ವಿಜಯಪುರ –
ಕರೋನ ಮಹಾಮಾರಿಯ ನಡುವೆ ಈ ಬಾರಿ ರಾಜ್ಯ ದಲ್ಲಿ ಸರ್ಕಾರ ಪ್ರಸಕ್ತ ವರ್ಷದ SSLC ಪರೀಕ್ಷೆ ಗಳನ್ನು ಸರಳವಾಗಿ ನಡೆಸಲು ಮುಂದಾಗಿದೆ. ಈಗಾಗಲೇ ಎಲ್ಲಾ ಸಿದ್ದತೆಯನ್ನು ಮಾಡಿಕೊಂಡಿದ್ದು ಇನ್ನೇನು ಪರೀಕ್ಷೆ ನಡೆಸೊದು ಒಂದೇ ಬಾಕಿ ಇದರ ನಡುವೆ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು
ಹೌದು ಬಹು ಆಯ್ಕೆಯ ಉತ್ತರ ಮಾದರಿ ಪರೀಕ್ಷೆ ನಡೆಸಿದರೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾ ಯವಾಗಲಿದೆ.ಹೀಗೆ ಪರೀಕ್ಷೆ ನಡೆಸಿದರೆ ನಾವು ಪರೀಕ್ಷೆ ಬಹಿಷ್ಕರಿಸುವುದಾಗಿ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ವಿಜಯಪುರದ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಈಗ ಸಿಡಿದೆದ್ದು ಪ್ರತಿಭಟನೆ ನಡೆಸಿ ಆಕ್ರೋಶವನ್ನು ವ್ಯಕ್ತಪಡಿಸಿದರು
ಮೌನವಾಗಿ ಶಾಲೆಯ ಮುಂದೆ ನಿಂತುಕೊಂಡು ಪ್ರತಿಭಟನೆ ಮಾಡಿ ಶಿಕ್ಷಣ ಸಚಿವ ಸುರೇಶ ಕುಮಾರ್ ಅವರಿಗೆ ಸಾಮೂಹಿಕವಾಗಿ ಲಿಖಿತ ಪತ್ರ ಬರೆದು ಪ್ರತಿಭಟನೆ ನಡೆಸಿದರು
ನಗರದ ವಿಕಾಸ ಶಾಲೆ ವಿದ್ಯಾರ್ಥಿಗಳು ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿ ಕೊನೆಗೆ ಸಾಮೂಹಿಕ ವಾಗಿ ಪತ್ರವನ್ನು ಬರೆದು ಎಚ್ಚರಿಕೆ ನೀಡಿದರು
ಬಹು ಆಯ್ಕೆಯ ಪ್ರಶ್ನೆ ಪತ್ರಿಕೆಯ ಪರೀಕ್ಷೆ ನಡೆಸಿದರೆ ಪರೀಕ್ಷೆ ಬಹಿಷ್ಕಾರಿಸುವುದಾಗಿ ಎಚ್ಚರಿಸಿರುವ ವಿದ್ಯಾ ರ್ಥಿಗಳು ಅವೈಜ್ಞಾನಿಕವಾದ ಇಂಥ ಮಾದರಿ ಪರೀಕ್ಷೆ ಯಿಂದ ಲಾಕ್ ಡೌನ್ ಸಂಕಷ್ಟದ ಸಂದರ್ಭದಲ್ಲೂ ಹಗಲು-ರಾತ್ರಿ ಎನ್ನದೇ ಓದಿದ್ದೇವೆ ನಮಗೆ ಅನ್ಯಾಯ ಆಗುತ್ತದೆ ಎಂದರು
ನಾವೆಲ್ಲರೂ ಪರೀಕ್ಷೆಯನ್ನು ಸಮರ್ಥವಾಗಿ ಎದುರಿ ಸುವ ಸರ್ವ ಸಿದ್ಧತೆ ಮಾಡಿಕೊಂಡಿರುವ ಪ್ರತಿಭಾ ವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಲಿದೆ ಹೀಗಾಗಿ ಬಹು ಅಯ್ಕೆ ಪ್ರಶ್ನೆಯ ಪರೀಕ್ಷೆ ನಡೆಸದಂತೆ ಶಿಕ್ಷಣ ಸಚಿವ ಸುರೇಶ ಕುಮಾರ್ ಅವರಿಗೆ ಬರೆದು ತಮ್ಮ ನೋವನ್ನು ಪತ್ರಗಳಲ್ಲಿ ವಿವರಿಸಿದ್ದಾರೆ.
ಶಿಕ್ಷಣ ಸಚಿವರು SSLC ಪರೀಕ್ಷೆ ನಡೆಸುವ ಬಹು ಅಯ್ಕೆಯ ಪ್ರಶ್ನೆಯ ಪರೀಕ್ಷೆ ನಡೆಸುವ ನಿರ್ಧಾರ ದಿಂದ ವಿದ್ಯಾರ್ಥಿಗಳಿಗೆ ನೋವಾಗಿದೆ.ಬಹು ಆಯ್ಕೆ ಯ ಹಾಗೂ ಗ್ರೇಡ್ ಫಲಿತಾಂಶ ಕೊಡುವ ಇಂಥ ಪರೀಕ್ಷೆ ನಮಗೆ ಬೇಡ ಎಂದರು
ಇನ್ನೂ ಇದರ ಬದಲಾಗಿ ವಿಸ್ತ್ರತ ಬರವಣಿಗೆ ರೂಪ ದಲ್ಲೆ 500 ಅಂಕಗಳ ಪರೀಕ್ಷೆ ನಡೆಸಿ ಎಂದು ಅಗ್ರಹಿಸಿ ಒತ್ತಾಯ ಮಾಡಿದರು
ಇದರ ಹೊರತಾಗಿ ಮಲ್ಟಿಪಲ್ ಚಾಯ್ಸ್ ಪರೀಕ್ಷೆ ನಡೆಸಿದರೆ ಪರೀಕ್ಷೆ ನಡೆಸುವುದಕ್ಕೆ ಸರ್ಕಾರ ಅಂಟಿ ಕೊಂಡರೆ ಪರೀಕ್ಷೆ ಬರೆಯದೆ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ.
ಗ್ರೇಡ್ ಅಂಕದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಲಿದೆ.ಭವಿಷ್ಯದ ಶೈಕ್ಷಣಿಕ ಜೀವನ ದಲ್ಲಿ ಸಾಕಷ್ಟು ಸಮಸ್ಯೆ ಎದುರಾಗಲಿದೆ.
ಹೀಗಾಗಿ ಶಿಕ್ಷಣ ಸಚಿವರು ಹಾಗೂ ಸರಕಾರ ಪರೀಕ್ಷೆ ನಡೆಸು ವುದಕ್ಕೆ ಪ್ರಕಟಿಸಿರುವ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದ್ದಾರೆ.