ಧಾರವಾಡ –
ಕೋವಿಡ್ ವಿಚಾರದಲ್ಲಿ ಧಾರವಾಡ ತಹಶೀಲ್ದಾರ್ ಸಂತೋಷ ಬಿರಾದಾರ ಮತ್ತು ತಾಲ್ಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ರಾಘವೇಂದ್ರ ಅವರು ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.ಹೌದು ಗ್ರಾಮೀಣ ಪ್ರದೇಶ ಗಳಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಹೆಚ್ಚಾಗುತ್ತಿದೆ ಹೀಗಾಗಿ ಇದನ್ನು ನಿಯಂತ್ರಣ ಮಾಡಲು ಧಾರವಾಡ ಜಿಲ್ಲಾಡಳಿತ ಸಜ್ಜಾಗಿದ್ದು ಸಾಕಷ್ಟು ಪ್ರಮಾಣದಲ್ಲಿ ಕ್ರಮಗಳನ್ನು ಕೈಗೊಂಡಿದೆ ಎಂದರು

ಜಿಲ್ಲಾಧಿಕಾರಿ ಗಳ ಸೂಚನೆ ಮತ್ತು ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವರ ಒಂದು ಪ್ರಯತ್ನ ಮತ್ತು ಕಾಳಜಿಯಿಂದ ತಾಲ್ಲೂಕಿನ ಪ್ರತಿಯೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೋವಿಡ್ ಕೇರ್ ಕೇಂದ್ರ ಗಳನ್ನು ಆರಂಭ ಮಾಡಲಾಗಿದೆ ಇದನ್ನು ಸಾರ್ವಜನಿಕರು ಉಪಯೋಗ ಮಾಡಿಕೊಳ್ಳುವಂತೆ ವಿನಂತಿ ಮಾಡಿ ಕೊಂಡಿದ್ದಾರೆ

ಕರೋನ ಕ್ಕೆ ಹೆದರಿಕೊಂಡು ಸುಮ್ಮನೆ ಮನೆಯಲ್ಲಿ ಕುಳಿತುಕೊಂಡು ಮತ್ತೊಂದು ಎಡವಟ್ಟು ಸಮಸ್ಯೆ ಮಾಡಿಕೊಳ್ಳದೇ ಪಂಚಾಯತ ಮಟ್ಟದಲ್ಲಿ ಗ್ರಾಮಗಳಲ್ಲಿ ತೆರೆಯಲಾಗಿರುವ ಕೋವಿಡ್ ಕೇರ್ ಗಳ ಲಾಭ ತಗೆದುಕೊಳ್ಳುವಂತೆ ವಿನಂತಿಸಿಕೊಂಡಿ ದ್ದಾರೆ
ಧಾರವಾಡ ತಹಶೀಲ್ದಾರ್ ಮತ್ತು ತಾಲ್ಲೂಕು ಪಂಚಾಯತ ಅಧಿಕಾರಿ ಸೇರಿಕೊಂಡು ಈ ಒಂದು ವಿನಂತಿಯನ್ನು ಸಾರ್ವಜನಿಕರಲ್ಲಿ ಮಾಡಿಕೊಂಡಿ ದ್ದಾರೆ