ದಸರಾ ರಜೆ ವಿಸ್ತರಣೆ ಮಾಡಿ ಸಾವಿತ್ರಿ ಬಾಯಿಫುಲೆ ಶಿಕ್ಷಕಿಯರ ಸಂಘ ಒತ್ತಾಯ – ರಾಜ್ಯಾಧ್ಯಕ್ಷರಾದ ಡಾ ಲತಾ ಎಸ್ ಮುಳ್ಳೂರ ನೇತ್ರತ್ವದಲ್ಲಿ ಶಿಕ್ಷಣ ಸಚಿವರಿಗೆ ಮನವಿ

Suddi Sante Desk
ದಸರಾ ರಜೆ ವಿಸ್ತರಣೆ ಮಾಡಿ ಸಾವಿತ್ರಿ ಬಾಯಿಫುಲೆ ಶಿಕ್ಷಕಿಯರ ಸಂಘ ಒತ್ತಾಯ – ರಾಜ್ಯಾಧ್ಯಕ್ಷರಾದ ಡಾ ಲತಾ ಎಸ್ ಮುಳ್ಳೂರ ನೇತ್ರತ್ವದಲ್ಲಿ ಶಿಕ್ಷಣ ಸಚಿವರಿಗೆ ಮನವಿ

ಬೆಂಗಳೂರು –

 

ದಸರಾ ರಜೆಯ ಅವಧಿಯನ್ನು ವಿಸ್ತರಣೆ ಮಾಡುವಂತೆ ರಾಜ್ಯಾಧ್ಯಂತ ಒತ್ತಾಯ ಆಗ್ರಹ ಹೆಚ್ಚಾಗುತ್ತಿದ್ದು ಇನ್ನೂ ಈ ನಡುವೆ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘವು ಶಿಕ್ಷಣ  ಸಚಿವ ಬಿ.ಸಿ.ನಾಗೇಶ್ ಅವರಿಗೆ ಮನವಿ ಮಾಡಿದ್ದಾರೆ.

 

ಹೌದು ದಸರಾ ರಜೆ ವಿಸ್ತರಿಸುವ ಬಗ್ಗೆ ಹಾಗೂ ಮಾನ್ಯತೆಯ ಸಂಘದಂತೆಯೇ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ಪ್ರತಿನಿಧಿಗಳಿಗೂ ಇಲಾಖಾ ಸಭೆ ಸಮಾರಂಭಗಳಿಗೆ ಆಹ್ಹಾನ ನೀಡುವ ಬಗ್ಗೆ ಮನವಿ ಕೊಡಲಾಯಿತು ಹಾಗೂ ಇದರ ಸಂಬಂದ ದೂರವಾಣಿ ಮುಖಾಂತರ ಗೌರವಾನ್ವಿತ ಸನ್ಮಾನ್ಯ ಶಿಕ್ಷಣ ಸಚಿವರೊಂದಿಗೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಲತಾ. ಎಸ್. ಮುಳ್ಳೂರ ಅವರು ಮಾತನಾಡಿ ಒತ್ತಾಯವನ್ನು ಮಾಡಿದರು.

 

ಡಾ. ಲತಾ. ಎಸ್. ಮುಳ್ಳೂರ ಅವರ ಮಾರ್ಗದರ್ಶನ ಹಾಗೂ ಸೂಚನೆಯ ಮೇರೆಗೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯ ಘಟಕ ಧಾರವಾಡ(ರಿ) ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಅಧ್ಯಕ್ಷರಾದ ಶ್ರೀಮತಿ ವನಿತಾ. ಬಿ. ಆರ್ ಶ್ರೀಮತಿ ಪುಷ್ಪಾವತಿ.ಹೆಚ್.R. ಪ್ರಧಾನ ಕಾರ್ಯದರ್ಶಿ ಶ್ರೀಮತಿ ಮುಕ್ತಾಮಣಿ .R. ಉಪಾಧ್ಯಕ್ಷರು ಶ್ರೀಮತಿ ಸರಸ್ವತಿ. ಸಹಕಾರ್ಯದರ್ಶಿಗಳು ಶಿಕ್ಷಣ ಸಚಿವರಿಗೆ ಭೇಟಿಯಾಗಿ ದಸರಾ ರಜೆಯನ್ನು ವಿಸ್ತರಿಸಬೇಕು ಹಾಗೂ ರಾಜ್ಯಾದ್ಯಂತ ಮಾನ್ಯತೆ ಪಡೆದಿರುವ ಹಾಗೂ ಮಾನ್ಯತೆ ಪಡೆಯದೆ ಇರುವ ಸಂಘಗಳು ಎಂದು ಬಹಳಷ್ಟು ತಾರತಮ್ಯವಾ ಗುತ್ತಿದೆ ಹಾಗೂ ನಮ್ಮ ಸಂಘದ ಪದಾಧಿಕಾರಿಗ ಳನ್ನು ಕಡೆಗಣನೆ ಮಾಡುತ್ತಿದ್ದಾರೆ ಎಂದು ಮನವಿಯನ್ನು ನೀಡಿದರು

