ಸರ್ಕಾರಿ ಶಾಲೆಯ ಮಕ್ಕಳಿಗೆ ಯಕ್ಷಗಾನ ತರಬೇತಿ ಸಹೋದರರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ…..

Suddi Sante Desk

ಮಂಗಳೂರು –

ಯಕ್ಷಗಾನ,ಕರಾವಳಿಯ ಪುರಾತನ ಕಲೆಯ ಪ್ರಕಾರಗಳಲ್ಲಿ ಒಂದಾಗಿದ್ದು,ವಿಶ್ವದಾದ್ಯಂತ ಜನಪ್ರಿಯತೆ ಪಡೆದುಕೊಂ ಡಿದೆ.ಮಂಗಳೂರಿನ ಸಹೋದರರಿಬ್ಬರು ತಮ್ಮದೇ ಆದ ರೀತಿಯಲ್ಲಿ ಈ ಕಲೆಯನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ರಿಷಿ ಪ್ರತಿಷ್ಠಾನ ಮೂಲಕ ವಿಶ್ವನಾಥ್ ಪದ್ಮುಜಾ ಮತ್ತು ದೇವಾಕರ್ ಪದ್ಮುಜಾ ಅವರು ಸರ್ಕಾರಿ ಶಾಲೆಯ ಮಕ್ಕ ಳಿಗೆ ಯಕ್ಷಗಾನ ಕಲಿಸುತ್ತಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ಸುತ್ತಮುತ್ತ ವಾಸಿಸುತ್ತಿರುವ ಉತ್ತರ ಕರ್ನಾಟಕದ ವಲಸೆ ಕಾರ್ಮಿಕರ ಮಕ್ಕಳು ಇದ್ದಾರೆ.ಏಳು ವರ್ಷಗಳ ಹಿಂದೆ ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಮತ್ತು ಸಾಹಿತ್ಯದ ಅರಿವು ಮೂಡಿಸುವ ಉದ್ದೇಶದೊಂದಿಗೆ ಬೆಳ್ತಂಗಡಿ ತಾಲೂಕಿನಲ್ಲಿ ರಿಷಿ ಪ್ರತಿಷ್ಠಾನವನ್ನು ವಿಶ್ವನಾಥ್ಮತ್ತು ದೇವಾಕರ್ ಅವರು ಸ್ಥಾಪಿಸಿದರು.

ಮಾಲಿನ್ಯದಿಂದ ಪರಿಸರ ಸಂರಕ್ಷಣೆ ಕುರಿತು ಸರ್ಕಾರಿ ಶಾಲೆಯ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.ಸಸಿಗಳನ್ನು ನೆಟ್ಟವರಿಗೆ ಪ್ರಮಾಣ ಪತ್ರ ಮತ್ತು ಬಹುಮಾನ ಕೊಡುತ್ತಿದ್ದೇವು.ಸಂಪನ್ಮೂಲ ವ್ಯಕ್ತಿಗಳ ನೆರವಿನೊಂದಿಗೆ ಶಾಲಾ-ಕಾಲೇಜುಗಳಲ್ಲಿ ಅನೇಕ ಸೆಮಿನಾರ್ ಯೋಜಿಸುತ್ತಿದ್ದೇವು.ಆದ್ದರಿಂದ ಈಗ ನಾವು ತೆಂಕುಟಿಟ್ಟು ಅಥವಾ ಯಕ್ಷಗಾನವನ್ನು ಕಲಿಸುತ್ತಿದ್ದೇವೆ. ಇದು ಈ ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿದೆ ಎಂದು ಪತ್ರಕರ್ತರು ಆಗಿರುವ ದಿವಾಕರ್ ಹೇಳಿದರು.

ಬಹುತೇಕ ವಿದ್ಯಾರ್ಥಿಗಳು ಮ್ಯೂಸಿಕ್ ಅಥವಾ ಡ್ಯಾನ್ಸ್ ನಲ್ಲಿ ಪಾಶ್ಚಿಮಾತ್ಯ ಕಲಾ ಪ್ರಕಾರವನ್ನು ಆಯ್ಕೆ ಮಾಡಿಕೊ ಳ್ಳುತ್ತಿದ್ದರು.ಆದ್ದರಿಂದ ನಾವು ಕರಾವಳಿ ಕಲೆ ಯಕ್ಷಗಾನ ವನ್ನು ಪ್ರೋತ್ಸಾಹಿಸಬೇಕಾಗಿತ್ತು.ನಾವು ಹೆಚ್ಚಿಗೆ ಪ್ರೋತ್ಸಾಹಿ ಸಿದಷ್ಟು ಹೆಚ್ಚಿನ ಜನರು ಇದರ ಬಗ್ಗೆ ತಿಳಿಯುತ್ತಾರೆ ಮತ್ತು ಕಲಿಯುತ್ತಾರೆ.ಯವಜನರು ತಮ್ಮ ಸಂಸ್ಕೃತಿಯನ್ನು ಉಳಿ ಸುವಲ್ಲಿ ಯಕ್ಷಗಾನ ನೆರವಾಗಿದೆ.ಈ ಕಲೆಯ ಅಸ್ತಿತ್ವ ಉಳಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸುವುದು ನಮ್ಮ ಕಡೆಯಿಂದ ಸಣ್ಣ ಕೊಡುಗೆ ಎನ್ನುತ್ತಾರೆ ವಿಶ್ವನಾಥ್.ಪ್ರತಿ ಭಾನುವಾರ ಬೆಳಗ್ಗೆ8 ಗಂಟೆಯಿಂದ ರಾತ್ರಿ 9 ಗಂಟೆ ಯವರೆಗೂ ಮೂರು ತರಗತಿಗಳು ನಡೆಯುತ್ತವೆ.

