ನೇಮಕಾತಿ ಮುಂಬಡ್ತಿಗೆ ಗೆ ತಾತ್ಕಾಲಿಕ ಬ್ರೇಕ್ ಹಾಕಿದ ರಾಜ್ಯ ಸರ್ಕಾರ – ರಾಜ್ಯ ಸರ್ಕಾರದಿಂದ ಹೊರಬಿತ್ತು ಅಧಿಕೃತವಾದ ಆದೇಶ

Suddi Sante Desk
ನೇಮಕಾತಿ ಮುಂಬಡ್ತಿಗೆ ಗೆ ತಾತ್ಕಾಲಿಕ ಬ್ರೇಕ್ ಹಾಕಿದ ರಾಜ್ಯ ಸರ್ಕಾರ – ರಾಜ್ಯ ಸರ್ಕಾರದಿಂದ ಹೊರಬಿತ್ತು ಅಧಿಕೃತವಾದ ಆದೇಶ

ಬೆಂಗಳೂರು

ಹೊಸದಾಗಿ ಜಾರಿಗೆ ಬಂದಿರುವ ಮೀಸಲಾತಿಯ ಪರಿಣಾಮದಿಂದಾಗಿ ರಾಜ್ಯದಲ್ಲಿ ನೇಮಕಾತಿ ಮತ್ತು ಮುಂಬಡ್ತಿಗೆ ತಾತ್ಕಾಲಿಕವಾಗಿ ನಿಲ್ಲಿಸ ಲಾಗಿದೆ.ಹೌದು ಕರ್ನಾಟಕದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸುವ ಪ್ರಕ್ರಿಯೆ ಯನ್ನು ಆರಂಭಿಸಿರುವ ರಾಜ್ಯ ಸರ್ಕಾರ ರೋಸ್ಟರ್ ಬಿಂದುಗಳನ್ನು ಗುರುತಿಸುವ ಕಾರ್ಯಕ್ಕೆ ಚಾಲನೆ ಕೊಟ್ಟಿದೆ ಜಾತಿಗೆ ಅನುಗು ಣವಾಗಿ ಹೊಸ ಮೀಸಲಾತಿ ಜಾರಿಯಾಗುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ನೇರ ನೇಮಕಾತಿ ಹಾಗೂ ಮುಂಬಡ್ತಿ ಪ್ರಕ್ರಿಯೆ ಗಳನ್ನು ಸ್ಥಗಿತಗೊಳಿಸಲಾಗಿದೆ

ಆದರೆ ನವೆಂಬರ್ ಹಾಗೂ ಡಿಸೆಂಬರ್​ನಲ್ಲಿ ಸಾಕಷ್ಟು ಸರ್ಕಾರಿ ನೌಕರರು ನಿವೃತ್ತಿಯಾಗುತ್ತಿದ್ದು ಮುಂಬಡ್ತಿ ಇಲ್ಲದೆ ಸೇವೆಯಿಂದ ಬಿಡುಗಡೆಗೊ ಳ್ಳುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ನವೆಂಬರ್ ಅಂತ್ಯದೊಳಗೆ ಹೊಸ ಮೀಸಲಾತಿ ಅನುಷ್ಠಾನಕ್ಕೆ ಒತ್ತಾಯ ಕೇಳಿಬಂದಿದೆ.ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಆಧರಿಸಿ ಸರ್ಕಾರ ಎಸ್​ಸಿ ಮೀಸಲು ಪ್ರಮಾಣ ವನ್ನು ಶೇ.15ರಿಂದ 17ಕ್ಕೆ ಹಾಗೂ ಎಸ್​ಟಿ ಮೀಸಲು ಪ್ರಮಾಣವನ್ನು ಶೇ.3ರಿಂದ 7ಕ್ಕೆ ಹೆಚ್ಚಿಸಿದೆ.ಈಗ ಮೀಸಲಾತಿ ಹೆಚ್ಚಳಕ್ಕೆ ಅನ್ವಯ ವಾಗಿ ರೋಸ್ಟರ್ ಪದ್ಧತಿಯಡಿ ಯಾವ್ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಉಳಿದಿವೆ ಎಂದು ಜಾತಿಗೆ ಅನುಗುಣವಾಗಿ ಗುರುತಿಸಲಾಗುತ್ತದೆ

