ಧಾರವಾಡ –
ಈ ದಿನ ರಾಜ್ಯದ ವಿವಿಧ ವೃಂದ ಸಂಘಗಳ ರಾಜ್ಯಾಧ್ಯಕ್ಷರುಗಳ ಒಪ್ಪಂದ ಮೇರೆಗೆ ಕರ್ನಾಟಕ ಸರ್ಕಾರಿ ಶಿಕ್ಷಕರ ಸಂಘಗಳ ಪರಿಷತ್ತಿನ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಗುರು ತಿಗಡಿ ಹಾಗೂ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಗಳಾದ ಅಶೋಕ್ ಸಜ್ಜನ್ ರವರ ನೇತೃತ್ವದಲ್ಲಿ ಇಂದು ಸಾಯಂಕಾಲ 6ಗಂಟೆಗೆ ಗೂಗಲ್ ಮೀಟ್ ಅನ್ನು ಆಯೋಜಿಸಲಾಗಿತ್ತು.ಸದರಿ ಗೂಗಲ್ ಮೀಟ್ ಕಾರ್ಯಕ್ರಮವು ಸುಧೀರ್ಘ ವಾಗಿ ಎರಡೂವರೆ ಗಂಟೆಗಳ ಕಾಲ ನಡೆದು ಅನೇಕ ವಿಷಯಗಳ ಚರ್ಚಿಯಾದವು
ಇಂದಿನ ಗೂಗಲ್ ಮೀಟ್ ನಲ್ಲಿ ಚರ್ಚೆಯಾದ ಪ್ರಮುಖ ಅಜೆಂಡಾಗಳು
ರಾಜ್ಯದ ವಿವಿಧ ವೃಂದ ಸಂಘಗಳ ರಾಜ್ಯಾಧ್ಯಕ್ಷ ರಗಳು ಹಾಗೂ ಕರ್ನಾಟಕ ಸರಕಾರಿ ಶಿಕ್ಷಕರ ಸಂಘಗಳ ಪರಿಷತ್ತಿನ ರಾಜ್ಯ ಪದಾಧಿಕಾರಿಗಳಿಗೆ ಸ್ವಾಗತ
ಕೊರೋನಾ-19 ಮಹಾಮಾರಿ ವೈರಸ್ ನಿಂದ ಇದುವರೆಗೂ ಮೃತರಾದ ಶಿಕ್ಷಕರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸುವುದು
ಶಿಕ್ಷಕರ ವಿವಿಧ ವೃಂದ ಸಂಘಗಳ ಜಿಲ್ಲಾ/ರಾಜ್ಯ ಪದಾಧಿಕಾರಿಗಳ ಹಾಗೂ ರಾಜ್ಯದ ಶಿಕ್ಷಕರ ಯೋಗ ಕ್ಷೇಮದ ಬಗ್ಗೆ ಚರ್ಚಿಸುವುದು
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನೀಡಿದ ಬಡ್ತಿ ವಿಚಾರದ ಮುಂದಿನ ನಡೆ ಬಗ್ಗೆ ಚರ್ಚೆ
2021-22 ನೇ ಶೈಕ್ಷಣಿಕ ವರ್ಷ ಪ್ರಾರಂಭವಾಗು ವುದರೊಳಗೆ ರಾಜ್ಯದ ಸಮಸ್ತ ಶಿಕ್ಷಕರಿಗೆ ವ್ಯಾಕ್ಷಿನ್ ನೀಡುವ ಬಗ್ಗೆ ಚರ್ಚೆ
ಕೊರೋನಾ ವೈರಸ್ ನಿಂದ ಮೃತ ದಾರದ ಶಿಕ್ಷಕರಿಗೆ ಸರ್ಕಾರದಿಂದ ಪರಿಹಾರ ಧನ ನೀಡುವ ಬಗ್ಗೆ ಚರ್ಚೆ
ಮೃತರಾದ ಶಿಕ್ಷಕರ ಕುಟುಂಬದವರಿಗೆ ನೌಕರಿ ನೀಡುವುದು ವಿಳಂಬ ಕುರಿತು
ಶಿಕ್ಷಣ ಇಲಾಖೆಯ ಪ್ರಾಥಮಿಕ ಶಾಲೆ ಶಿಕ್ಷಕರಿಗೆ ರಜೆ ಸಹಿತ ಇಲಾಖೆಯಾಗಿರುವುದರಿಂದ ಬೇಸಿಗೆಯ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರಿಗೆ ಗಳಿಕೆ ರಜೆ ನೀಡುವ ಬಗ್ಗೆ ಚರ್ಚೆ
