2014 – 2015 ರಲ್ಲಿ ನಡೆದ ಶಿಕ್ಷಕರ ಅಕ್ರಮಕ್ಕೆ ಮರು ಜೀವ ಕೊಟ್ಟ ರಾಜ್ಯ ಸರ್ಕಾರ – ಚುರುಕುಗೊಂಡ ಸಿಐಡಿ ತನಿಖೆ ದಿನಕ್ಕೊಂದು ಹೊಸಬರುತ್ತಿವೆ ಸ್ಪೋಟಕ ವಿಚಾರಗಳು

Suddi Sante Desk
2014 – 2015 ರಲ್ಲಿ ನಡೆದ ಶಿಕ್ಷಕರ ಅಕ್ರಮಕ್ಕೆ ಮರು ಜೀವ ಕೊಟ್ಟ ರಾಜ್ಯ ಸರ್ಕಾರ – ಚುರುಕುಗೊಂಡ ಸಿಐಡಿ ತನಿಖೆ ದಿನಕ್ಕೊಂದು ಹೊಸಬರುತ್ತಿವೆ ಸ್ಪೋಟಕ ವಿಚಾರಗಳು

ಬೆಂಗಳೂರು

 

ಹೌದು ಸಿದ್ದರಾಮಯ್ಯ ಕಾಲದ ಶಿಕ್ಷಕರ ಅಕ್ರಮ ನೇಮಕಕ್ಕೆ ರಾಜ್ಯ ಬಿಜೆಪಿ ಸರ್ಕಾರ ಮರುಜೀವ ಕೊಟ್ಟಿದ್ದು ಸಿಐಡಿ ತನಿಖೆ ಚುರುಕುಗೊಂಡಿದೆ ಈ ಹಿಂದೆ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ನಡೆದ ಶಿಕ್ಷಕರ ನೇಮಕಾತಿ ಹಗರಣದ ತನಿಖೆ ಯನ್ನು ರಾಜ್ಯ ಸರಕಾರ ಈಗ ಚುರುಕುಗೊಳಿ ಸಿದ್ದು ಅಕ್ರಮವಾಗಿ ಉದ್ಯೋಗ ಪಡೆದವರ ಸಂಖ್ಯೆ 12 ಅಲ್ಲ 80 ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.

 

ಆರಂಭದಲ್ಲಿ ಎಂಟು ಜನರು ಈ ರೀತಿ ಉದ್ಯೋಗ ಗಿಟ್ಟಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.ಆ ಬಳಿಕ ಶಿಕ್ಷಣ ಇಲಾಖೆಯಿಂದ 12 ಜನರು ಎಂಬ ಮಾಹಿತಿ ಹೊರಬಿತ್ತು ಈಗ ಸಿಐಡಿ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಅಕ್ರಮವಾಗಿ ಶಿಕ್ಷಕರ ಹುದ್ದೆ ಗಿಟ್ಟಿಸಿದವರ ಸಂಖ್ಯೆ 80 ಕ್ಕೂ ಹೆಚ್ಚು ಎಂಬ ಮಾಹಿತಿ ಲಭ್ಯವಾಗುತ್ತಿದೆ.

 

