ಇಂದಿನಿಂದ ರಾಜ್ಯದಲ್ಲಿ ಮೂರು ದಿನಗಳ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರವಾಸ – ಮೂರು ದಿನಗಳ ಕಾಲ ಎಲ್ಲೆಲ್ಲಿ ಯಾವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಗೊತ್ತಾ ಕಂಪ್ಲೀಟ್ ಮಾಹಿತಿ

Suddi Sante Desk
ಇಂದಿನಿಂದ ರಾಜ್ಯದಲ್ಲಿ ಮೂರು ದಿನಗಳ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರವಾಸ – ಮೂರು ದಿನಗಳ ಕಾಲ ಎಲ್ಲೆಲ್ಲಿ ಯಾವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಗೊತ್ತಾ ಕಂಪ್ಲೀಟ್ ಮಾಹಿತಿ

ಬೆಂಗಳೂರು –

ಇಂದಿನಿಂದ ಮೂರು ದಿನಗಳ ಕಾಲ ರಾಜ್ಯಕ್ಕೆ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ಬೆಂಗಳೂರು, ಮೈಸೂರು,ಹುಬ್ಬಳ್ಳಿ ಧಾರವಾಡ ಸೇರಿದಂತೆ ಹಲವೆಡೆ ಪೂರ್ಣ ಗೊಂಡ ಸಿದ್ದತಾ ಕಾರ್ಯ ಹೌದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರದಿಂದ ಬುಧವಾರದವರೆಗೆ ಮೂರು ದಿನ ಗಳ ಕಾಲ ರಾಜ್ಯದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳ ಲಿದ್ದಾರೆ ಇದಕ್ಕಾಗಿ ಈಗಾಗಲೇ ಎಲ್ಲಾ ಸಿದ್ದತೆಗಳು ಬಹುತೇಕ ಪೂರ್ಣಗೊಂಡಿದ್ದ ನಾಳೆ ರಾಜ್ಯಕ್ಕೆ ಆಗಮಿಸಲಿದ್ದು ರಾಜ್ಯಕ್ಕೆ ಭೇಟಿ ನೀಡಲಿದ್ದು ವಿವಿಧ ಸಮಾರಂಭಗಳಲ್ಲಿ ಭಾಗವಹಿಸಲಿದ್ದಾರೆ

ಈ ಬಗ್ಗೆ ರಾಷ್ಟ್ರಪತಿ ಭವನದಿಂದ ಅಧಿಕೃತ ಪ್ರಕಟಣೆ ಕೂಡಾ ಹೊರಬಿದ್ದಿದ್ದು ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ದ್ರೌಪದಿ ಮುರ್ಮು ಅವರು ಭೇಟಿ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ.ಸೋಮವಾರದಂದು ಮುರ್ಮು ಅವರು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದಸರಾ ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ.

ನಂತರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯೋಜಿ ಸಿರುವ ಪೌರ ಸನ್ಮಾನ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗಿ ಯಾಗಲಿದ್ದಾರೆ.ಈ ಕಾರ್ಯಕ್ರಮಗಳ ಬಳಿಕ ಧಾರವಾಡದಲ್ಲಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಹೊಸ ಕ್ಯಾಂಪಸ್‌ ಅನ್ನು ಉದ್ಘಾಟಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ

ಮಂಗಳವಾರದಂದು ಬೆಂಗಳೂರಿನಲ್ಲಿರುವ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ನ ಇಂಟಿಗ್ರೇಟೆಡ್‌ ಕ್ರಯೋಜೆನಿಕ್‌ ಎಂಜಿನ್ಸ್‌ ಮ್ಯಾನುಫ್ಯಾಕ್ಚರಿಂಗ್‌ ಫೆಸಿಲಿಟಿಯನ್ನು ಉದ್ಘಾಟಿಸಲಿ ದ್ದಾರೆ.ನಂತರ ವಿಡಿಯೊ ಕಾನ್ಫರೆನ್ಸ್‌ ಮೂಲಕ ವೈರಾಲಜಿಯ ವಲಯ ಸಂಸ್ಥೆಯ (ದಕ್ಷಿಣ ವಲಯ) ಶಿಲಾನ್ಯಾಸ ನೆರವೇರಿಸಲಿ ದ್ದಾರೆ ಎಂದು ಮಾಹಿತಿ ನೀಡಿದೆ.

ಬಳಿಕ ಸೇಂಟ್‌ ಜೋಸೆಫ್‌ ವಿಶ್ವವಿದ್ಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗುವರು.ಕರ್ನಾಟಕ ಸರ್ಕಾರವು ತಮ್ಮ ಗೌರವಾರ್ಥವಾಗಿ ನಡೆಸಲಿರುವ ಪೌರ ಸನ್ಮಾನ ಕಾರ್ಯಕ್ರಮದಲ್ಲೂ ಮುರ್ಮು ಅವರು ಪಾಲ್ಗೊಳ್ಳುವರು. ಬುಧವಾರದಂದು(ಸೆಪ್ಟೆಂಬರ್‌ 28)ನವದೆಹಲಿಗೆ ವಾಪಸ್ಸಾಗು ವರು ಎಂದು ಪ್ರಕಟಣೆ ಹೇಳಿದೆ.

ರಾಜ್ಯಕ್ಕೆ ಆಗಮಿಸುತ್ತಿರುವ ರಾಷ್ಟ್ರಪತಿ ಯವರನ್ನು ರಾಜ್ಯದ ಎಲ್ಲಾ ಪಕ್ಷಗಳ ನಾಯಕರು ಸ್ವಾಗತ ಕೋರಿದ್ದು ಇನ್ನೂ ಹುಬ್ಬಳ್ಳಿಯಲ್ಲಿ ಕಾಂಗ್ರೇಸ್ ಪಕ್ಷದ ಪಾಲಿಕೆಯ ಸದಸ್ಯರು ಸ್ವಾಗತ ಮಾಡಿದ್ದು ತಾರತಮ್ಯ ಮಾಡಿದ್ದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳೊ ದಿಲ್ಲ ಎಂದಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.