ಸರಣಿ ಕಳ್ಳತನ ಪ್ರಕರಣಗಳನ್ನು ಭೇದಿಸಿದ ಹುಬ್ಬಳ್ಳಿಯ ಕೇಶ್ವಾಪೂರ ಪೊಲೀಸರು 3 ಲಕ್ಷ ಮೌಲ್ಯದ 9 ಬೈಕ್ ಗಳನ್ನು ವಶಪಡಿಸಿಕೊಂಡು 3 ಆರೋಪಿಗಳಿಗೆ ಎಡೆಮೂರಿ ಕಟ್ಟಿದ ಪೊಲೀಸರು

Suddi Sante Desk
ಸರಣಿ ಕಳ್ಳತನ ಪ್ರಕರಣಗಳನ್ನು ಭೇದಿಸಿದ ಹುಬ್ಬಳ್ಳಿಯ ಕೇಶ್ವಾಪೂರ ಪೊಲೀಸರು 3 ಲಕ್ಷ ಮೌಲ್ಯದ 9 ಬೈಕ್ ಗಳನ್ನು ವಶಪಡಿಸಿಕೊಂಡು 3 ಆರೋಪಿಗಳಿಗೆ ಎಡೆಮೂರಿ ಕಟ್ಟಿದ ಪೊಲೀಸರು

ಹುಬ್ಬಳ್ಳಿ

ಸರಣಿ ಬೈಕ್ ಕಳ್ಳತನ ಪ್ರಕರಣಗಳನ್ನು ಹುಬ್ಬಳ್ಳಿಯ ಕೇಶ್ವಾಪೂರ ಪೊಲೀಸರು ಬೇಧಿಸಿದ್ದಾರೆ ಹೌದು ಇತ್ತೀಚಿಗೆ ನಗರದ ರೈಲ್ವೆ ಯೂನಿಯನ್ ಕಚೇರಿ ಬಳಿ ನಡೆದಿದ್ದ ಸರಣಿ ವಾಹನ ಕಳ್ಳತನ ಪ್ರಕರಣದ ಕುರಿತು ತನಿಖೆ ಕೈಗೊಂಡ ಪೊಲೀಸರು ಮೂವರನ್ನು ಬಂಧಿಸಿ  ₹3 ಲಕ್ಷ ಮೌಲ್ಯದ 9 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಕಚೇರಿ ಬಳಿ ನಿಲ್ಲಿಸಿದ್ದ ವಾಹನಗಳು ನಾಪತ್ತೆ ಯಾಗಿದ್ದವು.ಈ ಒಂದು ಪ್ರಕರಣಕ್ಕೆ ಸಂಬಂಧಿಸಿ ದಂತೆ ದೂರನ್ನು ದಾಖಲು ಮಾಡಿಕೊಂಡಿದ್ದ ಪೊಲೀಸರು ಠಾಣೆ ವ್ಯಾಪ್ತಿಯಲ್ಲಿ ವಿಶೇಷ ಗಸ್ತು ವ್ಯವಸ್ಥೆ ಮಾಡಿ ಸಂಶಯಾಸ್ಪದ ಹಳೆಯ ಬೈಕ್‌ ಗಳ ದಾಖಲೆಗಳನ್ನು ಪರಿಶೀಲಿಸುವಾಗ ಆರೋಪಿ ಗಳು ಸಿಕ್ಕಿ ಬಿದ್ದಿದ್ದಾರೆ ಎಂದು ಪಿಎಸ್ ಐ ಸದಾಶಿವ ಕಾನಟ್ಟಿ ಅವರು  ತಿಳಿಸಿದ್ದಾರೆ.

ಹಳೆಯ ವಾಹನಗಳಿಗೆ ಸೂಕ್ತ ದಾಖಲೆಗಳಿರು ವುದಿಲ್ಲ. ಅವುಗಳನ್ನು ಕಳ್ಳತನ ಮಾಡಿದರೆ ಮಾಲೀಕರು ದೂರು ನೀಡುವುದಿಲ್ಲ ಎಂದುಕೊಂ ಡಿದ್ದ ಆರೋಪಿಗಳು ನಕಲಿ ಕೀ ಬಳಸಿ ಹಳೆ ದ್ವಿಚಕ್ರ ವಾಹನಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು.ಇದನ್ನು ಕೇಶ್ವಾಪೂರ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು.

ಕಳವು ಮಾಡಿದ ಬೈಕ್‌ಗಳನ್ನು ರೈಲ್ವೆ ಇಲಾಖೆ ಯಲ್ಲಿ ಕಳ್ಳತನ ಮಾಡಿದ ಕಬ್ಬಿಣವನ್ನು ಸಾಗಿಸಲು ಬಳಸುತ್ತಿದ್ದರು ಆರೋಪಿಗಳು ಬೇರೆ ಠಾಣೆಗಳ ವ್ಯಾಪ್ತಿಯಲ್ಲೂ ಇದೇ ರೀತಿಯಲ್ಲಿ ಕೃತ್ಯ ಎಸಗಿದ್ದಾ ರೆಯೇ ಎಂಬುದರ ಬಗ್ಗೆ  ಕೇಶ್ವಾಪೂರ ಪೊಲೀಸರು ಬಂಧಿತ ಆರೋಪಿಗಳಿಂದ ವಿಚಾರಣೆ ನಡೆಸುತ್ತಿದ್ದಾರೆ.

ಇನ್ಸಕ್ಟರ್ ಜಗದೀಶ ಹಂಚಿನಾಳ ನೇತೃತ್ವದಲ್ಲಿ ಪಿಎಸ್‌ಐ ಅಧಿಕಾರಿ ಗಳಾದ ಸದಾಶಿವ ಕಾನಟ್ಟಿ, ಕೆ.ವಿ. ಚಂದಾವರಕರ ಸೇರಿದಂತೆ ಹಲವು ಪೊಲೀಸ್ ಸಿಬ್ಬಂದಿ ಗಳು ಈ ಒಂದು ಕಾರ್ಯಾ ಚರಣೆ ಯಲ್ಲಿ  ಪಾಲ್ಗೊಂಡಿದ್ದರು.

ಸುದ್ದಿ ಸಂತೆ ನ್ಯೂಸ್…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.