ರಾಮನಗರ –
ಕೋವಿಡ್ ಹಿನ್ನಲೆಯಲ್ಲಿ ಈವರೆಗೆ ರಾಜ್ಯದಲ್ಲಿ SSLC, PUC, ಪರೀಕ್ಷೆಗಳನ್ನು ಈವರೆಗೆ ಮಾಡಿಲ್ಲ ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರು ಈ ಕುರಿತು ಕ್ರಮವನ್ನು ತಗೆದುಕೊಳ್ಳದ ಹಿನ್ನಲೆಯಲ್ಲಿ ಪ್ರಸಕ್ತ ಸಾಲಿನ ಈ ಪರೀಕ್ಷೆಗಳನ್ನು ನಡೆಸದೆ ವಿದ್ಯಾರ್ಥಿಗಳ ನ್ನು ಉತ್ತೀರ್ಣರೆಂದು ಘೋಷಿಸಿವಂತೆ ಕನ್ನಡ ಚಳು ವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗ ರಾಜ್ ಆಗ್ರಹಿಸಿ ಪ್ರತಿಭಟನೆ ಮಾಡಿದರು

ಹೌದು ಚಾಮರಾಜ ನಗರದ ಜಿಲ್ಲಾ ಸರ್ಕಾರಿ ಕಚೇ ರಿಗಳ ಸಂಕಿರ್ಣದ ಮುಂಭಾಗದಲ್ಲಿ ಈ ವಿಚಾರದಲ್ಲಿ ಪ್ರತಿಭಟನೆ ನಡೆಸಿದರು.10 ತಿಂಗಳ ಅವಧಿಯಲ್ಲಿ ಕಲಿಯುವ ಪಾಠವನ್ನು ಈ ವಿದ್ಯಾರ್ಥಿಗಳಿಗೆ ಕೇವಲ 2 ತಿಂಗಳ ಕಾಲ ತರಗತಿಗಳು ನಡೆದಿವೆ.ಅಲ್ಲದೆ ಆನ್ ಲೈನ್ ಕ್ಲಾಸುಗಳು ಸಂಪೂರ್ಣ ವಿಫಲವಾಗಿವೆ ಎಂದರು.ಇನ್ನೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆನ್ ಲೈನ್ ಕ್ಲಾಸುಗಳಲ್ಲಿ ತೊಡಗಿಸಿಕೊಳ್ಳುವುದು ಸಾಧ್ಯವಾಗಿಲ್ಲ.ಮಕ್ಕಳ ಕೈಗೆ ಮೊಬೈಲ್ ಕೊಟ್ಟರೆ ಯಾವ್ಯಾವುದೋ ಮಾರ್ಗಗಳನ್ನು ಹುಡುಕಿಕೊಳ್ಳು ತ್ತಿವೆ ಎಂದರು