್ ಮಾಡಿದ್ದರು ಯಾಕೇ ಬೈಕ್ ಸವಾರ ಪಾರಾಗಲು ಯತ್ನಿಸಿದ ಕಾರಣ ಏನು ಈ ಕುರಿತಂತೆ ಹಲವು ಗುಸು ಗುಸು ಮಾತುಗಳು ಕೇಳಿ ಬರುತ್ತಿದ್ದು ಈ ಇಬ್ಬರು ಏನೋ ಒಂದು ದೊಡ್ಡ ಅಪರಾಧ ಕೃತ್ಯವನ್ನು ಮಾಡಿ ತಪ್ಪಿಸಿಕೊಳ್ಳಲು ಹೊರ ಟಿದ್ದರಂತೆ ಇವರನ್ನು ನಿಲ್ಲಿಸಲು ಹೇಳಿದ ಹಿನ್ನಲೆಯ ಲ್ಲಿ ಹೀಗಾಗಿ ಇವರನ್ನು ನಿಲ್ಲಿಸಲು ಅರಣ್ಯ ಇಲಾಖೆ ಯ ಸಿಬ್ಬಂದಿ ಚೇಕ್ ಪೊಸ್ಟ್ ಬಂದ್ ಮಾಡಿ ನಿಲ್ಲಿ ಸಲು ಮುಂದಾಗಿದ್ದರು ಎಂಬ ಮಾತುಗಳು ಕೇಳಿ ಬರುತ್ತಿದ್ದು ನಿಜವಾಗಿ ಹೀಗೆ ಯಾಕೇ ಆಯಿತು ಈ ಒಂದು ಪ್ರಶ್ನೆಗೆ ಸಂಬಂಧಿಸಿದ ಇಲಾಖೆಯವರೇ ಉತ್ತರಿಸಬೇಕಿದೆ.