ಧಾರವಾಡ –
ಅಂತೂ ಇಂತೂ ಕೊನೆಗೂ ಮಹಾಮಾರಿಯ ಅಬ್ಬರ ಕಡಿಮೆಯಾಗುತ್ತಿದ್ದಂತೆ ರಾಜ್ಯದಲ್ಲಿ ಹೊಸ ಶೈಕ್ಷಣಿಕ ವರುಷ ಆರಂಭಗೊಂಡಿದೆ.ಇಂದಿನಿಂದ ರಾಜ್ಯದಲ್ಲಿ ಹೊಸ ಶೈಕ್ಷಣಿಕ ವರ್ಷ ಆರಂಭಗೊಂಡಿ ದ್ದು ಹೀಗಾಗಿ ಕಳೆದ ಹಲವು ದಿನಗಳಿಂದ ಬಾಗಿಲು ಮುಚ್ಚಿದ್ದ ಶಾಲೆಗಳ ಬಾಗಿಲು ಇಂದಿನಿಂದ ತೆರೆದು ಕೊಂಡಿದ್ದು ಸರ್ಕಾರದ ಸೂಚನೆಯ ಹಿನ್ನಲೆಯಲ್ಲಿ ಬಸ್ ಇರದಿದ್ದರೂ ಕೂಡಾ ಶಾಲೆಗಳಿಗೆ ಆಗಮಿಸಿದ ಶಿಕ್ಷಕರು ಶಾಲೆಯ ಬೀಗ ತೆರೆದು ಬಾಗಿಲು ತಗೆದು ನಂತರ ಸ್ವಚ್ಚತೆ ಮಾಡಿದರು.
ಯಾರು ಇರಿದಿದ್ದರೂ ಕೂಡಾ ತಾವೇ ಕೈಯಲ್ಲೊಂ ದು ಜಾಡುವನ್ನು ಹಿಡಿದುಕೊಂಡು ಸ್ವಚ್ಚತೆಯನ್ನು ಮಾಡಿದರು. ಧಾರವಾಡ ಜಿಲ್ಲೆಯ ಬಹುತೇಕ ಕಡೆಗ ಳಲ್ಲಿ ಇಂಥಹ ಚಿತ್ರಣ ಕಂಡು ಬಂದಿತು.ಶಿಕ್ಷಕರೇ ಶಾಲೆಗಳಿಗೆ ಆಗಮಿಸಿ ಮೊದಲನೇಯ ದಿನವಾದ ಇಂದು ಸಂಪೂರ್ಣವಾಗಿ ಸ್ಚಚ್ಚತೆಯನ್ನು ಮಾಡಿ ನಂತರ ಹೊಸ ಶೈಕ್ಷಣಿಕ ವರ್ಷದ ಆರಂಭದ ಮೊದ ಲನೇಯ ದಿನವನ್ನು ಬರಮಾಡಿಕೊಂಡರು.
ಸಧ್ಯ ಬಸ್ ಸಂಚಾರವಿಲ್ಲ ಆದರೂ ಕೂಡಾ ಏನೇ ಲ್ಲಾ ಕಷ್ಟ ಪಟ್ಟ ನಮ್ಮ ಶಿಕ್ಷಕರು ಶಾಲೆಗಳಿಗೆ ಆಗಮಿಸಿ ಎಲ್ಲವನ್ನೂ ಸಂಪೂರ್ಣವಾಗಿ ಕ್ಲೀನಿಂಗ್ ಕಾರ್ಯ ವನ್ನು ಮಾಡಿ ನಂತರ ನೆನಪಿಗಾಗಿ ಸಸಿ ಗಳನ್ನು ನೆಟ್ಟು ವಿಶೇಷವಾಗಿ ಮೊದಲನೇಯ ದಿನವನ್ನು ಶಾಲೆಗಳಲ್ಲಿ ಕಳೆಯುವುದರೊಂದಿಗೆ ಶಿಕ್ಷಕರು ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭ ಮಾಡಿದರು.
ಇನ್ನೂ ಪ್ರಮುಖವಾಗಿ ಒಂದು ಕಡೆಗೆ ಬಿಟ್ಟು ಬಿಡಲಾರದ ಮಳೆರಾಯ ಮತ್ತೊಂದು ಕಡೆಗೆ ಬಸ್ ಸಂಚಾರ ವಿಲ್ಲ ಹೀಗಾಗಿ ಶಿಕ್ಷಕರು ಏನೇಲ್ಲಾ ಕಷ್ಟ ಪಟ್ಟು ಶಾಲೆಗಳಿಗೆ ಬರುತ್ತಿದ್ದು ದುರಂತವೇ ಸರಿ.