ಬೆಂಗಳೂರು –

ಕರೋನಾ ಪಾಸಿಟಿವಿಟಿ ಕಡಿಮೆಯಾದ ಹಿನ್ನಲೆ ಯಲ್ಲಿ ರಾಜ್ಯದ ಹನ್ನೊಂದು ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಿದ್ದಾರೆ. ಲಾಕ್ ಡೌನ್ ಸಡಿಲಿಕೆ ಮಾಡಿದರು ಕೂಡಾ ಕೆಲವೊಂದಿಷ್ಟು ವಲಯಗಳಿಗೆ ಮಾತ್ರ ಅವಕಾಶಗಳನ್ನು ನೀಡಿ ಪ್ರಮುಖವಾಗಿ ಬಸ್ ಸಂಚಾರ ವ್ಯವಸ್ಥೆಗೆ ಅವಕಾಶವನ್ನು ನೀಡಿಲ್ಲ. ಸರಿ ಸರ್ಕಾರದ ನಿರ್ಧಾರವನ್ನು ಸ್ವಾಗತ ಮಾಡಲೆ ಬೇಕು ಇದು ಒಂದು ಕಡೆ ಆದರೆ ಇನ್ನೂ ಮತ್ತೊಂದು ಕಡೆಗೆ ಸಧ್ಯ ನಾಳೆಯಿಂದ ಶಾಲೆಗಳಿಗೆ ಶಿಕ್ಷಕರನ್ನು ಹಾಜರಾಗಲು ಶಿಕ್ಷಣ ಇಲಾಖೆ ಆದೇಶವನ್ನು ನೀಡಿದೆ ಒಂದು ಕಡೆ ಇನ್ನೂ ಕಡಿಮೆಯಾಗದ ಕರೋನಾ ಮತ್ತೊಂದು ಕಡೆಗೆ ಬಸ್ ಗಳಿಲ್ಲದೇ ನಾಳೆಯಿಂದ ಶಾಲೆಗಳಿಗೆ ಹೇಗೆ ಹೊಗಬೇಕು ಎಂಬ ದೊಡ್ಡ ಚಿಂತೆಯಲ್ಲಿ ನಾಡಿನ ಶಿಕ್ಷಕರಿದ್ದಾರೆ.ಹೇಗಾದರೂ ಮಾಡಿ ಇನ್ನೂ ಹದಿನೈದು ದಿನಗಳ ಕಾಲ ಮನೆಯಿಂ ದಲೇ ಶಿಕ್ಷಕರಿಗೆ ಕೆಲಸ ಮಾಡಲು ಅವಕಾಶ ಕೊಡಿ ಎಂದು ನಾಡಿನ ಗ್ರಾಮೀಣ ಪ್ರಾಥಮಿಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘ ಸೇರಿದಂತೆ ಎಲ್ಲಾ ವಿಧಾನ ಪರಿಷತ್ ಸದಸ್ಯರು ಸರ್ಕಾರಕ್ಕೆ ಸಾಲು ಸಾಲಾಗಿ ಪತ್ರಗಳನ್ನು ಬರೆದು ಜುಲೈ 1 ರಿಂದ ಶಾಲೆ ಗಳನ್ನು ಪ್ರಾರಂಭ ಮಾಡಿ ಎಂದು ಒತ್ತಾಯವನ್ನು ಮಾಡಿದ್ದಾರೆ ಆದರೂ ಕೂಡಾ ಈವರೆಗೆ ಸರ್ಕಾರ ದಿಂದ ಶಿಕ್ಷಣ ಸಚಿವರಿಂದ ಇಲಾಖೆಯಿಂದ ಸ್ಪಷ್ಟ ವಾದ ಸಂದೇಶ ಮಾತ್ರ ಬರುತ್ತಿಲ್ಲ

ಹೀಗಾಗಿ ಒಂದೆಡೆ ನಾಳೆ ಬೆಳಗಾದರೆ ಶಾಲೆಗಳಿಗೆ ಹೋಗುವ ಚಿಂತೆ ಮತ್ತೊಂದು ಕಡೆಗೆ ಕಡಿಮೆಯಾಗ ದ ಕರೋನಾ ಕಾಟ ಹೀಗಾಗಿ ಏನು ಮಾಡಬೇಕು ಎಂಬ ದೊಡ್ಡ ಆತಂಕದಲ್ಲಿ ನಾಡಿನ ಶಿಕ್ಷಕರಿದ್ದಾರೆ ಕಳೆದ ಮೂರು ನಾಲ್ಕು ದಿನಗಳಿಂದ ಬಿಡುವಿಲ್ಲದೇ ಈ ಕುರಿತಂತೆ ಒತ್ತಾಯವನ್ನು ಮಾಡತಾ ಇದ್ದಾರೆ ಆದ್ರೂ ಕೂಡಾ ಯಾವುದೇ ಸಂದೇಶ ಸಿಗುತ್ತಿಲ್ಲ ಹೀಗಾಗಿ ಈಗಾಗಲೇ ತಮ್ಮ ತಮ್ಮ ಊರುಗಳಲ್ಲಿ ಇರುವ ಶಿಕ್ಷಕರು ಹೇಗೆ ಹೋಗಬೇಕು ಅಲ್ಲಿಂದ ಹೇಗೆ ಶಾಲೆಗಳಿಗೆ ಹೋಗ ಬೇಕು ಎಂದು ದೊಡ್ಡ ಚಿಂತೆಯಲ್ಲಿದ್ದಾರೆ.