ಚೆನ್ನೈ –
ವಿದ್ಯಾರ್ಥಿನಿಯೊಬ್ಬಳ್ಳಿಗೆ ಲೈಂಗಿಕ ಕಿರುನೀಡಿದ ಆರೋಪದ ಮೇಲೆ ಶಿಕ್ಷಕರೊಬ್ಬರ ನ್ನು ಬಂಧನ ಮಾಡಿರುವ ಘಟನೆ ಚೆನೈ ನಲ್ಲಿ ನಡೆದಿದೆ. ಹೌದು ಚೆನ್ನೈನ ಪ್ರಮುಖ ಶಾಲೆಯೊಂದರ ಕಾಮರ್ಸ್ ಶಿಕ್ಷಕನನ್ನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಮಾಜಿ ವಿದ್ಯಾರ್ಥಿನಿಯೋರ್ವಳ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
2014 ರಿಂದ 2016 ರ ನಡುವೆ ಸದರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿನಿಯೊಬ್ಬಳು ಆರೋಪಿ ಶಿಕ್ಷಕನು ತನ್ನನ್ನು ಲೈಂಗಿಕವಾಗಿ ಶೋಷಣೆ ಮಾಡಿದ್ದಾಗಿ ದೂರು ನೀಡಿದ್ದಳು.ಕಿಲ್ಪೌಕ್ ಆಲ್ ವುಮೆನ್ ಪೊಲೀಸ್ ಠಾಣೆಯ ತಂಡವು ಘಟನೆಯ ಬಗ್ಗೆ ತನಿಖೆ ಕೈಗೊಂಡು ಸಂಬಂಧಿತ ಶಿಕ್ಷಕನನ್ನು ಬಂಧಿಸಿತು ಎನ್ನಲಾಗಿದೆ.
ಇತ್ತೀಚೆಗೆ ಚೆನ್ನೈನ 5 ಶಾಲೆಗಳ ಶಿಕ್ಷಕರನ್ನು ಲೈಂಗಿಕ ಕಿರುಕುಳದ ಆರೋಪದ ಮೇಲೆ ಬಂಧಿಸಲಾಗಿದೆ ಇವರೆಲ್ಲರನ್ನು ಈಗಾಗಲೇ ಸಸ್ಪೆಂಡ್ ಮಾಡಲಾಗಿದೆ.
ಆನ್ ಲೈನ್ ತರಗತಿಗೆ ಟವಲ್ ಸುತ್ತಿಕೊಂಡು ಬರು ತ್ತಿದ್ದ ಶಿಕ್ಷಕನ ವಿರುದ್ಧ ಪ್ರತಿಷ್ಠಿತ ಶಾಲೆಯೊಂದರ ಹಾಲಿ ವಿದ್ಯಾರ್ಥಿಗಳು ಮತ್ತು ಅಲುಮಿ ಅಸೋಸಿ ಯೇಷನ್ ದನಿ ಎತ್ತಿದ ಮೇಲೆ ಈ ಕಾರ್ಯಾಚರಣೆ ಆರಂಭವಾಗಿದೆ.
ಆನ್ ಲೈನ್ ತರಗತಿಗಳ ಸಂದರ್ಭದಲ್ಲೂ ಶಾಲಾ ಮಕ್ಕಳಿಗೆ ಅಸಂಬದ್ಧ ಚಿತ್ರಗಳನ್ನು ಮತ್ತು ಸಂದೇಶ ಗಳನ್ನು ಕಳುಹಿಸಿ ಲೈಂಗಿಕ ಕಿರುಕುಳ ನೀಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.ಆದ್ದರಿಂದ ವರ್ಚುವಲ್ ತರಗತಿಗಳನ್ನು ನಿಯಂತ್ರಿಸಲು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಹಲವು ನಿರ್ದೇಶನಗಳನ್ನು ನೀಡಿದ್ದಾರೆ.ಆನ್ ಲೈನ್ ತರಗತಿಗಳನ್ನು ರೆಕಾರ್ಡ್ ಮಾಡಿ ನಂತರ ಶಾಲಾ ಆಡಳಿತ ಮತ್ತು ಪಾಲಕರ ಸಂಘದ ಸದಸ್ಯರು ಅವನ್ನು ಆಗಾಗ್ಗೆ ಪರಾಮರ್ಶಿಸುವುದು ಈ ನಿಟ್ಟಿನಲ್ಲಿ ತೆಗೆದುಕೊಂಡಿರುವ ಒಂದು ಕ್ರಮವಾಗಿದೆ.