ಪ್ರಹ್ಲಾದ್ ಜೋಶಿ ಹುಟ್ಟು ಹಬ್ಬದ ದಿನದಂದು ಜಿಲ್ಲೆಯಲ್ಲಿ ನಡೆಯಲಿದೆ ಉಚಿತ ನೇತ್ರ ತಪಾಸಣಾ ಶಿಬಿರ – BJP ಗ್ರಾಮೀಣ ಯುವ ಮೋರ್ಚಾದಿಂದ ಶಂಕರ ಕೋಮಾರ ದೇಸಾಯಿ ನೇತ್ರತ್ವದಲ್ಲಿ 12 ಕಡೆಗಳಲ್ಲಿ ನಡೆಯಲಿದೆ ಅರ್ಥಪೂರ್ಣ ಕಾರ್ಯಕ್ರಮ

Suddi Sante Desk
ಪ್ರಹ್ಲಾದ್ ಜೋಶಿ ಹುಟ್ಟು ಹಬ್ಬದ ದಿನದಂದು ಜಿಲ್ಲೆಯಲ್ಲಿ ನಡೆಯಲಿದೆ ಉಚಿತ ನೇತ್ರ ತಪಾಸಣಾ ಶಿಬಿರ – BJP ಗ್ರಾಮೀಣ ಯುವ ಮೋರ್ಚಾದಿಂದ ಶಂಕರ ಕೋಮಾರ ದೇಸಾಯಿ ನೇತ್ರತ್ವದಲ್ಲಿ 12 ಕಡೆಗಳಲ್ಲಿ ನಡೆಯಲಿದೆ ಅರ್ಥಪೂರ್ಣ ಕಾರ್ಯಕ್ರಮ

ಧಾರವಾಡ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹುಟ್ಟು ಹಬ್ಬಕ್ಕಾಗಿ ಧಾರವಾಡ ಜಿಲ್ಲೆಯಲ್ಲಿ ಬಿಜೆಪಿ ಯುವ ಮೋರ್ಚಾ ಘಟಕದವರು ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.ಹೌದು ಧಾರವಾಡ ಜಿಲ್ಲೆಯ ಗ್ರಾಮಾಂತರ ಭಾರತೀಯ ಜನತಾ ಪಾರ್ಟಿ ಯಿಂದ ಜಿಲ್ಲೆಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾ ಗಿದ್ದು ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಶಂಕರ ಕೋಮಾರ ದೇಸಾಯಿ ಈ ಒಂದು ವಿಶೇಷ ಕಾರ್ಯಕ್ರಮವನ್ನು ತಮ್ಮ ಟೀಮ್ ನೊಂದಿಗೆ ಜಿಲ್ಲೆಯಾಧ್ಯಂತ ನವಂಬರ್ 27 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಏಕಕಾಲದಲ್ಲಿ ಈ ಒಂದು ಶಿಬಿರವನ್ನು ಆಯೋ ಜನೆ ಮಾಡಲಾಗಿದ್ದು  ಹಮ್ಮಿಕೊಂಡಿದ್ದಾರೆ.

ಎಲ್ಲೇಲ್ಲಿ ಆಯೋಜನೆ…..

ಇನ್ನೂ ಈ ಒಂದು ಕಾರ್ಯಕ್ರಮವನ್ನು ಜಿಲ್ಲೆಯ ತುಂಬೆಲ್ಲಾ ಆಯೋಜನೆ ಮಾಡಲಾಗಿದ್ದು ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮಾಡಲಾಗುತ್ತಿದ್ದು  ಧಾರವಾಡ ವಿಧಾನ ಕ್ಷೇತ್ರದ ವ್ಯಾಪ್ತಿಯಲ್ಲಿನ ಅಮ್ಮಿನಬಾವಿ ಗ್ರಾಮದ ವೀರಾಂ ಜನೇಯ ದೇವಸ್ಥಾನ ದಲ್ಲಿ ಆಯೋಜನೆ ಮಾಡ ಲಾಗಿದೆ.ನವಲಗುಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಂಡಿವಾಡ ಗ್ರಾಮ ಹನುಮಂತ ದೇವಸ್ಥಾನದ ಸಮುದಾಯ ಭವನದಲ್ಲಿ ಮತ್ತು ಅಂಚಟಗೇರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ

ಇತ್ತ ಕಲಘಟಗಿಯಲ್ಲಿ ಪಟ್ಟಣ ಪಂಚಾಯತಿ ಸಭಾ ಭವನದಲ್ಲಿ ಬಮ್ಮಿಗಟ್ಟಿ ಗ್ರಾಮದ ಗ್ರಾಮ ದೇವಿ ದೇವಸ್ಥಾನದಲ್ಲಿ  ಮತ್ತು ದೇವರ ಹುಬ್ಬಳ್ಳಿಯ ಭಾರತ ಮಂದಿರದಲ್ಲಿ ನವಲಗುಂದ ಪಟ್ಟಣದ ಪುರತಾನ ಗಣಪತಿ ದೇವಸ್ಥಾನ ಶಲವ ಡಿಯ ವೀರಭದ್ರೇಶ್ವರ ದೇವಸ್ಥಾನ ಅಳ್ನಾವರದ ಅಂಬೇಡ್ಕರ ಸಭಾ ಭವನದಲ್ಲಿ ಅಣ್ಣಿಗೇರಿಯ ದಾಸೋಹ ಮಠ ಮಾರ್ಕೇಟ್ ನಲ್ಲಿರುವ ಇದರಲ್ಲಿ ಕುಂದಗೋಳದ ಭೂತೇಶ್ವರ ದೇವಸ್ಥಾನ ಮತ್ತು ಬಸವೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ನ ಯುವ ಮೋರ್ಚಾ ಧಾರವಾಡ ಗ್ರಾಮಾಂತರ ಘಟಕದಿಂದ ಈ ಒಂದು ಅರ್ಥ ಪೂರ್ಣವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿದೆ.

ಜಿಲ್ಲಾಧ್ಯಕ್ಷ ಶಂಕರ ಕೋಮಾರದೇಸಾಯಿ ಮತ್ತು ಟೀಮ್ ನವರ ಸಮ್ಮುಖದಲ್ಲಿ ಈ ಒಂದು ಕಾರ್ಯಕ್ರಮಗಳು ನಡೆಯಲಿದ್ದು ಇಂತಹ ಸಮಾಜಮುಖಿಯಾದ ಕಾರ್ಯಕ್ರಮಗಳ ಮೂಲಕ ಮಾದರಿಯಾಗುತ್ತಿದ್ದಾರೆ ಶಂಕರ ಕೋಮಾರ ದೇಸಾಯಿ ಮತ್ತು ಮೋರ್ಚಾ ಬಳಗದವರು.

ಚಕ್ರವರ್ತಿ ಸುದ್ದಿ ಸಂತೆ ನ್ಯೂಸ್ ಧಾರವಾಡ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.