ನಂತರ ಆಯಾ ಜಾತಿ,ಪಂಗಡದವರಿಗೆ ಮೀಸ ಲಾತಿ ಪ್ರಮಾಣವನ್ನು ಹೆಚ್ಚುವರಿಗೊಳಿಸಿ ನೇಮ ಕಾತಿ ಮಾಡಿಕೊಳ್ಳಲಾಗುತ್ತದೆ. ಹೊಸ ಮೀಸಲಾತಿ ಪ್ರಮಾಣದಲ್ಲೇ ಮುಂಬಡ್ತಿ ಕೊಡಲಾಗುತ್ತದೆ ಎಲ್ಲಾ ಹುದ್ದೆಗಳ ಮೀಸಲಾತಿ ಪ್ರಮಾಣವನ್ನು ಮರು ನಿಗದಿಪಡಿಸುವ ಪ್ರಕ್ರಿಯೆ ಪೂರ್ಣಗೊಂಡ ಬಳಿಕವಷ್ಟೇ ನೇರ ನೇಮಕಾತಿ ಹಾಗೂ ಮುಂಬಡ್ತಿ ಪ್ರಕ್ರಿಯೆಗಳು ಪುನಾರಂಭಗೊಳ್ಳಲಿವೆ ಮುಂಬಡ್ತಿ ಗಾಗಿ ಕಾಯುತ್ತಿದ್ದ ಹಿಂದೂಳಿದ ಮತ್ತು ಸಾಮಾನ್ಯ ವರ್ಗದ ಅಧಿಕಾರಿ ಮತ್ತು ನೌಕರರಿಗೆ ಇನ್ನಷ್ಟು ದಿನ ಬಡ್ತಿ ಸಿಗುವುದಿಲ್ಲ ಹೊಸ ಮೀಸಲಾತಿ ಅನ್ವಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ಬಡ್ತಿ ಸಿಕ್ಕ ನಂತರ ಹಿಂದುಳಿದ ಮತ್ತು ಸಾಮಾನ್ಯದ ವರ್ಗದ ನೌಕರರಿಗೆ ಬಡ್ತಿ ಸಿಗಲಿದೆ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಹೆಚ್ಚಿನ ಜಾತಿಗಳು ಸೇರ್ಪಡೆಯಾಗಿವೆ.

ಮೊದಲು ಪರಿಶಿಷ್ಟ ಜಾತಿಯಲ್ಲಿ 6 ಜಾತಿಗಳಿ ದ್ದವು.ಈಗ ಈ ಸಂಖ್ಯೆ 103ಕ್ಕೆ ಏರಿಕೆಯಾಗಿದೆ. ಪರಿಶಿಷ್ಟ ಪಂಗಡದಲ್ಲಿ ಬರೀ 2 ಅಥವಾ 3 ಜಾತಿ ಗಳಿದ್ದವು. ಆದರೆ, ಸದ್ಯ 56 ಜಾತಿಗಳು ಸೇರ್ಪಡೆ ಯಾಗಿವೆ. ಈ ಎಲ್ಲ ಜಾತಿಗಳಿಗೆ ಅನ್ವಯವಾ ಗುವಂತೆ ಮೀಸಲಾತಿ ಪ್ರಮಾಣವನ್ನು ಮರುನಿ ಗದಿ ಮಾಡಲಾಗುತ್ತಿದೆ. ಎಸ್ಸಿ-ಎಸ್ಟಿ ಸಮುದಾ ಯದ ಅಭ್ಯರ್ಥಿಗಳು ಸ್ವಂತ ಅರ್ಹತೆಯ ಮೇರೆಗೆ ನೇಮಕಾತಿ ಅಥವಾ ಹುದ್ದೆಗಳಿಗೆ ಆಯ್ಕೆಯಾ ಗಿದ್ದರೆ ಅಂತಹವರಿಗೆ ಮೀಸಲಾತಿ ಅನ್ವಯಿಸು ವುದಿಲ್ಲ. ಅವರನ್ನು ಮೀಸಲಾತಿಗೆ ಪರಿಗಣಿಸು ವಂತಿಲ್ಲ ಎಂದು ಸುಗ್ರೀವಾಜ್ಞೆಯಲ್ಲಿ ವಿವರಿಸ ಲಾಗಿದೆ.

ಆದರೆ ಈಗ ಹೆಚ್ಚುವರಿ ಮೀಸಲಾತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಹಲವರಿಗೆ ಬಡ್ತಿ ಭಾಗ್ಯ ದೊರೆ ಯಲಿದೆ.ಸುಗ್ರೀವಾಜ್ಞೆ ಮೂಲಕ ಜಾರಿ: ಎಸ್ಸಿ-ಎಸ್ಟಿ ಮೀಸಲಾತಿಯನ್ನು ಹೆಚ್ಚಿಸಲು ಸಂಪುಟದಲ್ಲಿ ಅನುಮೋದನೆ ಪಡೆದಿದ್ದ ರಾಜ್ಯ ಸರ್ಕಾರ, ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗ ಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗ ಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸ ಲಾತಿ) ಸುಗ್ರೀವಾಜ್ಞೆ-2022 ಹೊರಡಿಸಿತ್ತು.

ಈ ಸುಗ್ರೀವಾಜ್ಞೆಗೆ ರಾಜ್ಯಪಾಲ ತಾವರಚಂದ್ ಗೆಹಲೋತ್ ಅಂಕಿತ ಹಾಕಿದ್ದರು. ಇದರ ಬೆನ್ನಲ್ಲೇ ವಿಶೇಷ ರಾಜ್ಯಪತ್ರ ಹೊರಡಿಸಲಾಗಿತ್ತು. ಕೇವಲ ಸರ್ಕಾರಿ ಆದೇಶದ ಮೂಲಕ ಮೀಸಲಾತಿ ಹೆಚ್ಚಿಸಿ ದರೆ ಕೋರ್ಟ್​ನಲ್ಲಿ ಹಿನ್ನಡೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಮೂಲಕ ಜಾರಿಗೊ ಳಿಸಲಾಗಿತ್ತು.

ಸುದ್ದಿ ಸಂತೆ ನ್ಯೂಸ್

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.