ಬೆಂಗಳೂರು –

ಸಧ್ಯ ರಾಜ್ಯದಲ್ಲಿ ಪಾಸಿಟಿವಿಟಿ ಕಡಿಮೆಯಾದ 21 ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಎಲ್ಲದಕ್ಕೂ ಅವಕಾಶವನ್ನು ನೀಡಲಾಗಿದ್ದು ಸಂಜೆ 5 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಸಂಪೂರ್ಣ ವಾಗಿ ಮತ್ತೆ ಲಾಕ್ ಡೌನ್ ಮಾಡಲಾಗುತ್ತದೆ. ಇನ್ನೂ ಸಂಜೆ 5 ಗಂಟೆಯಾಗುತ್ತಿದ್ದಂತೆ ಸಂಪೂರ್ಣವಾಗಿ ಎಲ್ಲವೂ ಸ್ಥಬ್ದವಾಗುತ್ತದೆ ಈ ಒಂದು ಸಮಯದಲ್ಲಿ ಶಾಲೆಯಿಂದ ಮರಳಿ ಗೂಡು ಸೇರಲು ರಾಜ್ಯದಲ್ಲಿ ಶಿಕ್ಷಕರು ಅದರಲ್ಲೂ ಮಹಿಳಾ ಶಿಕ್ಷಕಿಯರು ಹೇಗೆ ಬರುತ್ತಾರೆ ಹೇಗೆ ಬರಬೇಕು ಎಂಬ ಪರಿಜ್ಞಾನ ಯಾರಿ ಗೂ ಇಲ್ಲ.

ಆದೇಶ ಮಾಡಿದವರಿಗೂ ಇಲ್ಲ ಇದನ್ನು ಮಾಡಿದ ನಂತರ ಹೀಗೆ ಆಗುತ್ತದೆ ಎಂಬ ಪರಿಜ್ಞಾನವಿಲ್ಲದೇ ಸುಮ್ಮನಿರುವವರಿಗೂ ಇಲ್ಲ. ಇನ್ನೂ ಇವರ ಸಮಸ್ಯೆ ಗಳನ್ನು ತಿಳಿದುಕೊಂಡು ಹೋರಾಟ ಮಾಡುತ್ತಿರುವ ಸಂಘಟನೆಯ ನಾಯಕರಿಗೂ ಇಲ್ಲ. ಹೀಗಿರುವಾಗ ನಮ್ಮ ಶಿಕ್ಷಕಿಯರು ಸಧ್ಯ ಸಂಜೆ ಸಮಯದಲ್ಲಿ ಶಾಲೆ ಮುಗಿದ ತಕ್ಷಣ ಸಿಕ್ಕ ಸಿಕ್ಕ ವಾಹನಗಳಿಗೆ ಕೈ ಮಾಡಿ ಹತ್ತಿಕೊಂಡು ಜೀವವನ್ನು ಕೈಯಲ್ಲಿಟ್ಟುಕೊಂಡು ಬರುತ್ತಿದ್ದಾರೆ.

ಅದರಲ್ಲೂ ಒಬ್ಬರೇ ಮಹಿಳಾ ಶಿಕ್ಷಕಿಯರು ಇದ್ದರಂ ತೂ ದೇವರೆ ಕಾಪಾಡಬೇಕು ಲಾರಿ ಇಲ್ಲವೇ ಟೆಂಪೊ ಇಲ್ಲವೇ ಯಾವುದಾದರೂ ಸಿಕ್ಕ ಸಿಕ್ಕ ವಾಹನವನ್ನು ಹತ್ತಿಕೊಂಡು ಅದರಲ್ಲಿಯೇ ಬಂದು ಮನೆ ಊರು ಸೇರುವ ಪರಸ್ಥಿತಿ ಕಂಡು ಬರುತ್ತಿದೆ.ಈ ಒಂದು ಭಯಾನಕವಾದ ಜೀವವನ್ನು ಕೈಯಲ್ಲಿಟ್ಟುಕೊಂಡು ಕರ್ತವ್ಯ ಮಾಡುವ ಸ್ಥಿತಿ ಯಾರಿಗೂ ಕಾಣುತ್ತಿಲ್ಲ ಕೇಳುತ್ತಿಲ್ಲ.ಚಿಕ್ಕ ಚಿಕ್ಕ ವಿಚಾರವನ್ನು ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಪೊಸ್ಟ್ ಮಾಡುವ ಶಿಕ್ಷಣ ಸಚಿವರೇ ಮಹಿಳಾ ಶಿಕ್ಷಕಿಯರ ನರಕಯಾತನೆಯ ಬದುಕನ್ನು ಒಮ್ಮೇ ನೋಡಿ

ಇನ್ನೂ ಇತ್ತ ಯಾವುದಾದರೂ ಒಂದು ಚಿಕ್ಕದಾದ ವಿಚಾರದಲ್ಲಿ ಸರ್ಕಾರ ಏನಾದರೂ ಆದೇಶ ಮಾಡಿ ದರೆ ನಮ್ಮಿಂದ ಆಯಿತು ಎನ್ನೂತ್ತಾ ವಾಟ್ಸ್ ಆಫ್ ನಲ್ಲಿ ಪೊಸ್ಟ್ ಮಾಡುವ ಸಂಘಟನೆಯ ನಾಯಕರೇ ಮಹಿಳಾ ಶಿಕ್ಷಕಿಯರ ಪರಸ್ಥಿತಿಯನ್ನು ಒಮ್ಮೇ ನೋಡಿ ನಮ್ಮ ಮನೆಯವರನ್ನಾಗಿದ್ದರೆ ನಾವು ಹೀಗೆ ಕಳಿಸುತ್ತಿದ್ದೇವಾ ದಯಮಾಡಿ ಒಮ್ಮೆ ಯೋಚನೆ ಮಾಡಿ ಇನ್ನಾದರೂ ಈ ಒಂದು ಚಿತ್ರಣವನ್ನು ನೋಡಿಕೊಂಡು ಧ್ವನಿ ಎತ್ತಿ ಸಮಸ್ಯೆಯನ್ನು ಪರಿಹಾ ರ ಮಾಡಿ ಅಂದಾಗ ಇವರೆ ಲ್ಲದರ ಧ್ವನಿಯಾಗಿ ಕಾರ್ಯ ಮಾಡುತ್ತಿರುವುದಕ್ಕೆ ಸಾರ್ಥಕವಾಗುತ್ತದೆ ಇವರೆಲ್ಲರ ಪರವಾಗಿ ಅಧಿಕಾರ ಮಾಡುತ್ತಿರುವ ಸಚಿವರೇ ನೀವು ಒಬ್ಬರು ಶಿಕ್ಷಕಿ ಯೊಬ್ಬರ ಪುತ್ರ ಎಂಬ ಮಾತು ನೆನಪಿರಲಿ.ಇನ್ನೂ ಈ ಒಂದು ವಿಚಾರವನ್ನು ಕರ್ನಾಟಕ ರಾಜ್ಯಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷರಾದ ಡಾ ಲತಾ ಎಸ್ ಮುಳ್ಳೂರ ಮತ್ತು ಪ್ರಧಾನ ಕಾರ್ಯದ ರ್ಶಿ ಜ್ಯೋತಿ ಹೆಚ್ ತೀವ್ರವಾಗಿ ಖಂಡಿಸಿದ್ದಾರೆ.ಸೂಕ್ತ ಕ್ರಮಕ್ಕಾಗಿ ಒತ್ತಾಯವನ್ನು ಮಾಡಿದ್ದಾರೆ.