ರಾಜ್ಯಾದ್ಯಂತ ಕೊರೊನಾ ವೈರಸ್ 2ನೇ ಅಲೆ ಅಬ್ಬರದೊಂದಿಗೆ 3 ನೇ ಅಲೆ ಪ್ರಾರಂಭವಾಗುವ ಸಂದರ್ಭದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಆಹಾರ ಧಾನ್ಯ ವಿತರಣೆ ಮಾಡುವುದನ್ನು ತಾತ್ಕಾಲಿಕವಾಗಿ ಮುಂದೂಡುವ ಬಗ್ಗೆ
ನನೆಗುದಿಗೆ ಬಿದ್ದಿರುವ ವರ್ಗಾವಣೆಯನ್ನು ಶೀಘ್ರ ವಾಗಿ ಪ್ರಾರಂಭ ಮಾಡುವ ಕುರಿತು ಚರ್ಚೆ
ಸರ್ಕಾರಿ ಶಾಲಾ ಶಿಕ್ಷಕರನ್ನು ಕುರಿತು ಖಾಸಗಿ ಶಾಲೆಯ ಮುಖ್ಯಸ್ಥರು ಹಗುರವಾಗಿ ಮಾತನಾಡಿ ರುವುದನ್ನು ಖಂಡಿಸಿ ಶಿಸ್ತುಕ್ರಮ ನೀಡುವ ಬಗ್ಗೆ ಚರ್ಚೆ
ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಮುಖ್ಯೋಪಾ ಧ್ಯಾಯರ ಹುದ್ದೆಗೆ ಹಾಗೂ ಪ್ರಾಥಮಿಕ ಶಾಲಾ B.ed ಪದವಿ ಪಡೆದ ಶಿಕ್ಷಕರಿಗೆ ಪ್ರೌಢಶಾಲಾ ಸಹ ಶಿಕ್ಷಕರ ಗ್ರೇಡ್ -2 ಹುದ್ದೆಗಳಿಗೆ ಬಡ್ತಿ ನೀಡುವ ಬಗ್ಗೆ
ಪ್ರಾಥಮಿಕ ಶಾಲಾ ಹಿಂದಿ ಸಹಶಿಕ್ಷಕರನ್ನು 6-8 ಕ್ಕೆ ಬಡ್ತಿ ಹಾಗೂ ವರ್ಗಾವಣೆಯಲ್ಲಿ ಹಿರಿಯ ಪ್ರಾಥ ಮಿಕ ಶಾಲೆಯಲ್ಲಿರುವ ಖಾಲಿಯಿರುವ ಹಿಂದಿ ಹುದ್ದೆ ಸ್ಥಳಾವಕಾಶ ನೀಡುವ ಬಗ್ಗೆ
ಪ್ರಾಥಮಿಕ ಶಾಲೆಯಲ್ಲಿ ಸಿ ಆರ್ ಪಿ /ಬಿ ಆರ್ ಪಿ ಗಳಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ 3 ಹಾಗೂ 5 ವರ್ಷ ಸೇವೆ ಪೂರ್ಣ ಗೊಳಿಸಿದ ಶಿಕ್ಷಕರಿಗೆ ವರ್ಗಾವ ಣೆಯ ಪೂರ್ವದಲ್ಲಿ ವಿಶೇಷವಾಗಿ ಕೌನ್ಸಿಲಿಂಗ್ ಮಾಡಿ ಸ್ಥಳ ನಿಯುಕ್ತಿಗೊಳಿಸುವ ಕುರಿತು
ರಾಜ್ಯ ಸರ್ಕಾರಿ ನೌಕರರಿಗೆ ೬ ತಿಂಗಳಿಗೊಮ್ಮೆ ನೀಡಬೇಕಾದ ಇದುವರೆಗೂ ನಿಂತಿರುವ ತುಟ್ಟಿಭತ್ಯೆ ಗಳನ್ನು ಘೋಷಣೆ ಮಾಡುವ ಬಗ್ಗೆಈ ರೀತಿಯಾದ ಅಜೆಂಡಾಗಳನ್ನು ಇನ್ನಿತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಶಿಕ್ಷಕರ ಸಂಘ ಪ್ರಾಥಮಿಕ ಶಾಲಾ ಪದವಿಧರ ಶಿಕ್ಷಕರ ಸಂಘ ಉರ್ದು ಶಿಕ್ಷಕರ ಸಂಘ. ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲೆ ಹಾಗೂ ರಾಜ್ಯ ಸರಕಾರ ಹಂತದ ಪದಾಧಿಕಾರಿ ಗಳು ಹಾಗೂ ಕರ್ನಾಟಕ ಸರಕಾರ ಶಿಕ್ಷಕರ ಸಂಘಗಳ ಪರಿಷತ್ ನ ರಾಜ್ಯ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಹಾಗೂ ಸರ್ವ ಪದಾಧಿಕಾರಿಗಳು ಸೇರಿ ಸುಧೀರ್ಘವಾಗಿ ಚರ್ಚಿಸಲಾಯಿತು ಈ ಗೂಗಲ್ ಮೀಟ್ ಕಾರ್ಯಕ್ರಮದಲ್ಲಿ ರಾಜ್ಯದ ಮೂಲೆಮೂಲೆ ಗಳಿಂದ ಪದಾಧಿಕಾರಿಗಳು ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸಲಹೆ ಸೂಚನೆಗಳ ನ್ನು ನೀಡಿದರು.ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಿದ ಆ ಮಹನೀಯರೆ ಲ್ಲರಿಗೂ ಕರ್ನಾಟಕ ಸರ್ಕಾರಿ ಶಿಕ್ಷಕರ ಸಂಘಗಳ ಪರಿಷತ್ ನ ರಾಜ್ಯ ಘಟಕದಿಂದ
ಧನ್ಯವಾದಗಳ ನ್ನು ಸಮರ್ಪಿಸಲಾಯಿತು
ಇನ್ನೂ ಈ ಒಂದು ಮೀಟ್ ನಲ್ಲಿ ಪವಾಡೆಪ್ಪ, ಗುರು ತಿಗಡಿ, ಎಸ್ ವಾಯ್ ಸೊರಟಿ, ಚಂದ್ರಶೇಖರ್ ಶೆಟ್ರು, ಅಶೋಕ ಸಜ್ಜನ, ಎಲ್ ಐ ಲಕ್ಕಮ್ಮನವರ, ಶಂಕರ ಘಟ್ಟಿ, ಶರಣಪ್ಪಗೌಡ ಆರ್ ಕೆ, ಎಸ್ ಎಫ್ ಪಾಟೀಲ, ಹನುಮಂತಪ್ಪ ಮೇಟಿ ಮಲ್ಲಿಕಾರ್ಜುನ ಉಪ್ಪಿನ, ಶರಣಬಸವ ಬನ್ನಿಗೋಳ, ಹನುಮಂತಪ್ಪ ಬೂದಿಹಾಳ, ಎಂ ವಿ ಕುಸುಮ ಜಿ, ಟಿ, ಲಕ್ಷ್ಮೀದೇವ ಮ್ಮ, ಕೆ ನಾಗರಾಜ, ರಾಮಪ್ಪ ಹಂಡಿ, ಸಂಗಮೇಶ ಖನ್ನಿನಾಯ್ಕರ, ಜೆ ಟಿ ಮಂಜುಳಾ, ಗೋವಿಂದ ಜುಜಾರೆ, ದಾವಣಗೆರೆ ಸಿದ್ದೇಶ,ನಾಗರಾಜ ಕಾಮನಹಳ್ಳಿ, ಹೊಂಬರಡಿ ಆರ್,ಡಿ, ಅಕ್ಬರಲಿ ಸೋಲಾಪುರ, ರಾಜೀವಸಿಂಗ ಹಲವಾಯಿ, ಕಾಶಪ್ಪ ದೊಡವಾಡ, ಸಿದ್ದಣ್ಣ ಉಕ್ಕಲಿ, ಕಿರಣ ರಘುಪತಿ ಚಂದ್ರಶೇಖರ್ ತಿಗಡಿ, ಎಂ ಐ ಮುನವಳ್ಳಿ, ಆರ್ ನಾರಾಯಣಸ್ವಾಮಿ ಚಿಂತಾಮಣಿ, ಫನೀಂದ್ರನಾಥ, ಡಿ ಎಸ್ ಭಜಂತ್ರಿ, ಬಿ ಎಸ್ ಮಂಜುನಾಥ, ರೇವಣ್ಣ ಎಸ್, ಎಸ್ ಆರ್ ಎಮ್ಮಿಮಠ, ತುಮಕೂರು ರವೀಶ, ಟಗರು ಪಂಡಿತ, ಕಲ್ಪನ ಚಂದನಕರ ರಾಜಶ್ರೀ ಪ್ರಭಾಕರ ಶಿವಲೀಲಾ ಪೂಜಾರ, ಶಿವಮೊಗ್ಗ ಸೋಮಶೇಖರ್,ಕೊಡಗು ರೋಜಿ, ಸುರೇಶ ಅರಳಿ ಅಶೋಕ ಬಿಸೆರೊಟ್ಟಿ, ಮಧುಗಿರಿ ದೇವರಾಜ ಲೀಲಾ ಮಹೇಶ್ವರ ಆರ್ ಐ ಹನಗಿ, ಕೋಲಾರ ಶ್ರೀನಿವಾಸ,ಕೆ ಎಮ್ ಮುನವಳ್ಳಿ ಸೇರಿದಂತೆ ಹಲವರು ಪಾಲ್ಗೊಂಡು ಈ ಒಂದು ಗೂಗಲ್ ಮೀಟ್ ನ್ನು ಯಶಸ್ವಿಗೊಳಿಸಿದರು.