ಬಿಜೆಪಿ ಮುಖಂಡನಿಗೆ ಹನಿಟ್ರ್ಯಾಪ್ 50 ಲಕ್ಷ ಸುಲಿಗೆ ದೂರು ದಾಖಲಾಗುತ್ತಿದ್ದಂತೆ ಸಲ್ಮಾನನ್ನು ವಶಕ್ಕೆ ತಗೆದುಕೊಂಡ ಪೊಲೀಸರು…..

Suddi Sante Desk

ಮಂಡ್ಯ –

ರಾಜ್ಯದಲ್ಲಿ ಮತ್ತೊಂದು ದೊಡ್ಡ ಹನಿಟ್ರ್ಯಾಪ್ ಜಾಲ ವೊಂದು ಪತ್ತೆಯಾಗಿದೆ ಹೌದು ಪ್ರಭಾವಿ ಬಿಜೆಪಿ ಮುಖಂಡ ನೊಬ್ಬನಿಗೆ ಹನಿಟ್ರ್ಯಾಪ್ ಮಾಡಿ 50 ಲಕ್ಷ ರೂಪಾಯಿ ಸುಲಿಗೆ ಮಾಡಿ ನಂತರ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ

ಹಣಕ್ಕೆ ಬೇಡಿಕೆ ಇಡುತ್ತಿದ್ದಂತೆ ಹನಿ ಟ್ರ್ಯಾಪ್ ನಲ್ಲಿ ಸಿಲುಕಿ ಕೊಂಡ ಬಿಜೆಪಿ ನಾಯಕ ದೂರನ್ನು ನೀಡಿದ್ದು ಇತ್ತ ಜಾಲ ವನ್ನು ಬೇಧಿಸಿದ್ದಾನೆ.ಇನ್ನೂ ಸುಳಿಯಲ್ಲಿ ಸಿಲುಕಿದ ಬಿಜೆಪಿ ಮುಖಂಡ ಹಣ ಕಳೆದುಕೊಂಡಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಮುಖಂಡ ಮಂಡ್ಯದ ಪ್ರತಿಷ್ಠಿತ ಚಿನ್ನದ ವ್ಯಾಪಾರಿ ಕೂಡ ಆಗಿದ್ದು ಅವರಿಂದ 50 ಲಕ್ಷ ರೂಪಾಯಿ ಸುಲಿಗೆ ಮಾಡಲಾಗಿದೆ.ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಗೆ ಉದ್ಯಮಿ ದೂರು ನೀಡಿದ್ದಾರೆ.

ಆರು ತಿಂಗಳ ನಂತರ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಮುಖಂಡ, ಧಾರ್ಮಿಕ ಪರಿಷತ್ ಸದಸ್ಯನಾಗಿರುವ ಮಂಡ್ಯದ ಪ್ರತಿಷ್ಠಿತ ಚಿನ್ನದ ಅಂಗಡಿ ಮಾಲೀಕ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯೂ ಆಗಿದ್ದಾರೆ.ಅವರು ನೀಡಿದ ದೂರಿನ ಆಧಾರದಲ್ಲಿ ಸಲ್ಮಾಬಾನುರನ್ನು ಬಂಧಿಸಲಾಗಿದೆ. ಸಮಾಜ ಸೇವೆ ಮತ್ತು ಮಾನವ ಹಕ್ಕು ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಸಲ್ಮಾ ಫೆಬ್ರವರಿ 26 ರಂದು ಮೈಸೂರಿನ ದರ್ಶನ್ ಪ್ಯಾಲೇಸ್ ನಲ್ಲಿ ಹನಿಟ್ರ್ಯಾಪ್ ನಡೆಸಿದ್ದರು.ಮಂಗಳೂರಿಗೆ ತೆರಳಲು ಮಂಡ್ಯದಲ್ಲಿ ಮುಖಂಡ ಬಸ್ ಗಾಗಿ ಕಾಯುತ್ತಿದ್ದರು.ಮೈಸೂರಿಗೆ ಡ್ರಾಪ್ ಕೊಡುವುದಾಗಿ ಕಾರ್ ನಲ್ಲಿ ನಾಲ್ವರು ಕರೆದುಕೊಂಡು ಹೋಗಿದ್ದರು.ಚಿನ್ನದ ಪರೀಕ್ಷೆಗೆ ಎಂದು ಅವರನ್ನು ಅಪಹರಿಸಿ ಹನಿಟ್ರ್ಯಾಪ್ ಮಾಡಿರುವ ಆರೋಪ ಕೇಳಿ ಬಂದಿದೆ.ಲಾಡ್ಜ್ ರೂಮ್ ಗೆ ಕರೆದೊಯ್ಯುತ್ತಿದ್ದಂತೆ ಯುವತಿ ಜೊತೆ ವಿಡಿಯೋ ಚಿತ್ರೀಕರಿಸಿಕೊಂಡು 4 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು.ಅಂತಿಮವಾಗಿ ಮುಖಂಡ 50 ಲಕ್ಷ ರೂಪಾಯಿ ನೀಡಿ ತೆರಳಿದ್ದರು. ಇತ್ತೀಚೆಗೆ ಮತ್ತೆ ಹಣಕ್ಕೆ ಬೇಡಿಕೆ ಇಟ್ಟು ಬೆದರಿಕೆ ಹಾಕಿದ್ದ ಹಿನ್ನಲೆಯಲ್ಲಿ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.