ವಿಶ್ವನಾಥ್ ಧರ್ಮಸ್ಥಳದಲ್ಲಿ ಯಕ್ಷಗಾನ ಕಲಿತಿದ್ದಾರೆ. ದಿವಾಕರ್ ಕೂಡಾ ಕೆಲ ತಿಂಗಳ ಕಾಲ ಕಲಿತಿದ್ದಾರೆ. ಮುಲ ಕಾಡು ಸರ್ಕಾರಿ ಶಾಲೆಯಲ್ಲಿ ತರಬೇತಿ ಆರಂಭಿಸಲು ಪ್ರಾರಂಭಿಸಿದಾಗ ಉತ್ತರ ಕರ್ನಾಟಕದ ಸುಮಾರು 40 ವಲಸೆ ಕಾರ್ಮಿಕರ ಮಕ್ಕಳು ತರಗತಿಗೆ ಹಾಜರಾಗಲು ಬಂದರು. ನಾವು ಯಕ್ಷಗಾನ ಕಲಿಸುವುದು ಮಾತ್ರವಲ್ಲದೇ, ಅವರ ರಂಗ ಪ್ರವೇಶವನ್ನು ಖಾತ್ರಿ ಪಡಿಸುತ್ತೇವೆ ಎಂದು ವಿಶ್ವನಾಥ್ ತಿಳಿಸಿದರು.ಇಲ್ಲಿಯವರೆಗೂ ಸರ್ಕಾರಿ ಶಾಲೆಯ 200 ಮಕ್ಕಳಿಗೆ ತರಬೇತಿ ನೀಡಿದ್ದೇವೆ.ಉತ್ತರ ಕರ್ನಾಟಕದ 40 ಮಕ್ಕಳು ಪ್ರದರ್ಶಿಸಿದ ಸುದರ್ಶನ ವಿಜಯ ಹಿರಿಯ ಕಲಾವಿದರಿಂದ ಭಾರೀ ಮೆಚ್ಚುಗೆ ಪಡೆಯಿತು.ಇದೀಗ ಅವರು ರಂಗ ಗೀತೆ ತರಬೇತಿ ನೀಡುತ್ತಿದ್ದಾರೆ.

ಸರ್ಕಾರಿ ಶಾಲೆ ಮಕ್ಕಳು ಬಡ ಕುಟುಂಬದ ಹಿನ್ನೆಲೆಯಿಂದ ಬಂದಿದ್ದು, ಯಕ್ಷಗಾನ ಕಲಿಯಲು ಪ್ರತಿ ತಿಂಗಳು 500 ರೂ. ಪಾವತಿಸಲು ಕಷ್ಟವಾಗುತ್ತದೆ.ಆದ್ದರಿಂದ ಅವರಿಗೆ ಉಚಿತ ವಾಗಿ ನೀಡುತ್ತಿರುವುದಾಗಿ ದಿವಾಕರ್ ತಿಳಿಸಿದರು.ಪ್ರಸ್ತುತ ಶಶಿಕಿರಣ್ ಕಾವು ಉಚಿತ ತರಗತಿ ನೀಡುತ್ತಿದ್ದು ಉತ್ತರ ಕರ್ನಾಟಕದ ಕೆಲ ಮಕ್ಕಳು ಸೇರಿದಂತೆ ಸುಮಾರು 20 ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ.ರಿಷಿ ಪ್ರತಿಷ್ಠಾನದಡಿ ತರಬೇತಿ ಪಡೆದಿರುವ ದಾವಣಗೆರೆಯ ಸೃಜನ್,ತನ್ನ ಊರಿನಲ್ಲಿ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಲು ಯೋಜಿಸಿರುವುದಾಗಿ ತಿಳಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.