ಈ ಸವಂತ್ಸರದ ಕೊನೆಯವರೆಗೂ ಇನ್ನೂ ಸಾಕಷ್ಟು ಮಳೆ ಇದೆ,ಮತಾಂದತೆ ಹೆಚ್ಚಳ,ಸಾವು ನೋವು ಹೆಚ್ಚಾಗುತ್ತವೆ – ಧಾರವಾಡದಲ್ಲಿ ಭವಿಷ್ಯ ನುಡಿದ ಕೋಡಿಮಠದ ಸ್ವಾಮಿಜಿ

Suddi Sante Desk
ಈ ಸವಂತ್ಸರದ ಕೊನೆಯವರೆಗೂ ಇನ್ನೂ ಸಾಕಷ್ಟು ಮಳೆ ಇದೆ,ಮತಾಂದತೆ ಹೆಚ್ಚಳ,ಸಾವು ನೋವು ಹೆಚ್ಚಾಗುತ್ತವೆ  – ಧಾರವಾಡದಲ್ಲಿ ಭವಿಷ್ಯ ನುಡಿದ ಕೋಡಿಮಠದ ಸ್ವಾಮಿಜಿ

ಧಾರವಾಡ

 

ಧಾರವಾಡದಲ್ಲಿ ಕೋಡಿಮಠದ ಶ್ರೀಗಳು ಭವಿಷ್ಯ ವನ್ನು ನುಡಿದ್ದಾರೆ.ಹೌದು ಪ್ರಾರಂಭದಲ್ಲೇ ನಾನು ಹೇಳಿದ್ದೆ ಮಳೆ, ಗಾಳಿ, ಗುಡುಗು ಇದೆ ಎಂದು ಬೆಂಕಿಯಿಂದ ಕಾಟ, ಮತಾಂದತೆ ಹೆಚ್ಚಳವಾಗು ತ್ತದೆ ಸಾವು ನೋವುಗಳಾಗುತ್ತವೆ ಎಂದು ಹೇಳಿದ್ದೆ ಜನ ಅಶಾಂತಿಯಿಂದ ಇರುತ್ತಾರೆ ಭೂಮಿ ನಡುಗುತ್ತದೆ ಕುಸಿಯುತ್ತದೆ ರೋಗ ಹೆಚ್ಚಾಗುತ್ತವೆ ಎಂದು ಹೇಳಿದ್ದೆ ಅದರಂತೆ ಇನ್ನೂ ಮುಂದೆ ಮಳೆಯಾಗುವ ಲಕ್ಷಣ ಇದೆ ಎಂದರು.

 

ಇನ್ನೂ ಕಾರ್ತಿಕ ಮಾಸದಲ್ಲಿ ತೊಂದರೆಯಾಗುವ ಲಕ್ಷಣ ಇದೆ.ಮಳೆಯಿಂದ, ರೋಗದಿಂದ ಭೂಮಿಯಿಂದತೊಂದರೆಯಾಗುತ್ತದೆ.ವಿಶೇಷವಾಗಿ ಹಿಂದೆ ಹೇಳಿದಂತೆ ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುತ್ತವೆ ಈಗಲೂ ಅಂತಹ ಪರಿಸ್ಥಿತಿ ಇದೆ.ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುತ್ತವೆ ಭೂಮಿಯಲ್ಲಿ ಇರುವಂತೆ ವಿಷಜಂತು, ಪ್ರಾಣಿಗಳು ಹೊರಬಂದು ಜನರಿಗೆ ತೊಂದರೆ ಕೊಡುವ ಪ್ರಸಂಗ ಬಹಳ ಇದೆ.ಹಾಗಾಗಿ ಪ್ರಕೃತಿ ಅಲ್ಲೋಲ ಕಲ್ಲೋಲ ಆಗುವ ಪ್ರಸಂಗ ಹೆಚ್ಚಿದೆ ಎಂದರು.

 

ಇನ್ನೂ ಈ ಸಂವತ್ಸರದ ಕಡೆವರೆಗೂ ಈ ತೊಂದರೆ ಇದೆ ಅಚ್ಛರಿಯ ಅವಘಡ ಕಾದಿದೆ.ಅದು ಆಗು ತ್ತದೆ ಕಾದು ನೋಡಿ ಬೆಂಕಿಯಿಂದ ಹೆಚ್ಚು ಸಮಸ್ಯೆ ಇದೆ ಅಪಮೃತ್ಯು ಹೆಚ್ಚಿದೆ ಅಶಾಂತಿಯಾಗಿ ಕಲಹ ಗಳು ಹೆಚ್ಚಾಗುತ್ತವೆ ಒಂದೆಡೆ ಪ್ರಕೃತಿ ವಿಕೋಪ, ಮತಾಂದತೆ ಹೆಚ್ಚಾಗಿ ಅಶಾಂತಿ, ಕಲಹಗಳು ಹೆಚ್ಚಾಗಿ ಜನಮನವನ್ನು ಶಾಂತಿ ಕದಡುವ ಕೆಲಸ ಆಗುತ್ತದೆ ಎಂದರು.

