ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಗೆ ಆಯ್ಕೆಯಾದ ಮುಖ್ಯ ಶಿಕ್ಷಕಿಗೆ ಅವಮಾನ – ಇಲಾಖೆ ಮಾಡಿದ ಅವಮಾನದ ಕೆಲಸ ನೋವಿನ ಕೆಲಸ ನೋಡಿ…..

Suddi Sante Desk

ಪುತ್ತೂರು –

ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದ ಶಿಕ್ಷಕಿ ಯೊಬ್ಬರನ್ನು ಪ್ರಶಸ್ತಿ ಸ್ವೀಕರಿಸಲು ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭಕ್ಕೆ ಬಾರದಂತೆ ತಡೆದಿರುವ ವಿಲಕ್ಷಣ ವಿದ್ಯಮಾನ ಪುತ್ತೂರಿನಲ್ಲಿ ನಡೆದಿರುವುದಾಗಿ ತಡವಾಗಿ ಬೆಳಕಿಗೆ ಬಂದಿದೆ.ಅರಿಯಡ್ಕ ಗ್ರಾಮದ ಪಾಪೆ ಮಜಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ತೆರೇಝ್ ಎಂ. ಸಿಕ್ವೇರ ಅಪಮಾನಕ್ಕೊಳಗಾದ ಶಿಕ್ಷಕಿ ಯಾಗಿದ್ದಾರೆ.ಈ ಬಗ್ಗೆ ಟೀಕೆ,ಖಂಡನೆಗಳು ವ್ಯಕ್ತವಾಗುತ್ತಿ ದ್ದಂತೆಯೇ ಡಿಡಿಪಿಐ ಸುಧಾಕರ್,ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಸಹಿತ ಶಿಕ್ಷಣ ಇಲಾಖೆಯ ಅಧಿಕಾರಿಗಳ ತಂಡ ಶಾಲೆಗೆ ತೆರಳಿ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದೆ.

ತೆರೇಝ್ ಎಂ. ಸಿಕ್ವೇರರಿಗೆ 2021-22ನೇ ಉತ್ತಮ ಶಿಕ್ಷಕಿ ಜಿಲ್ಲಾ ಪ್ರಶಸ್ತಿ ಪ್ರಕಟಗೊಂಡಿತ್ತು.ಆದರೆ ಪ್ರಶಸ್ತಿ ಪ್ರದಾನದ ಹಿಂದಿನ ದಿನ ಪುತ್ತೂರಿನ ಇಬ್ಬರು ಶಿಕ್ಷಕರು ಅವರ ಬಳಿಗೆ ತೆರಳಿ ನೀವು ಪ್ರಶಸ್ತಿ ಸ್ವೀಕಾರ ಸಮಾರಂಭಕ್ಕೆ ಬರಬೇಡಿ. ಸಮಾರಂಭಕ್ಕೆ ಆಗಮಿಸಿ ಪ್ರಶಸ್ತಿ ಸ್ವೀಕರಿಸಿದರೆ ಕೆಲವು ಜನಪ್ರತಿನಿಧಿಗಳು ಸಮಾರಂಭದಿಂದ ಎದ್ದು ಹೋಗುವು ದಾಗಿ ಹೇಳಿದ್ದಾರೆ.ಆದ್ದರಿಂದ ನೀವು ಬಂದರೆ ಸಮಾರಂಭ ಹಾಳಾಗುತ್ತದೆ.ನೀವು ಬರುವುದು ಬೇಡ ಇದನ್ನು ತಿಳಿಸಲು ಅಧಿಕಾರಿಗಳು ನಮ್ಮನ್ನು ನಿಮ್ಮಲ್ಲಿಗೆ ಕಳುಹಿಸಿದ್ದಾರೆ. ಎಂದು ಹೇಳಿದ್ದರೆನ್ನಲಾಗಿದೆ.ಅದರಂತೆ ಜಿಲ್ಲಾ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ತೆರೇಝ್ ಗೈರಾಗಿದ್ದರು. ಅನಾರೋಗ್ಯದ ಕಾರಣದಿಂದ ಶಿಕ್ಷಕಿ ತೆರೇಝ್ ಗೈರಾಗಿ ದ್ದಾರೆ.ಪ್ರಶಸ್ತಿಯನ್ನು ಅವರಿಗೆ ತಲುಪಿಸಲಾಗುವುದು ಎಂದು ಸಮಾರಂಭದಲ್ಲಿ ಘೋಷಿಸಲಾಗಿತ್ತು

ಈ ನಡುವೆ ಶಾಸಕರ ಮೂಲಕ ಅಧಿಕಾರಿಗಳಿಗೆ ಒತ್ತಡ ಹೇರಿ ತೆರೇಝ್ ಪ್ರಶಸ್ತಿ ಸ್ವೀಕರಿಸಲು ಬರದಂತೆ ತಡೆಯ ಲಾಗಿದೆ.ಅವರಿಗೆ ಅಪಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು ಇದರ ವಿರುದ್ಧ ಸಾಕಷ್ಟು ಖಂಡನೆ ಆಕ್ರೋಶ ಕೇಳಿ ಬಂದಿತ್ತು.ಶಿಕ್ಷಕಿ ತೆರೇಝ್ ಸಿಕ್ವೇರರನ್ನು ಪ್ರಶಸ್ತಿ ಪಡೆದು ಕೊಳ್ಳಲು ಹೋಗದಂತೆ ತಡೆಯುವ ಮೂಲಕ ಅನ್ಯಾಯ ಮತ್ತು ಅವಮಾನ ಮಾಡಲಾಗಿದೆ ಎಂದು ಖಂಡಿಸಿ ಪಾಪೆಮಜಲು ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಸಾಮೂಹಿಕ ರಾಜೀನಾಮೆಗೆ ಮುಂದಾಗಿ ದ್ದರು.ಅಲ್ಲದೆ ಇಲ್ಲಿನ ಪೋಷಕರ ಸಭೆ ನಡೆಸಿ ಮಕ್ಕಳನ್ನು ಶಾಲೆಗೆ ಕಳುಹಿಸದೇ ಪ್ರತಿಭಟನೆ ನಡೆಸುವುದಾಗಿ ಶಾಲಾ ಎಸ್‌ಡಿಎಂಸಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು.

ಇವೆಲ್ಲಾ ಗೊಂದಲಗಳು ಉಂಟಾಗುತ್ತಿರುವಂತೆಯೇ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗೆ ತೆರಳಿ ತೆರೇಝ್ ಸಿಕ್ವೇರರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ.ಶಿಕ್ಷಣ ಇಲಾಖೆಯ ಅಧಿಕಾ ರಿಗಳು ಶಾಲೆಗೆ ಬಂದು ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಹಾಗಾಗಿ ಪ್ರಶಸ್ತಿ ವಿಚಾರದಲ್ಲಿ ಎದುರಾಗಿದ್ದ ಗೊಂದಲಗಳು ಮುಗಿದಿದೆ.ಅಧಿಕಾರಿಗಳು ಬಂದು ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ ಎಂದು ಶಿಕ್ಷಕಿ ತೆರೇಝ್ ಸಿಕ್ವೇರ ತಿಳಿಸಿದ್ದು ಹೀಗೆ ಮಾಡಿದ್ದು ಸರಿನಾ ಎಂಬ ಪ್ರಶ್ನೆ ಕಾಡುತ್ತಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.