ಕ್ಷೇತ್ರದ ವಿದ್ಯಾರ್ಥಿ ನಿಯ ಉನ್ನತ ಶಿಕ್ಷಣಕ್ಕೆ ನೆರವಾದ ಮಾಜಿ ಸಚಿವ ಸಂತೋಷ ಲಾಡ್ – ಹಣವಿಲ್ಲದೇ ಓದು ನಿಲ್ಲಿಸಿದ್ದ ಶಾರದಾ ಗೆ ಆರ್ಥಿಕ ನೆರವು…..

Suddi Sante Desk

ಕಲಘಟಗಿ –

ಹಣವಿಲ್ಲದೇ ಓದು ನಿಲ್ಲಿಸಿದ್ದ ಕಲಘಟಗಿ ತಾಲೂಕಿನ ರಾಮನಾಳ ಗ್ರಾಮದ ಕುಮಾರಿ ಶಾರದಾ ಎಸ್ ತಳವಾರ ಇವರಿಗೆ ಮಾಜಿ ಸಚಿವ ಸಂತೋಷ ಲಾಡ್ ನೆರವಾಗಿದ್ದಾರೆ ಹೌದು ಜನತಾ ಇಂಗ್ಲಿಷ PUC 2 ನೇ ವರ್ಷದ ಕಲಾ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಬಂದ ವಿದ್ಯಾರ್ಥಿ ನಿಯು ವಿದ್ಯಾ ಬ್ಯಾಸದಲ್ಲಿ ತೇರ್ಗಡೆಯಾಗಿ ಹೆಚ್ಚಿನ ವಿದ್ಯಾಬ್ಯಾಸಕ್ಕಾಗಿ ಇತ್ತೀಚೆಗೆ ಸಂತೋಷ ಲಾಡ್ ಅವರನ್ನು ಬೇಟಿಯಾಗಿ ಉನ್ನತ ಶಿಕ್ಷಣಕ್ಕಾಗಿ ಸಹಾಯ ಮಾಡಲು ವಿನಂತಿಸಿದಾಗ ಸಂತೋಷ ಲಾಡ್ ಅವರದೇಯಾದ ಸಂತೋಷ ಲಾಡ್ ಫೌಂಡೆಶನ್ ವತಿಯಿಂದ ಅವಳಿಗೆ 12000 = 00 ರೂಪಾಯಿಗಳ ಚೇಕ್ ವಿತರಿಸಿದರು.

ವಿದ್ಯಾರ್ಥಿ ನಿಯ ಮನೆಗೆ ತೆರಳಿ ಚೆಕ್ ವಿತರಣೆ ಮಾಡಿದರು ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಎಸ್ ಆರ್ ಪಾಟೀಲ,ಸಂತೋಷ ಲಾಡ್ ಆಪ್ತ ಕಾರ್ಯ ದರ್ಶಿಗಳಾದ,ಸೋಮಶೇಖರ ಬೆನ್ನೂರ,ಕಾಂಗ್ರೆಸ್ ಪಕ್ಷದ ಮುಖಂಡರಾದ,ನರೇಶ್ ಮಲ್ಲಾಡ,ಗುರು ಕಂಪ್ಲಿ , ಗುರು ಪಾದ ಉಳ್ಳಾಗಡ್ಡಿ,ಎಸ್ ಟಿ ಸಮಾಜದ ತಾಲೂಕ ಅದ್ಯಕ್ಷ ರಾದ ಸಿದ್ದಪ್ಪ ತಳವಾರ ಫಕ್ಕೀರಪ್ಪ ಗೌಳಿ,ಸಂಗಪ್ಪ ಅದರ ಗುಂಚಿ,ಹನಮಂತ ಸುತಗಟ್ಟಿ.ತಾನಪ್ಪ ಬಮ್ಮಿಗಟ್ಟಿ
ಬಸು ಅದರಗುಂಚಿ,ರಾಮು ದೊಡಮನಿ ಈರಯ್ಯ ಯಮನೂರ.ಶೇಕಪ್ಪ ಸುತಗಟ್ಟಿ ಮುದಕಯ್ಯ ಯಮ ನೂರ. ಸಂಗಪ್ಪ ತಳವಾರ ಶಿವಲಿಂಗಯ್ಯ ಹೀರೆಮಠ , ಮುದಕಪ್ಪ ಅದರಗುಂಚಿ ಇನ್ನೂ ಅನೇಕ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.