ಶಿಕ್ಷಕರ ಬಂಧಿತರ ಸಂಖ್ಯೆ 100ಕ್ಕೆ ಏರಿಕೆ ಇನ್ನೂ ಹೆಚ್ಚುತ್ತಾ ಇದೆ ಆರೋಪಿಗಳ ಶಿಕ್ಷಕರ ಸಂಖ್ಯೆ

Suddi Sante Desk
ಶಿಕ್ಷಕರ ಬಂಧಿತರ ಸಂಖ್ಯೆ 100ಕ್ಕೆ ಏರಿಕೆ ಇನ್ನೂ ಹೆಚ್ಚುತ್ತಾ ಇದೆ ಆರೋಪಿಗಳ ಶಿಕ್ಷಕರ ಸಂಖ್ಯೆ

ಬೆಂಗಳೂರು

2012​​-13 ಹಾಗೂ 2014-15ನೇ ಸಾಲಿನಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ವಿಧಾನಸೌಧ ಹಾಗೂ ಹಲಸೂರುಗೇಟ್‌ ಪೊಲೀಸ್‌ ಠಾಣೆಗಳಲ್ಲಿ ಪ್ರತ್ಯೇಕವಾಗಿ ಮೂರು ಎಫ್‌ಐಆರ್‌ ದಾಖಲಾಗಿದ್ದು ಮುಂದಿನ ಹಂತ ದಲ್ಲಿ ಇನ್ನೂ ಮತ್ತಷ್ಟು ಎಫ್‌ ಐಆರ್ ಗಳು ದಾಖ ಲಾಗಲಿವೆ ಅದರಂತೆ ಬಂಧಿತ ಶಿಕ್ಷಕರ ಸಂಖ್ಯೆ ಕೂಡ ಹೆಚ್ಚಾಗಲಿದ್ದು ಈವರೆಗೆ 41 ಶಿಕ್ಷಕರು, 7 ಮಂದಿ ಜಂಟಿ ನಿರ್ದೇಶಕರು ಹಾಗೂ ಇಬ್ಬರು ನೌಕರರು ಬಂಧಿತರಾಗಿದ್ದಾರೆ. ಇದು ಅಧಿಕೃತ ವಾದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಂಧನ ಮಾಡಲಾಗಿದೆ.ತನಿಖೆ ಮುಂದುವರೆಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಶಿಕ್ಷಕರ ನೇಮಕಾತಿ ಸಂಬಂಧ ಹೆಚ್ಚುವರಿ ಪಟ್ಟಿಯಲ್ಲಿದವರ ಆಯ್ಕೆ ಪ್ರಕ್ರಿಯೆಯನ್ನು ನಾಲ್ಕೈದು ವರ್ಷ ನಡೆಸಿದ್ದಾರೆ.ಇದರಿಂದ ಹಂತ ಹಂತವಾಗಿ ವಾಮಮಾರ್ಗದಲ್ಲಿ ಕೆಲವರು ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳಲು ಅನುಕೂಲವಾ ಗಿದೆ. ಈ ಅಕ್ರಮದಲ್ಲಿ ಬೆಂಗಳೂರು ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯ ಪ್ರಥಮ ದರ್ಜೆ ಸಹಾಯಕ ಪ್ರಸಾದ್‌ ಪ್ರಮುಖ ಪಾತ್ರವಹಿಸಿ ದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶಿಕ್ಷಕರ ನೇಮಕಾತಿಯಲ್ಲಿ ನಗದು ರೂಪದಲ್ಲಿ ಹಣದ ವ್ಯವಹಾರ ನಡೆದಿದೆ. ಬ್ಯಾಂಕ್‌ ಖಾತೆಗಳ ಮೂಲಕ ಹಣ ವರ್ಗಾವಣೆ ನಡೆದಿಲ್ಲ ಹೀಗಾಗಿ ಅಕ್ರಮದಲ್ಲಿ ಹಣ ಚಲಾವಣೆಗೆ ಪುರಾವೆ ಪತ್ತೇ ದಾರಿಕೆ ಸವಾಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸಬ್‌ ಇನ್ಸ್ಪೆಕ್ಟರ್ ನೇಮಕಾತಿ ಹಗರಣದಲ್ಲಿ 102 ಮಂದಿ ಬಂಧಿತರಾಗಿದ್ದಾರೆ. ಅದೇ ರೀತಿ ಶಿಕ್ಷಕರ ನೇಮಕಾತಿಯಲ್ಲಿ ಕೂಡಾ ಬಂಧಿತರ ಸಂಖ್ಯೆ ಶತಕ ದಾಟುವ ಲಕ್ಷಣಗಳು ಕಂಡು ಬಂದಿವೆ.ತಪ್ಪಿಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸುವಂತೆ ಸರ್ಕಾರ ಕೂಡಾ ತನಿಖಾ ತಂಡಗಳಿಗೆ ಫ್ರೀ ಹ್ಯಾಂಡ್‌ ನೀಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.