ರಾಜ್ಯದ 6 ಪೊಲೀಸ್ ಅಧಿಕಾರಿ ಗಳಿಗೆ ಕೇಂದ್ರದ ಗೃಹ ಇಲಾಖೆಯ ಪ್ರಶಸ್ತಿ – ದಕ್ಷತೆ ಕರ್ತವ್ಯ ನಿಷ್ಠೆಗೆ ಒಲಿದು ಬಂತು ಗೌರವ…..

Suddi Sante Desk

ಬೆಂಗಳೂರು

ರಾಜ್ಯದ 6 ಜನ ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಸರ್ಕಾರದ ಗೃಹ ಇಲಾಖೆಯ ಪ್ರಶಸ್ತಿ ಲಭಿಸಿದೆ ಹೌದು ಕೇಂದ್ರ ಸರ್ಕಾರದ ಗೃಹ ಇಲಾಖೆ ನೀಡುವ ಪ್ರಶಸ್ತಿ ಗೆ ರಾಜ್ಯದ ಆರು ಜನ ಪೊಲೀಸ್ ಅಧಿಕಾರಿಗಳು ಭಾಜನರಾ ಗಿದ್ದಾರೆ ತನಿಖೆಯಲ್ಲಿ ದಕ್ಷತೆ ಮೆರೆದ ಕರ್ನಾಟಕದ 6 ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಇಲಾಖೆ ಪದಕ ಒಲಿದಿದೆ.

ತನಿಖಾ ವಿಭಾಗದಲ್ಲಿ ಉತ್ತಮ ದಕ್ಷತೆ ಪ್ರದರ್ಶಿಸಿದ ಲೋಕಾಯುಕ್ತ ಎಸ್ಪಿ ಕೆ.ಲಕ್ಷ್ಮಿಗಣೇಶ್, ಹುಬ್ಬಳ್ಳಿ ಹೆಸ್ಕಾಂ ವಿಭಾಗದ ಎಸ್ಪಿ ಶಂಕರ್ ಕೆ ಮರಿಹಾಳ್,ಸಿಂಧನೂರು ಉಪ ವಿಭಾಗದ ಡಿವೈಎಸ್ಪಿ ವೆಂಕಟಪ್ಪ ನಾಯ್ಕ,ಕರ್ನಾಟಕ ಲೋಕಾಯುಕ್ತ ಡಿವೈಎಸ್ಪಿ ಎಂ.ಆರ್.ಗೌತಮ್, ಕಲಬುರಗಿ ಸಿಐಡಿ ಡಿವೈಎಸ್ಪಿ ಶಂಕರೇಗೌಡ ಪಾಟೀಲ್, ದಾವಣಗೆರೆ ಯ ಬಸವನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಚ್. ಗುರುಬಸವರಾಜ್ ಅವರಿಗೆ 2022ನೇ ಸಾಲಿನ ಪ್ರತಿಷ್ಟಿತ ಕೇಂದ್ರ ಗೃಹ ಮಂತ್ರಿ ಪದಕ ಒಲಿದಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.