ಶಾಸಕ ಅಮೃತ ದೇಸಾಯಿ ಅವರಿಗೆ ಹುಟ್ಟುಹಬ್ಬಕ್ಕೆ ವಿಜಯಲಕ್ಷ್ಮೀಯನ್ನು ನೀಡಿದ BJP ಯುವ ಮೋರ್ಚಾ – ಶಾಸಕರಿಗೆ ವಿಶೇಷವಾದ ಗೋ ವನ್ನು ನೀಡಿ 2023 ಚುನಾವಣೆಯಲ್ಲಿ ವಿಜಯಲಕ್ಷ್ಮೀ ಸಿಗಲೆಂದು ಹಾರೈಸಿದ ಶಂಕರ ಕೋಮಾರದೇಸಾಯಿ ಮತ್ತು ಟೀಮ್

Suddi Sante Desk
ಶಾಸಕ ಅಮೃತ ದೇಸಾಯಿ ಅವರಿಗೆ ಹುಟ್ಟುಹಬ್ಬಕ್ಕೆ ವಿಜಯಲಕ್ಷ್ಮೀಯನ್ನು ನೀಡಿದ BJP ಯುವ ಮೋರ್ಚಾ – ಶಾಸಕರಿಗೆ ವಿಶೇಷವಾದ ಗೋ ವನ್ನು ನೀಡಿ 2023 ಚುನಾವಣೆಯಲ್ಲಿ ವಿಜಯಲಕ್ಷ್ಮೀ ಸಿಗಲೆಂದು ಹಾರೈಸಿದ ಶಂಕರ ಕೋಮಾರದೇಸಾಯಿ ಮತ್ತು ಟೀಮ್

ಧಾರವಾಡ-

ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ತುಂಬಾ ವಿಶೇಷವಾಗಿ ಕಂಡು ಬರುತ್ತಿರುವ ಧಾರವಾಡ ಗ್ರಾಮೀಣ ಬಿಜೆಪಿ ಘಟಕವು ಶಾಸಕ ಅಮೃತ ದೇಸಾಯಿ ಅವರ ಹುಟ್ಟು ಹಬ್ಬದಲ್ಲೂ ವಿಶೇಷ ವಾದ ಕಾರ್ಯವನ್ನು ಮಾಡುವ ಮೂಲಕ ಗಮನ ಸೆಳೆದಿದೆ.

 

 

ಹೌದು ಶಂಕರ ಕೋಮಾರ ದೇಸಾಯಿ ನೇತ್ರತ್ವ ದಲ್ಲಿನ ಯುವ ಪಡೆ ಪ್ರತಿಯೊಂದು ಕೆಲಸ ಕಾರ್ಯ ಚಟುವಟಿಕೆಗಳನ್ನು ತುಂಬಾ ಅರ್ಥ ಪೂರ್ಣವಾಗಿ ಮಾಡಿಕೊಂಡು ಬರುತ್ತಿದ್ದು ಸಧ್ಯ ಹುಟ್ಟು ಹಬ್ಬದ ಸಂದರ್ಭದಲ್ಲಿರುವ ಶಾಸಕ ಅಮೃತ ದೇಸಾಯಿ ಅವರಿಗೆ ವಿಜಯಲಕ್ಷ್ಮೀ ಹೆಸರಿನ ಗೋವನ್ನು ನೀಡಿ ವಿಶೇಷವಾಗಿ

ಉಡುಗೊರೆಯೊಂದಿಗೆ ಬರುವ ಚುನಾವಣೆ ಯಲ್ಲಿ ವಿಜಯಲಕ್ಷ್ಮೀ ಸಿಗಲೇಂದು ಹಾರೈಸಿದ್ದಾರೆ. ಹೌದು ನಿನ್ನೆ ಶಾಸಕರ ಹುಟ್ಟು ಹಬ್ಬ ಹೀಗಾಗಿ ಪ್ರತಿಯೊಬ್ಬರು ಕೈಯಲ್ಲೊಂದು ಹೂವಿನ ಬುಕ್ಕೆ ಕೇಕ್ ಸೇರಿದಂತೆ ಬಗೆ ಬಗೆಯ ಗಿಪ್ಟ್ ಗಳನ್ನು ತಗೆದುಕೊಂಡು ಬಂದು ಶುಭ ಹಾರೈಸಿದರು ಆದರೆ ಧಾರವಾಡ ಗ್ರಾಮೀಣ ಬಿಜೆಪಿ ಯುವ ಪಡೆ ವಿಭಿನ್ನವಾದ ಗಿಪ್ಟ್ ನ್ನು ಶಾಸಕರಿಗೆ ನೀಡಿದೆ