 

ಇನ್ನೂ ರಾಜಕೀಯ ಭವಿಷ್ಯ ಕುರಿತಂತೆ ಮಾತನಾಡಿದ ಶ್ರೀಗಳುಈಗ ಚೆನ್ನಾಗಿ ನಡೆಯು ತ್ತಿದೆ.ಚುನಾವಣೆ ಕಾಲದಲ್ಲಿ ಹೇಳುತ್ತೇನೆ ಇನ್ನೊಂದು ವರ್ಷದಲ್ಲಿ ಕೊರೊನಾ ಹೋಗುತ್ತದೆ ಬಳ್ಳಾರಿಯಲ್ಲಿ ಈ ಬಗ್ಗೆ ಹೇಳಿದ್ದೆ ಕೊರೊನಾ ಹೋಗುತ್ತದೆ ಹೋಗುವಾಗ ಜಗತ್ತಿಗೆ ವಿಪರೀತ ಕ್ಷಾಮ ಕೊಟ್ಟು ಹೋಗುತ್ತದೆ ದುಃಖ ಕೊಟ್ಟು ಹೋಗುತ್ತದೆ, ಕುಡಿಯಲು ನೀರು ಇಲ್ಲದಂತೆ ಮಾಡುತ್ತದೆ ಅಂತಹ ಪ್ರಸಂಗ ಇದೆ ಎಂದರು.

 

ಇನ್ನೂ ಭವಿಷ್ಯ ಜಗತ್ತಿನ ಇತಿಹಾಸದಲ್ಲೇ ಇಂತಹ ರೋಗ ಬಂದಿಲ್ಲ ಜನ ಕಷ್ಟ ಬಂದಾಗ ಮಾತ್ರ ದೇವರು, ಮಠ ಮಂದಿರ ಎನ್ನುತ್ತಾರೆ ಆದರೆ ಈ ಕೊರೊನಾ ಮೊದಲು ಬಂದಿದ್ದೇ ದೇವರ ಮೇಲೆ ಮೊದಲು ಮಠ, ಮಾನ್ಯಗಳ ಮೇಲೆ ಬಂತು ಆ ಮೇಲೆ ಮನುಷ್ಯರ ಮೇಲೆ ಬಂತು ಜನೆವರಿವ ರೆಗೂ ಕೊರೊನಾ ಹೆಚ್ಚು ಹರಡುವ ಕಾಲವಿದೆ ಇದು ಮತ್ತೊಂದು ರೂಪವಾಗುವ ಲಕ್ಷಣವೂ ಇದೆ ಎಂದರು.ಇನ್ನೂ ಬಹಳ ಕಷ್ಟ ಕೊಟ್ಟು ಹೋಗುತ್ತದೆ ರಾಜಕೀಯ ಬದಲಾವಣೆ ಬಗ್ಗೆ ಏನೂ ಹೇಳಲು ಹೋಗೋದಿಲ್ಲ ಎಂದು ನಸುನಕ್ಕರು.

 

ಎಲ್ಲರಿಗೂ ಒಳ್ಳೆಯದಾಗಲಿ ಸರ್ಕಾರ ಚೆನ್ನಾಗಿ ನಡೆಯುತ್ತಿದೆ ಅದಕ್ಕೇಕೆ ನಾನು ಅಪಶಕುನ ನುಡಿಯಬೇಕು  ಅದನ್ನು ಯುಗಾದಿ ಫಲದ ಮೇಲೆ ಹೇಳುತ್ತೇನೆ ಶುಭನಾಮ ಸಂವತ್ಸರ ಅಶುಭವನ್ನು ಕೊಟ್ಟು ಹೋಗುತ್ತದೆ ಎಂದರು ಇದು ಶುಭ ಆಗೋದಿಲ್ಲ ಅಶುಭವಾಗುತ್ತದೆ ಮನುಷ್ಯನಿಗೆ ಪ್ರಕೃತಿ, ಮಳೆಯಿಂದ ಸಮಸ್ಯೆ ಗಳಾಗುತ್ತವೆ.ಗುಡ್ಡಗಳು ಕುಸಿತ ಭೂಕಂಪ ಹೆಚ್ಚಾಗೋ ಲಕ್ಷಣ ಇದೆ ಪ್ರಾಣಿಗಳು, ವಿಷಜಂತು ಗಳಿಂದ ಮನುಷ್ಯನಿಗೆ ನೋವಾಗುತ್ತದೆ ಹೊರಗಡೆ ಹೋಗುವಾಗ ಕೈಯಲ್ಲಿ ಬಡಿಗೆ ಹಿಡಿದುಕೊಂಡು ಹೋಗುವುದು ಒಳ್ಳೆಯದು ಎಂದರು.ಅದು ಸಂರಕ್ಷಣೆಯಾಗುತ್ತದೆ ಆಶ್ವಿಜ ಕೊನೆಯಿಂದ ಯುಗಾದಿ ಕೊನೆಯವರೆಗೂ ಅಗಾಂಗ ಕಾಯಿಲೆಗಳು ಹೆಚ್ಚಾಗುತ್ತವೆ ಪಾರ್ಶ್ವವಾಯು, ಹೃದಯಾಘಾತ ಈ ಕಾಯಿಲೆ ಹೆಚ್ಚಾಗಿ ಜನ ಸಾಯುತ್ತಾರೆ.ಮೂರು ತಿಂಗಳಲ್ಲಿ ಈ ಕಾಯಿಲೆ ಹೆಚ್ಚಾಗಲಿದೆ ಎನ್ನುತ್ತಾ ಮಾತನ್ನು ಮುಗಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.