ನೀರಿನಲ್ಲಿ ಕೊಚ್ಚಿಹೋದ ಇಬ್ಬರು ಪೊಲೀಸರು – ಬಂದೋಬಸ್ತ್ ಗೆ ತೆರಳಿದ್ದ ಇಬ್ಬರು ಪೊಲೀಸರು…..

Suddi Sante Desk

ಕೊಪ್ಪಳ –

ಬಂದೋಬಸ್ತ್‌ ಕೆಲಸಕ್ಕೆ ಹೋಗಿದ್ದ ಇಬ್ಬರು ಪೊಲೀಸರು ಹಳ್ಳ ದಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಕೊಪ್ಪಳ ದಲ್ಲಿ ನಡೆದಿದೆ‌‌.ಹೌದು ಗದಗ ಜಿಲ್ಲೆ ಗಜೇಂದ್ರಗಡಕ್ಕೆ ಬಂದೋ ಬಸ್ತ್ ಗೆ ತೆರಳಿದ್ದ ಇಬ್ಬರು ಪೊಲೀಸ್ ಕಾನ್ಸ್ ಟೇಬಲ್ ಗಳು ಹಳ್ಳದಲ್ಲಿ ಕೊಚ್ಚಿಹೋಗಿದ್ದು ಓರ್ವ ಪೊಲೀಸ್ ಸಿಬ್ಬಂದಿಯ ಮೃತದೇಹ ಪತ್ತೆಯಾಗಿದೆ.

ಮುಂಡರಗಿ ಪೊಲೀಸ್ ಠಾಣೆಯ ಕಾನ್ಸ್ ಟೆಬಲ್ ಗಳಾದ ಮಹೇಶ್ ವಕ್ಕರದ ಮತ್ತು ನಿಂಗಪ್ಪ ಹಲವಾಗಲಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು.ಕೊಪ್ಪಳ, ಗದಗ ಜಿಲ್ಲೆಯ ಪೊಲೀ ಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಳಿಗ್ಗೆಯಿಂ ದಲೇ ಅವರಿಗಾಗಿ ಹುಡುಕಾಟ ನಡೆಸಿದ್ದರು.

ಇಂದು ನಿಂಗಪ್ಪ ಅವರ ಮೃತದೇಹ ಪತ್ತೆಯಾಗಿದ್ದು ಸೋಮವಾರ ಬಂದೋಬಸ್ತ್ ಕೆಲಸಕ್ಕೆ ಮುಂಡರಗಿಯಿಂದ ಒಟ್ಟು ಎಂಟು ಜನ ಸಿಬ್ಬಂದಿ ತೆರಳಿದ್ದರು.ಅದರಲ್ಲಿ ಇಬ್ಬರು ನಾಪತ್ತೆಯಾಗಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.