ರಾಜ್ಯಾಧ್ಯಕ್ಷರಾದ ಡಾ ಲತಾ.ಎಸ್.ಮುಳ್ಳೂರ ಅವರೊಂದಿಗೆ ದೂರವಾಣಿ ಮುಖಾಂತರ ಮಾತನಾಡಿದರು.ಈ ತಾರತಮ್ಯವಿರುವ ಹೋಗಲಾಡಿಸಬೇಕು ಸಂಘದಂತೆಯೇ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ಪ್ರತಿನಿಧಿಗ ಳಿಗೂ ಇಲಾಖಾ ಸಭೆ ಸಮಾರಂಭಗಳಿಗೆ ಆಹ್ಹಾನ ನೀಡಲು ಇಲಾಖಾ ಮುಖ್ಯಸ್ಥರಿಗೆ ಸೂಚನೆ ನೀಡಬೇಕು ಎಂದು  ಸಮಸ್ತ ಶಿಕ್ಷಕಿಯರ ಪರವಾಗಿ ಕಳಕಳಿಯಿಂದ ಮನವಿ ಮಾಡಿಕೊಳ್ಳಲಾಯಿತು

 

ಗೌರವಾನ್ವಿತ ಸನ್ಮಾನ್ಯ ಶಿಕ್ಷಣ ಸಚಿವರು ಅತ್ಯಂತ ಶಿಕ್ಷಕಿಯರ ಮೇಲಿನ ಕಾಳಜಿಯಿಂದ. ಖಂಡಿತ ವಾಗಿ ಇದನ್ನು ಪರಿಶೀಲಿಸುವುದಾಗಿ ತಿಳಿಸಿದರು ಈ ರೀತಿ ತಾರತಮ್ಯ ಮಾಡುವುದು ತಪ್ಪು,ಇದರ ಬಗ್ಗೆ ಗಮನ‌ ನೀಡುತ್ತೇನೆ ಎಂದು ಕೂಡ ಹೇಳಿ ದರು ಕರ್ನಾಟಕದ ಸಮಸ್ತ ಶಿಕ್ಷಕಿಯರ ಪರವಾಗಿ ಕರ್ನಾಟಕದ ಸಮಸ್ತ ರಾಜ್ಯ ಜಿಲ್ಲಾ ತಾಲೂಕು ಪದಾಧಿಕಾರಿಗಳ ಪರವಾಗಿ ಗೌರವಾನ್ವಿತ ಶಿಕ್ಷಣ ಸಚಿವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಶಿಕ್ಷಣ ಸಚಿವರಿಗೆ ಅರ್ಪಿಸಲಾಯಿತು.

 

ಡಾ.ಲತಾ.ಎಸ್. ಮುಳ್ಳೂರ ಸಂಸ್ಥಾಪಕ ರಾಜ್ಯಾಧ್ಯಕ್ಷರು ರಾಜ್ಯ ಘಟಕ ಧಾರವಾಡ, ಶ್ರೀಮತಿ ವನಿತಾ.ಬಿ. ಆರ್.  ತಿಪಟೂರು ತಾಲೂಕು ಅಧ್ಯಕ್ಷರು,ಶ್ರೀಮತಿ ಪುಷ್ಪಾವತಿ ಎಚ್ ಆರ್ ತಿಪಟೂರ್ ತಾಲೂಕು ಪ್ರಧಾನ ಕಾರ್ಯ ದರ್ಶಿಗಳು,ಶ್ರೀಮತಿಮುಕ್ತಾಮಣಿ .R. ತಿಪಟೂರು ತಾಲೂಕು ಉಪಾಧ್ಯಕ್ಷರು,ಶ್ರೀಮತಿ ಸರಸ್ವತಿ ತಿಪಟೂರು ತಾಲೂಕು ಸಹ ಕಾರ್ಯದರ್ಶಿಗಳು ಮತ್ತು ಸಂಘದ ಸರ್ವ ಸದಸ್ಯರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.