ನಮ್ಮ ಹುಬ್ಬಳ್ಳಿಯಿಂದ ದೆಹಲಿಗೆ ವಿಮಾನ ಚಾಲೂ ಮಾಡಿದ್ರು ನೋಡ್ರಿಪಾ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರು – ಮೊದಲನೇಯ ದಿನ ಆರಂಭದ ದಿನ ಗಂಡು ಮೆಟ್ಟಿನ ನಾಡಿನ ಭಾಷಾ ಸೊಗಡು ಕೇಂದ್ರ ಸಚಿವರ ಬಗ್ಗೆ ವಿಮಾನದಲ್ಲಿ ಮೆಚ್ಚುಗೆ ತುಂಬಾ ವಿಶೇಷಗಳೊಂದಿಗೆ ಚಾಲು ಆತು ನೋಡ್ರಿ

Suddi Sante Desk
ನಮ್ಮ ಹುಬ್ಬಳ್ಳಿಯಿಂದ ದೆಹಲಿಗೆ ವಿಮಾನ ಚಾಲೂ ಮಾಡಿದ್ರು ನೋಡ್ರಿಪಾ  ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರು   – ಮೊದಲನೇಯ ದಿನ ಆರಂಭದ ದಿನ ಗಂಡು ಮೆಟ್ಟಿನ ನಾಡಿನ ಭಾಷಾ ಸೊಗಡು ಕೇಂದ್ರ ಸಚಿವರ ಬಗ್ಗೆ ವಿಮಾನದಲ್ಲಿ ಮೆಚ್ಚುಗೆ ತುಂಬಾ ವಿಶೇಷಗಳೊಂದಿಗೆ ಚಾಲು ಆತು ನೋಡ್ರಿ

ಹುಬ್ಬಳ್ಳಿ

ಅಂತೂ ಹುಬ್ಬಳ್ಳಿ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಜನತೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ ಹೌದು ಈ ಹಿಂದೆ ಕೇಂದ್ರ ಸಚಿವರು ಹೇಳಿದಂತೆ ಹುಬ್ಬಳ್ಳಿಯಿಂದ ನೇರವಾಗಿ ದೆಹಲಿ ಗೆ ಪ್ರಯಾಣ ವನ್ನು ಬೆಳೆಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಹುಬ್ಬಳ್ಳಿ ದೆಹಲಿ ವಿಮಾನ ಸೇವೆಯನ್ನು ಆರಂಭ ಮಾಡೊ ದಾಗಿ ಹೇಳಿದ್ದರು.

ಸಧ್ಯ ಇವರು ಹೇಳಿದಂತೆ ಇಂದು ಹುಬ್ಬಳ್ಳಿಯಿಂದ ದೆಹಲಿಗೆ ವಿಮಾನ ಸೇವೆ ಆರಂಭಗೊಂಡಿದೆ. ಹೌದು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಈ ಒಂದು ನೂತನ ಸೇವೆಯನ್ನು ಉದ್ಘಾಟಿಸಿದರು ಅದು ಗಂಡು ಮೆಟ್ಟಿನ ನಾಡು ಹುಬ್ಬಳ್ಳಿಯಿಂದ ವಿಶೇಷವಾಗಿ ಇಂದು ಆರಂಭವನ್ನು ಮಾಡಿ ಚಾಲನೆ ನೀಡಿದರು.

ಮೊದಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ವಿಶೇಷವಾಗಿ ಆರತಿ ಮಾಡಿ ಸ್ವಾಗತವನ್ನು ಮಾಡಿಕೊಳ್ಳಲಾಯಿತು ನಂತರ ನಿಲ್ದಾಣದಲ್ಲಿ ನಡೆದ ವೇದಿಕೆಯ ಕಾರ್ಯಕ್ರಮದಲ್ಲಿ ದೀಪವನ್ನು ಬೆಳಗಿಸಿ ನಂತರ ಹಸಿರು ನಿಶಾನೆ ತೋರಿಸುವ ಮೂಲಕ ಹೊಸ ಮಾರ್ಗದ ಸೇವೆಗೆ ಚಾಲನೆ ಯನ್ನು ನೀಡಿದರು.