ಆರೋಗ್ಯ ಸೇವಾ ಶಿಬಿರದಲ್ಲಿ ಸೇವೆಯನ್ನು ಮಾಡುವುದರೊಂದಿಗೆ ಕೊನೆಗೆ ಶಾಸಕರಿಗೆ ವಿಜಯಲಕ್ಷ್ಮೀ ಎಂಬ ಹೆಸರನ್ನು ಗೋ ವನ್ನು ಕೊಡುಗೆಯಾಗಿ ಇದನ್ನು ಅವರಿಗೆ ನೀಡಿ ಶುಭ ಹಾರೈಸಿ 2023 ರ ಚುನಾವಣೆಯಲ್ಲಿ ವಿಜಯ ಲಕ್ಷ್ಮೀ ಸಿಗಲೆಂದು ಹಾರೈಸಿದರು.ನೂರಾರು ಜನರ ಶುಭಾಶಯ ಗಿಪ್ಟ್ ಗಳ ನಡುವೆ ಶಂಕರ ಕೋಮಾರ ದೇಸಾಯಿ ಅವರ ಈ ಒಂದು ವಿಶೇಷ ಕೊಡುಗೆ ಎಲ್ಲರ ಗಮನ ಸೆಳೆಯಿತು.

 

 

ಇತ್ತ ಏನೇ ಮಾಡಿದರು ತುಂಬಾ ವಿಶೇಷವಾಗಿ ಅರ್ಥಪೂರ್ಣವಾಗಿ ಮಾಡುತ್ತಿರುವ ಶಂಕರ ಕೋಮಾರ ದೇಸಾಯಿ ಟೀಮ್ ಮಾದರಿಯಾ ಯಿತು. ಗರಗ ಗ್ರಾಮದ ಶ್ರೀ ಗುರು ಮಡಿವಾಳ ಜ್ಜನ ಸನ್ನಿದಿಯಲ್ಲಿ ಅವರಿಗೆ ಗೋ_ಮಾತೇ ಯನ್ನು(ವಿಜಯಲಕ್ಷ್ಮೀ)ಉಡುಗೊರೆಯಾಗಿ ನೀಡುವುದರೊಂದಿಗೆ ವಿಶೇಷವಾಗಿ ಹುಟ್ಟು ಹಬ್ಬಕ್ಕೆ ಶುಭ ಹಾರೈಸಲಾಯಿತು.ಈ ಒಂದು ಸಂದರ್ಭದಲ್ಲಿ ಶಂಕರ ಕೋಮಾರ ದೇಸಾಯಿ ಅವರೊಂದಿಗೆ.ಸಿದ್ದನಗೌಡ ಪಾಟೀಲ್, ಸಂತೋಷ ಬಡವನ್ನವರ,ಪ್ರವೀಣ್ ಕಮ್ಮಾರ ಯಲ್ಲಪ್ಪ ಜಾನುಕನ್ನವರ,ಚಂದ್ರು ತಲ್ಲೂರ,ಶಕ್ತಿ ಹಿರೇಮಠ ಮಂಜುನಾಥ ಯಾಬಣ್ಣನವರ, ರಾಕೇಶ ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದು ಸೇರಿದಂತೆ ಹಲವರು ಉಪಸ್ಥಿತರಿದ್ದು ಶಾಸಕರಿಗೆ ವಿಶೇಷವಾಗಿ ಶುಭಾಶಯಗಳನ್ನು ಹೇಳಿ ಬರುವ ಚುನಾವಣೆಗೆ ವಿಜಯಲಕ್ಷ್ಮೀ ಯನ್ನು ಡಬಲ್ ಗಿಪ್ಟ್ ಆಗಿ ಇದರೊಂದಿಗೆ ನೀಡಿದರು.

ಚಕ್ರವರ್ತಿ ಜೊತೆ ರಕ್ಷಿತ ಸುದ್ದಿ ಸಂತೆ ನ್ಯೂಸ್

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.