ಈ ವಿಚಾರ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ದೊಡ್ಡಮಟ್ಟದ ರಾಜಕೀಯ ಸಂಘರ್ಷಕ್ಕೆ ಕಾರಣ ವಾಗುವ ಸಾಧ್ಯತೆ ಇದ್ದು ಈ ಸಂಖ್ಯೆ 100ದಾಟುವ ಸಾಧ್ಯತೆ ಇದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.2014-15 ರಲ್ಲಿ ನಡೆದ ಶಿಕ್ಷಕರ ನೇಮ ಕಾತಿ ಅಕ್ರಮದಲ್ಲಿ ಅಂದಿನ ಶಿಕ್ಷಣ ಇಲಾಖೆ ಅಧಿಕಾರಿಗಳೇ ನೇರವಾಗಿ ಭಾಗಿಯಾಗಿದ್ದಾರೆ ರಾಜಕೀಯ ಒತ್ತಡ ಕಾರಣಕ್ಕೆ ಈ ರೀತಿ ನೇಮಕ ನಡೆದಿದೆ ಎಂಬ ಆರೋಪ ವ್ಯಕ್ತವಾಗಿತ್ತು ಮುಖ್ಯ ಪಟ್ಟಿಯನ್ನ ಬಿಟ್ಟು ಹೆಚ್ಚುವರಿ ಆಯ್ಕೆ ಪಟ್ಟಿಯಲ್ಲಿ ಅಕ್ರಮವಾಗಿ ಶಿಕ್ಷಕರ ನೇಮಕಾತಿ ಮಾಡಲಾಗಿದೆ ಎಂಬ ಮಾತು ಕೇಳಿ ಬಂದಿತ್ತು

 

ಸಿದ್ದರಾಮಯ್ಯ ಸರಕಾರದ ಕೊನೆ ಅವಧಿಯಲ್ಲಿ ಅಂದರೆ 2017-18 ರಲ್ಲಿ ನೇಮಕ ‌ಪ್ರಕ್ರಿಯೆ ಮುಕ್ತಾಯಗೊಂಡಿತ್ತು ಆಗ ಅಕ್ರಮವಾಗಿ ನೇಮಕವಾದ ಶಿಕ್ಷಕರಿಗೆ ಆದೇಶ ಪತ್ರ ನೀಡಲಾ ಗಿತ್ತು ಮುಖ್ಯ ಪಟ್ಟಿಯಲ್ಲಿ ಮೆರಿಟ್ ಲಿಸ್ಟ್ ಬಿಡುಗಡೆಯಾಗಿದ್ದು ಒಬ್ಬರ ಹೆಸರು ಆದರೆ ಹೆಚ್ಚುವರಿ ಪಟ್ಟಿಯಲ್ಲಿ ನೇಮಕವಾಗಿದ್ದು ಇನ್ನೊಬ್ಬರ ಹೆಸರು ಇದ್ದದ್ದು ಅನುಮಾನಕ್ಕೆ ಕಾರಣವಾಗಿತ್ತು

 

ನೇಮಕಾತಿಗೆ ನಿಗದಿ ಮಾಡಿದ್ದ ಕಟಾಫ್ ಅಂಕವನ್ನೇ ಕಡಿತ ಮಾಡಿ ಶಿಕ್ಷಕರ ನೇಮಕಾತಿ ಮಾಡಲಾಗಿತ್ತು ಹೆಚ್ಚು ಅಂಕ ಬಂದಿರುವ ಅಭ್ಯರ್ಥಿ ಬದಲಾಗಿ ಕಡಿಮೆ ಅಂಕ ಬಂದಿರುವ ಅಭ್ಯರ್ಥಿಗಳ ಹೆಸರು ಮೆರಿಟ್ ಲಿಸ್ಟ್ ನಲ್ಲಿ ಸೇರಿಸಿ ಆಯ್ಕೆ ಮಾಡಲಾಗಿತ್ತು ಎಂಬುದು ಪ್ರಧಾನ ಆರೋಪವಾಗಿದ್ದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿಧಾನಸಭೆಯಲ್ಲೇ ಈ ವಿಚಾರವನ್ನು ಅನಾವರ ಣಗೊಳಿಸಿದ್ದರು ಪರೀಕ್ಷೆ ಬರೆಯದೇ ಹೋದ ಅಭ್ಯರ್ಥಿಗೂ ಹೆಚ್ಚುವರಿ ಪಟ್ಟಿಯಲ್ಲಿ ಕೆಲಸ‌ ನೀಡಿದ್ದ ಅಂದಿನ ಸರ್ಕಾರ ಸಮಾಜಕ್ಕೆ ದೊಡ್ಡ ದ್ರೋಹ ಮಾಡಿದೆ ಎಂದು ಬಿಜೆಪಿ ಈಗ ಆರೋ ಪಿಸಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.