ಶಿಕ್ಷಕರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ಶಿಕ್ಷಣ ಇಲಾಖೆ 17 ಸೇವೆ ಗಳನ್ನು ಆನ್ ಲೈನ್…..

Suddi Sante Desk

ಬೆಂಗಳೂರು –

ರಾಜ್ಯ ಸರ್ಕಾರಿ ಶಾಲೆ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಸಿಹಿಸುದ್ದಿ ನೀಡಿದ್ದು ರಜೆ ಮಂಜೂರಾತಿ,ಉನ್ನತ ಶಿಕ್ಷಣ,ವಿದೇಶಿ ಪ್ರಯಾಣ ಸೇರಿದಂತೆ 17 ಸೇವೆಗಳನ್ನು ಇಲಾಖೆ ಆನ್ ಲೈನ್ ಪ್ರಕ್ರಿಯೆಗೆ ಸೇರಿಸಿ ಆದೇಶ ಹೊರಡಿಸಿದೆ.ಶಿಕ್ಷಣ ಇಲಾಖೆಯ ಈ ಆದೇಶ ಸೆ 15 ರಿಂದ ಜಾರಿಗೆ ಬರಲಿದೆ.ಈ 17 ಸೇವೆಗಳು ಶಿಕ್ಷಕ ಮಿತ್ರ ಆಯಪ್ ಮೂಲಕ ದೊರೆ ಯಲಿದ್ದು ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿ ರುವ 2.60 ಲಕ್ಷ ಶಿಕ್ಷಕರು ಇದರ ಸೌಲಭ್ಯ ಪಡೆಯಬಹುದು

ಪ್ರಭಾರ ಭತ್ಯೆ,ನಿವೇಶನ ಖರೀದಿಗೆ ಅನುಮತಿ,ಪಾಸ್ ಪೋರ್ಟ್ ನವೀಕರಣಕ್ಕೆ ನಿರಾಕ್ಷೇಪಣಾ ಪತ್ರ ನೀಡುವಿಕೆ, ವಿದೇಶ ಪ್ರವಾಸಕ್ಕೆ ಅನುಮತಿ,ಹೆಚ್ಚುವರಿ ಅರ್ಹತಾದಾ ಯಕ ಸೇವೆ ಸೇರ್ಪಡೆ,ಉನ್ನತ ವಿದ್ಯಾಭ್ಯಾಸಕ್ಕಾಗಿ ಅನು ಮತಿ ನೀಡುವಿಕೆ,ಜಿಪಿಎಫ್ ಮುಂಗಡ ಪಾವತಿ,ಹಬ್ಬದ ಮುಂಗಡದ ಮಂಜೂರಾತಿ,ವಿಶೇಷ ಭತ್ಯೆ,ಅಂಗವಿಕಲರ ಭತ್ಯೆ,ಅಧಿಕಾರಿಗಳ ತಾತ್ಕಾಲಿಕ ಪ್ರವಾಸ ಪಟ್ಟಿ ಅನುಮೋ ದನೆ,ಪ್ರಥಮ ವೇತನ ಪ್ರಮಾಣ ಪತ್ರ,ಉನ್ನತ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲಾಖಾ ಅನುಮತಿ ಪತ್ರ ಕಾಲಮಿತಿ ಬಡ್ತಿ,ಖಾಯಂ ಪೂರ್ಣ ಅವಧಿ ಘೋಷಣೆ ಪ್ರಸ್ತಾವನೆ ಈ ಎಲ್ಲಾ ಸೇವೆಗಳು ಆನ್ ಲೈನ್ ನಲ್ಲಿ ಸಿಗಲಿವೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.