ನಂತರ ವಿಮಾನದಲ್ಲಿ ಕಂಡು ಬಂದಿದ್ದು ಕನ್ನಡದಲ್ಲಿನ ವಿಶೇಷ ಮಾತುಗಳು ನಮ್ಮ ಹುಬ್ಬಳ್ಳಿಯಿಂದ ದೆಹಲಿಗೆ ವಿಮಾನ ಸೇವಾ ಚಾಲೂ ಆತು ಅನ್ನೋದ ಒಂದ ವಿಶೇಷ ಆದ್ರ ಫ್ಲೈಟ್‌ ಅನೌನ್ಸ್‌ಮೆಂಟ್ ಸಹ ನಮ್ಮ ಉತ್ತರ ಕರ್ನಾಟಕ ಭಾಷಾದಾಗ ಆಗಿದ್ದು ಇನ್ನೊಂದ ವಿಶೇಷ.ದೆಹಲಿ ವಿಮಾನದಾಗ ಗಂಡುಮೆಟ್ಟಿದ ನಾಡಿನ ಭಾಷಾ ಸೊಗಡಿನ ನಡುವೆ ಈ ಒಂದು ಸೇವೆಯನ್ನು ಆರಂಭ ಮಾಡಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕಾರಣ ಮೊದಲು ಎರಡೂವರೆ ದಿನಗಳ ಕಾಲ ಹೋಗುವ ಅವಕಾಶವಿತ್ತ ಸಧ್ಯ ಎರಡೂವರೆ ಗಂಟೆಗಳಲ್ಲಿ ದೆಹಲಿಯನ್ನು ತಲುಪುವ ವ್ಯವಸ್ಥೆಗೆ ಅವರೇ ಕಾರಣರಾಗಿದ್ದು ಅವರಿಗೆ ತುಂಬು ಹೃದಯದ ಧನ್ಯವಾದಗಳು ಎಂದು ಹೇಳಲಾಯಿತು.

ನಮ್ಮ ಬೈಲಹೊಂಗಲದವ್ರೇ ಆದ ಅಕ್ಷಯ್‌ ಪಾಟೀಲ್ ಇವತ್ತಿನ ವಿಮಾನದ  ಪೈಲೆಟ್‌ ಆಗಿದ್ರಿಂದ ಸ್ವಚ್ಛ ಉತ್ತರ ಕರ್ನಾಟಕ ಭಾಷಾದಾಗ ಎಲ್ಲಾ ಪ್ರಯಾಣೀಕರಿಗೆ ಸ್ವಾಗತ ಮಾಡಿ, ರಾಷ್ಟ್ರ ರಾಜಧಾನಿಗೆ ಕರಕೊಂಡ ಹೋದ್ರು ಇದರಕಿಂತ ಹೆಚ್ಚಿನ ಖುಷಿ ಏನ ಬೇಕ ಹೇಳ್ರಿ ಎಂಬ ಮಾತು ಗಳು ವಿಮಾನದಲ್ಲಿ ಕೇಂದ್ರ ಸಚಿವರಿಂದ ಕೇಳಿ ಬಂದವು.ಉಳಿಬೇಕು ನಮ್ಮ ಭಾಷಾ ಮತ್ತ ಸಂಸ್ಕೃತಿ ಅಂದ್ರ ಪಕ್ಕಾ ಆಗೇ ಆಗ್ತೈತಿ ಪ್ರಗತಿ

ಇದರೊಂದಿಗೆ ಕೇಂದ್ರ ಸಚಿವರು ಹುಬ್ಬಳ್ಳಿ-ಧಾರವಾಡ ಅವಳಿನಗರದ ಜನತೆಗೆ ಶುಭ ಸುದ್ದಿಯನ್ನು ನೀಡಿ ಅದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣವನ್ನು ಬೆಳೆಸಿದರು.ಇನ್ನೂ ಪ್ರತಿನಿತ್ಯ ದೆಹಲಿ ಹಾಗೂ ಹುಬ್ಬಳ್ಳಿಯ ನಡುವೆ ವಿಮಾನ ಸಂಚಾರ ಸೇವೆ ಆರಂಭಗೊಂಡಂತಾಗಿದ್ದು ಇಂದು ಮೊದಲ ವಿಮಾನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರು ಚಾಲನೆ ನೀಡಿ ಅದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣವನ್ನು ಬೆಳಿಸಿದರು

 

 

ಅಂದಹಾಗೇ ಇಂದು ಚಾಲನೆಗೊಂಡಂತ ವಿಮಾನ ಸೇವೆಯು ನಿತ್ಯ ಇರಲಿದೆ. ದೆಹಲಿ ಯಿಂದ ಹುಬ್ಬಳ್ಳಿಗೆ, ಹುಬ್ಬಳ್ಳಿಯಿಂದ ದೆಹಲಿಗೆ ಸಂಚರಿಸಲಿದೆ. ದೆಹಲಿಯಿಂದ ಹುಬ್ಬಳ್ಳಿಗೆ ಇಂದು ಮೊದಲ ಇಂಡಿಗೋ ವಿಮಾನ ಆಗಮನ ಕೂಡ ಹುಬ್ಬಳ್ಳಿಯಿಂದ ಆಕಾಶದಲ್ಲಿ ಪ್ರಯಾಣವನ್ನು ಮಾಡಿತು.

ಚಕ್ರವರ್ತಿ ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.