ಕೋಲಾರ –
ಸಾಮಾನ್ಯವಾಗಿ ತೈಲ ಬೆಲೆ ಏರಿಕೆ ಖಂಡಿಸಿ ಬೈಕ್ ತಗೆದುಕೊಂಡು ಬಂದು ಇಲ್ಲವೇ ಎತ್ತು ಚಕ್ಕಡಿ ಗಳಲ್ಲಿ ಬಂದು ಪ್ರತಿಭಟನೆ ಮಾಡೊದು ಸಾಮಾನ್ಯ ಆದರೆ ಕೋಲಾರ ದಲ್ಲಿ ವಿಭಿನ್ನವಾದವೊಂದು ಪ್ರತಿಭಟನೆ ಕಂಡು ಬಂದಿತು.ಹೌದು ಕೇಂದ್ರ ಸರ್ಕಾರದ ತೈಲ ಬೆಲೆ ಏರಿಕೆ ಖಂಡಿಸಿ ನಗರದಲ್ಲಿ ಕಾಂಗ್ರೆಸ್ ಪಕ್ಷದವರು ಪ್ರತಿಭಟನೆ ಮಾಡಿದರು ಅದು ಬೈಕ್ ಗೆ ಬೆಂಕಿ ಹಚ್ಚಿ ಆಕ್ರೋಶವನ್ನು ವ್ಯಕ್ತಪಡಿಸಿದರು
ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೇಸ್ ಶಾಸಕಿ ನೇತ್ರತ್ವದಲ್ಲಿ ಪ್ರತಿಭಟನೆ ನಡೆ ಯಿತು.ಬೈಕ್ ಸುಟ್ಟು ಆಕ್ರೋಶವನ್ನು ವ್ಯಕ್ತಪಡಿಸಿದ ಕಾಂಗ್ರೆಸ್ ನವರು ಪ್ರತಿಭಟನೆ ಮಾಡಿದರು
ಕೋಲಾರ ಕೆಜಿಎಫ್ ನಗರದ ಗಾಂಧಿ ವೃತ್ತದಲ್ಲಿರುವ ಪೆಟ್ರೋಲ್ ಬಂಕ್ ಬಳಿ ಈ ಒಂದು ಪ್ರತಿಭಟನೆ ನಡೆಯಿತು.ಕಾಂಗ್ರೆಸ್ ಶಾಸಕಿ ರೂಪಾ ಶಶಿಧರ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು
ನಗರಸಭೆ ಅಧ್ಯಕ್ಷ ವಲ್ಲಾಳ ಮುನಿಸ್ವಾಮಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿ ದ್ದರು.ಕೇಂದ್ರ ಸರ್ಕಾರದ ವಿರುದ್ಧ, ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶವನ್ನು ಇವರು ವ್ಯಕ್ತಪಡಿಸಿದರು
ಬೈಕ್ ಗೆ ಬೆಂಕಿ ಇಟ್ಟು ಪೆಟ್ರೋಲ್ ಡೀಸಲ್ ಬೆಲೆ ಏರಿಕೆ ಖಂಡಿಸಿದರು.ರಸ್ತೆ ಮಧ್ಯೆ ಧಗ ಧಗನೆ ಹೊತ್ತಿ ಉರಿದ ಬೈಕ್,ಕೆಲಕಾಲ ಆತಂಕ ಸೃಷ್ಟಿಸಿತು ಬೈಕ್ ಗೆ ಬೆಂಕಿ,ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆಯಿತು.ಕೋಲಾರ ಜಿಲ್ಲೆ ಕೆಜಿಎಫ್ ನಲ್ಲಿ ನಡೆದ ಪೆಟ್ರೋಲ್ ಡೀಸಲ್ ಬೆಲೆ ಏರಿಕೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಇದು ಕಂಡು ಬಂದಿತು