ಹನಿಟ್ರ್ಯಾಪ್ ಬಲೆಗೆ ಬಿದ್ದ CM ಬಸವರಾಜ ಬೊಮ್ಮಾಯಿ PA – ಲಕ್ಷ ಲಕ್ಷ ಹಣದೊಂದಿಗೆ ಸರ್ಕಾರದ ಮಹತ್ವದ ದಾಖಲೆಗಳನ್ನು ಪಡೆದ ಮಹಿಳೆ ಮೇಲೆ ದಾಖಲಾಯಿತು ದೂರು

Suddi Sante Desk
ಹನಿಟ್ರ್ಯಾಪ್ ಬಲೆಗೆ ಬಿದ್ದ CM ಬಸವರಾಜ ಬೊಮ್ಮಾಯಿ PA – ಲಕ್ಷ ಲಕ್ಷ ಹಣದೊಂದಿಗೆ ಸರ್ಕಾರದ ಮಹತ್ವದ ದಾಖಲೆಗಳನ್ನು ಪಡೆದ ಮಹಿಳೆ ಮೇಲೆ ದಾಖಲಾಯಿತು ದೂರು

ಬೆಂಗಳೂರು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಪ್ತ ಸಹಾಯಕರೊಬ್ಬರು ಹನಿಟ್ರ್ಯಾಪ್ ಬಲೆಗೆ ಬಿದ್ದಿ ದ್ದಾರೆ.ಹೌದು ಹನಿಟ್ರ್ಯಾಪ್ ಮಾಡಿ ನಂತರ ಅವರನ್ನು ಬ್ಲಾಕ್ ಮೇಲ್ ಮಾಡಿ ಸರ್ಕಾರದ ಮಹತ್ವದ ದಾಖಲೆಗಳನ್ನು ಯುವತಿ ಪಡೆದು ಕೊಂಡಿರುವ ಸ್ಟೋಟಕ ವಿಚಾರವೊಂದು ಈಗ ಬೆಳಕಿಗೆ ಬಂದಿದೆ.

ಹೌದು ಪಿಎ ಹರೀಶ್ ಎಂಬುವವರೊಂದಿಗೆ ಸ್ನೇಹವನ್ನು ಆರಂಭ ಮಾಡಿದ ಮಹಿಳೆ ಹನಿ ಟ್ರ್ಯಾಪ್ ಖೆಡ್ಡಾಗೆ ಕೆಡವಿ ನಂತರ ಬ್ಲಾಕ್ ಮೇಲ್ ಮಾಡಿ ಲಕ್ಷ ಲಕ್ಷ ರೂಪಾಯಿಯನ್ನು ಪಡೆದು ಕೊಂಡು ಸರ್ಕಾರದ ಮಹತ್ವದ ದಾಖಲೆಗಳನ್ನು ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಬಹಿರಂಗ ವಾಗಿದೆ.

ಪರಿಷತ್ ಡಿ ದರ್ಜೆ ನೌಕರಳಾಗಿರುವ ಯುವತಿ ಸಿಎಂ ಬೊಮ್ಮಾಯಿ ಅವರ ಪಿಎ ಆಗಿರುವ ಹರೀಶ್ ಅವರಿಗೆ ಹನಿಟ್ರ್ಯಾಪ್ ಮಾಡಿದ್ದು ಬಳಿಕ ಬ್ಲ್ಯಾಕ್ ಮೇಲ್ ಮೂಲಕ ಹಲವು ಮಹತ್ವದ ದಾಖಲೆಗಳನ್ನು ಪಡೆದಿದ್ದಾಳೆ.ಅಲ್ಲದೇ ಹಣ ವಸೂಲಿಯನ್ನೂ ಮಾಡಿದ್ದಾರೆ ಹೀಗೆ ಪಡೆದ ದಾಖಲೆಗಳನ್ನು ವಿಪಕ್ಷಗಳಿಗೆ ನೀಡಿರುವ ಅನುಮಾನವಿದೆ ಎಂದು ಜನ್ಮಭೂಮಿ ಫೌಂಡೇಶನ್ ಅಧ್ಯಕ್ಷ ನಟರಾಜ್ ಶರ್ಮಾ ವಿಧಾನಸೌಧ ಠಾಣೆಯಲ್ಲಿ ದೂರು ನೀಡಿದ್ದಾರೆ

ಆರಂಭದಲ್ಲಿ ಯುವತಿ ಪಿಎ ಹರೀಶ್ ಜೊತೆ ಸಲುಗೆ ಬೆಳೆಸಿ ನಂತರ ಪ್ಲಾನ್ ಮಾಡಿಕೊಂಡು ಟ್ರ್ಯಾಪ್ ಮಾಡಿದ್ದಾಳೆ ಬಳಿಕ ಹನಿಟ್ರ್ಯಾಪ್ ಮಾಡಿ ಬ್ಲ್ಯಾಕ್ ಮೇಲ್ ಮೂಲಕ ದಾಖಲೆಗಳನ್ನು ಪಡೆದುಕೊಂಡಿದ್ದಾಳೆ ಹನಿಟ್ರ್ಯಾಪ್ ಗೆ ಒಳಗಾಗಿದ್ದ ಹರೀಶ್ ಅವರನ್ನು ಈಗಾಗಲೇ ಸೇವೆಯಿಂದ ಈಗಾಗಲೇ ತೆಗೆದು ಹಾಕಲಾಗಿದ್ದು ಈ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ದೂರು ದಾಖಲಿಸಲಾಗಿದ್ದು ಈ ಕುರಿತಂತೆ ಪೊಲೀಸರು ದೂರನ್ನು ದಾಖಲು ಮಾಡಿಕೊಂಡಿದ್ದು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಚಕ್ರವರ್ತಿ  ಸುದ್ದಿ ಸಂತೆ ನ್ಯೂಸ್

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.