ಬೆಂಗಳೂರು –
ಕೊನೆಗೂ ಕೋವಿಡ್ ನಿಂದಾಗಿ ರಾಜ್ಯದಲ್ಲಿ ಮೃತ ರಾದ ಶಿಕ್ಷಣ ಇಲಾಖೆಯ ನೌಕರರ ಕುಟುಂಬದ ಕಣ್ಣೀರನ್ನು ರಾಜ್ಯ ಸರ್ಕಾರ ಹೊರೆಸಿದೆ ಹೌದು ಕೊರೋನಾ ಸೋಂಕು ಸೇರಿದಂತೆ ಹಲವು ಕಾರಣ ಗಳಿಂದ ಮೃತಪಟ್ಟ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಕರ ಅವಲಂಬಿತರಿಗೆ ಅನುಕಂಪದ ನೌಕರಿಯ ಆದೇಶಗಳನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ವಿತರಿಸಿದರು.

ಹೌದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕೊರೋನಾದಿಂದ ಮೃತಪಟ್ಟ ಶಿಕ್ಷಕರ 130 ಮಂದಿ ಸಂಬಂಧಿಗಳಿಗೆ ಸಾಂಕೇತಿಕವಾಗಿ ಅನುಕಂಪದ ನೌಕರಿಯ ನೇಮಕಾತಿ ಪತ್ರಗಳನ್ನು ನೀಡಿದರು

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾತನಾಡಿ ಕೋವಿಡ್ ಸೋಂಕಿನಿಂದ ನಮ್ಮ ಶಿಕ್ಷಣ ಪರಿವಾರದ ಅನೇಕ ಮಂದಿ ಶಿಕ್ಷಕ ಬಂಧುಗಳು ನಮ್ಮನ್ನು ಅಗಲಿದ್ದು, ನಮ್ಮ ನಾಡಿಗೆ ಇದರಿಂದ ಅಪಾರ ನಷ್ಟವಾಗಿದೆ.ಮೃತ ಶಿಕ್ಷಕರ ಕುಟುಂಬಗಳಷ್ಟೇ ಅಲ್ಲ ನಮ್ಮ ನಾಡಿನ ಶಾಲಾ ಮಕ್ಕಳೂ ತಮ್ಮ ನೆಚ್ಚಿನ ಹಾಗೂ ಮೆಚ್ಚಿನ ಶಿಕ್ಷಕರನ್ನು ಕಳೆದುಕೊಂಡ ನೋವಿನಿಂದ ಇನ್ನೂ ಹೊರ ಬಂದಿ ಲ್ಲ ಇಂತಹ ಸಂದರ್ಭದಲ್ಲಿ ಶಿಕ್ಷಕರ ಕುಟುಂಬಗಳಿಗೆ ತಕ್ಷಣವೇ ಸ್ಪಂದಿಸುವ ಸಲುವಾಗಿ ಅನುಕಂಪದ ನೇಮಕಾತಿಯ ಪತ್ರವನ್ನು ಇಲಾಖೆ ನೀಡಿದೆ ಎಂದರು

ಇನ್ನೂ ದುಡಿಯುವ ಕೈಗಳನ್ನು ಕಳೆದುಕೊಂಡು ನೋವಿನಲ್ಲಿ ಮುಳುಗಿರುವ ಕುಟುಂಬಗಳಿಗೆ ಈ ನೇಮಕಾತಿ ಆದೇಶಗಳು ಆಸರೆಯಾಗಲಿದ್ದು ತನ್ನ ದೇ ಆದ ಪ್ರಾಮುಖ್ಯತೆ ಹೊಂದಿವೆ.ಇಂತಹ ಸಂಕಷ್ಟ ದ ಸಮಯದಲ್ಲಿ ಆರ್ಥಿಕ ಮುಗ್ಗಟ್ಟಿನಲ್ಲಿರುವ ಮೃತ ಶಿಕ್ಷಕ ಬಂಧುಗಳ ಕುಟುಂಬಗಳ ನೆರವಿಗೆ ಮುಂದಾ ಗುವುದು ನಮ್ಮ ಪ್ರಾಥಮಿಕ ಜವಾಬ್ದಾರಿ ಯಾಗಿದೆ ಎಂದು ಸುರೇಶ್ ಕುಮಾರ್ ಹೇಳಿದರು.

ಇದೇ ವೇಳೆ ನೇಮಕಾತಿ ಪತ್ರ ಪಡೆದು ನೌಕರಿಗೆ ಸೇರ್ಪಡೆಯಾಗುತ್ತಿರುವವರಿಗೆ ಪರಿಣಾಮಕಾರಿ ವೃತ್ತಿ ತರಬೇತಿ ಮತ್ತು ಆಡಳಿತ ವ್ಯವಸ್ಥೆ ಕುರಿತ ಪರಿಚಯಾತ್ಮಕ ತರಬೇತಿ ನೀಡಲು ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸಲಹೆ ನೀಡಿದರು.

ಪ್ರಸ್ತುತ ವಿಷಮ ಕಾಲಘಟ್ಟದಿಂದಾಗಿ ಲಾಕ್-ಡೌನ್ ಇದ್ದರೂ ನಮ್ಮ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಮೃತ ಶಿಕ್ಷಕರ ಕುಟುಂಬಗಳು ಶ್ರಮವಹಿಸಿ ಅನುಕಂಪದ ನೇಮಕಾತಿ ಕಡತಗಳನ್ನು ವಿಲೇವಾರಿ ಮಾಡಿ ನೇಮಕಾತಿ ಆದೇಶ ನೀಡಲು ಮುಂದಾಗಿರು ವುದು ಸಂತಸದ ಸಂಗತಿಯಾಗಿದೆ ಎಂದು ಸಚಿವರು ಹೇಳಿದರು. ನೇಮಕಾತಿ ಪತ್ರ ನೀಡಲು ಸಹಕರಿಸಿದ ಇಲಾಖೆಯ ಆಯುಕ್ತರು ಸೇರಿದಂತೆ ಎಲ್ಲ ಅಧಿಕಾರಿ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಸಚಿವರು ಶ್ಲಾಘಿಸಿದರು.ಇನ್ನೂ ಶಿಕ್ಷಣ ಸಚಿವರ ಮತ್ತು ಇಲಾಖೆಯ ಕಾರ್ಯವನ್ನು ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸ್ವಾಗತಿಸಿದ ಸರ್ವ ಸದಸ್ಯರು ಧನ್ಯವಾದಗಳನ್ನು ಹೇಳಿದ್ದಾರೆ