OPS ಸಂಕಲ್ಪ ಯಾತ್ರೆಗೆ ಬೆಂಬಲ ಘೋಷಣೆ ಮಾಡಿದ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯ ಘಟಕ

Suddi Sante Desk
OPS ಸಂಕಲ್ಪ ಯಾತ್ರೆಗೆ ಬೆಂಬಲ ಘೋಷಣೆ ಮಾಡಿದ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯ ಘಟಕ

ಧಾರವಾಡ

ಸಧ್ಯ ರಾಜ್ಯದಲ್ಲಿ ಹಳೆ ಪಿಂಚಣಿ ಗಾಗಿ ನಡೆಯುತ್ತಿ ರುವ ಸರ್ಕಾರಿ ನೌಕರರ ಪ್ರತಿಭಟನೆ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದ್ದು ಇನ್ನೂ ಈ ಒಂದು ವಿಚಾರ ಕುರಿತು ಬೆಂಗಳೂರಿನಲ್ಲಿ ನವೆಂಬರ್ 19 ರಂದು OPS ಸಂಕಲ್ಪ ಯಾತ್ರೆ ಯನ್ನು ಹಮ್ಮಿಕೊಂಡಿದ್ದು ಈ ಒಂದು ಯಾತ್ರೆಗೆ  ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯ ಘಟಕ ದವರು ಬೆಂಬಲ ವನ್ನು ಘೋಷಣೆ ಮಾಡಿದ್ದಾರೆ

ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ )ರಾಜ್ಯ ಘಟಕ ಧಾರವಾಡ ಸಂಘದ ರಾಜ್ಯಾಧ್ಯಕ್ಷರಾದ  ಡಾ. ಲತಾ ಎಸ್ ಮುಳ್ಳೂರ ಇವರ ನಿರ್ದೇಶನದಂತೆ ಹೊಸ ಪಿಂಚಣಿ ತೊಲಗಲಿ  ಹಳೆ ಪಿಂಚಣಿ ಜಾರಿಯಾಗಲಿ ಎಂಬ

ಡಿಸೆಂಬರ್ 19, 2022ರಂದು ನೌಕರರಿಗೆ ಮಾರಕವಾಗಿರುವ ಹೊಸ ಪಿಂಚಣಿ ಯೋಜನೆ ರದ್ದತಿಗಾಗಿ ಹಾಗೂ  ಸುನಿಶ್ಚಿತ ಹಳೆ ಪಿಂಚಣಿ ಯೋಜನೆ ಜಾರಿಗಾಗಿ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ ನಡೆಯಲಿದೆ

ಈ ಕುರಿತು ಜಾಗೃತಿಗಾಗಿ ಸಂಕಲ್ಪ ಯಾತ್ರೆ ರಾಜ್ಯದ ವಿವಿಧ ಜಿಲ್ಲೆಗಳನ್ನು ಸಂಚರಿಸುತ್ತಿದೆ  ಈ ಒಂದು ಬೃಹತ್ ಪ್ರತಿಭಟನೆ ರಾಲಿಗೆ ರಾಜ್ಯದ ಎಲ್ಲಾ ಜಿಲ್ಲೆಯ ಎಲ್ಲಾ ಶಿಕ್ಷಕಿ ಯರು ಬೆಂಬಲಿಸಬೇಕಾಗಿ ವಿನಂತಿಯನ್ನು ರಾಜ್ಯಾಧ್ಯಕ್ಷರು ಮಾಡಿದ್ದಾರೆ.

ಈ ಜವಾಬ್ದಾರಿಯನ್ನು ಅರಿತು ಸಕ್ರಿಯವಾಗಿ ಪಾಲ್ಗೊಂಡು ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ತಿಳಿಸಿದ್ದಾರೆ

ಇದು ಹೋರಾಟಕ್ಕೆ ಸಕಾಲವಾಗಿದ್ದು ಎಲ್ಲಾ ನೌಕರರು ಬೆಂಬಲಿಸಬೇಕು.ಇಂದು ಈ ಬೇಡಿಕೆ ಈಡೇರಿದಿದ್ದರೆ ಇನ್ನೆಂದು ಈಡೇರುವ ಸಂಭವ ವಲ್ಲ ಕಾರಣ ಅಂತಿಮ ಹೋರಾಟಕ್ಕೆ ಸಿದ್ದರಾಗಿ  ಸರ್ಕಾರಕ್ಕೆ ಹೊಸ ಪಿಂಚಣಿ ಯೋಜನೆಯ ಮಾರಕ ಅಂಶಗಳನ್ನು ಮನವರಿಕೆ ಮಾಡಿ ಕೊಟ್ಟು  ಹಳೆ ಪಿಂಚಣಿಯನ್ನು ಜಾರಿಗೊಳಿಸಲು ನಾವೆಲ್ಲ ತನು ದನ ಮನದಿಂದ ಮಾಡು ಇಲ್ಲವೆ ಮಡಿ ಹೋರಾಟ ಮಾಡೋಣ ಎಂದಿದ್ದಾರೆ

ಈ ಹೋರಾಟ ಯಾವುದೇ ಸಂಘದ ಹೋರಾಟ ವಲ್ಲ ಇದು ಹೊಸ ಪಿಂಚಣಿ ಯೋಜನೆಗೆ ಒಳಪಡುವ ನೌಕರರ ಕುಟುಂಬದ ಜೀವನ್ಮರ ಣದ ಹೋರಾಟವಾಗಿದೆ.ಕಾರಣ ಎಲ್ಲಾ ಶಿಕ್ಷಕಿ ಯರು ಸಕ್ರಿಯವಾಗಿ ಬೆಂಬಲಿಸಬೇಕು ಆ ಮೂಲಕ ಹೊಸ ಪಿಂಚಣಿ ಯೋಜನೆ ತೊಲಗಿಸಿ, ಹಳೆ ಪಿಂಚಣಿ ಯೋಜನೆಯನ್ನ ನಮ್ಮ ಎಲ್ಲ ನೌಕರರಿಗೆ ದೊರಕಿಸಿಕೊಡಬೇಕಾದ ಜವಾಬ್ಧಾರಿ ನಮ್ಮೇಲ್ಲರ ಮೇಲಿದೆ

ಇದು ಮನೆಯಲ್ಲಿ ಕೈಕಟ್ಟಿ ಕುಳಿತುಕೊಳ್ಳುವ ಸಮಯವಲ್ಲ ಪ್ರತಿಯೋಬ್ಬರು ದೈಹಿಕವಾಗಿ ಪಾಲ್ಗೋಳ್ಳಿ ಇದು ನಮ್ಮ ನೌಕರರ ಭವಿಷ್ಶದ ಹೋರಾಟವಾಗಿದ್ದು ಈ ಅವಕಾಶದಲ್ಲಿ ಪಾಲ್ಗೊ ಳ್ಳದಿದ್ದರೆ ನಮ್ಮ ನೌಕರರ ಬಂಧುಗಳಿಗೆ ಮಹಾ ಅನ್ಶಾಯ ಮಾಡಿದಂತಾಗುತ್ತದೆ ದಯವಿಟ್ಟು ಎಲ್ಲರು ಪಾಲ್ಗೊಳ್ಳ ಬೇಕಾಗಿ ವಿನಂತಿಯನ್ನು ಮಾಡಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.