ಧಾರವಾಡದ JSS ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂಜ್ಯ ಡಾ ವೀರೇಂದ್ರ ಹೆಗ್ಗಡೆ ಅವರ ಹುಟ್ಟು ಹಬ್ಬದ ಆಚರಣೆ ಶಿಕ್ಷಣದೊಂದಿಗೆ ಅರ್ಥಪೂರ್ಣ ಆಚರಣೆ ಮಾಡಿ ಮಾದರಿಯಾದ JSS ಸಂಸ್ಥೆ

Suddi Sante Desk
ಧಾರವಾಡದ JSS ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂಜ್ಯ ಡಾ ವೀರೇಂದ್ರ ಹೆಗ್ಗಡೆ ಅವರ ಹುಟ್ಟು ಹಬ್ಬದ ಆಚರಣೆ ಶಿಕ್ಷಣದೊಂದಿಗೆ ಅರ್ಥಪೂರ್ಣ ಆಚರಣೆ ಮಾಡಿ ಮಾದರಿಯಾದ JSS ಸಂಸ್ಥೆ

ಧಾರವಾಡ

ರಾಜರ್ಷಿ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ 75 ನೇ ಹುಟ್ಟು ಹಬ್ಬದ ಆಚರಣೆಯ ಪ್ರಯುಕ್ತ 108 ಧನ್ವಂತರಿ ಶ್ಲೋಕದ ಪಠಣ ಮತ್ತು ಫಲದಾನದ ಕಾರ್ಯಕ್ರಮವು ವಿಶೇಷವಾಗಿ ನಡೆಯಿತು

ಜನತಾ ಶಿಕ್ಷಣ ಸಮಿತಿಯ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಧಾರವಾಡ ದಲ್ಲಿ ದಿನಾಂಕ  ರಾಜರ್ಷಿ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ 75 ನೇ ಹುಟ್ಟು ಹಬ್ಬ ವನ್ನು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಆಚರಣೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ 1231 ವಿದ್ಯಾರ್ಥಿಗಳು, 63 ಜನ ಸಿಬ್ಬಂದಿ ವರ್ಗದವರು ಸೇರಿ  108 ಸಲ  ಧನ್ವಂತರಿ ಶ್ಲೋಕದ ಪಠಣ ವನ್ನು ಮಾಡಿದರು ಸಂಸ್ಕೃತದಲ್ಲಿ ಹುಟ್ಟುಹಬ್ಬದ ಹಾಡನ್ನು ಹಾಡಿ ಪೂಜ್ಯರ ಒಳ್ಳೆಯ ಆರೋಗ್ಯ ಮತ್ತು ಆಯುಷ್ಯಕ್ಕಾಗಿ ಪ್ರಾರ್ಥನೆ ಮಾಡಲಾ ಯಿತು.

ಪ್ರತಿಯೊಂದು ವಿದ್ಯಾರ್ಥಿಯಿಂದ ಒಂದೊಂದು ಫಲವನ್ನು ಸಂಗ್ರಹಿಸಿ ಅವುಗಳನ್ನು ಸಿವಿಲ್ ಆಸ್ಪತ್ರೆಯ ರೋಗಿಗಳಿಗೆ ದಾನ  ಮಾಡಲಾಯಿತು. ಮಕ್ಕಳಿಂದ ಚಿತ್ರಕಲೆಯಲ್ಲಿ ಅರಳಿದ ಪೂಜ್ಯರ ಭಾವಚಿತ್ರಗಳನ್ನು ಹಾಗೂ ಪೂಜ್ಯರ ಬಾಲ್ಯದಿಂದ ಇಲ್ಲಿಯವರೆಗಿನ ಎಲ್ಲಾ ಭಾವಚಿತ್ರಗಳನ್ನು ಪ್ರೊಜೆಕ್ಟರ್ ಮುಖಾಂತರ ಪರದೆಯ ಮೇಲೆ ಪ್ರದರ್ಶನ ಮಾಡಲಾಯಿತು.

ಪೂಜ್ಯ ಖಾವಂದರ ಉತ್ತಮ ಆರೋಗ್ಯ ಹಾಗು ಸಮಿತಿಯ ಎಲ್ಲಾ ಅಂಗಸಂಸ್ಥೆಗಳ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಉತ್ತಮ ಆರೋಗ್ಯದ ಸದುದ್ದೇಶದಿಂದ ಧನ್ವಂತರಿ ಮಂತ್ರವನ್ನು  ಪಠಣ ಮಾಡಲಾಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ|| ಅಜಿತ್ ಪ್ರಸಾದ್ ಅವರು ಹಾಗೂ ಐ .ಟಿ. ಐ ಕಾಲೇಜಿನ ಪ್ರಾಂಶುಪಾಲರಾದ ಮಹಾವೀರ್ ಉಪಾಧ್ಯೆ ಅವರು ಆಗಮಿಸಿದ್ದರು.

ರಕ್ಷಿತ ಜೊತೆ ಶ್ರೀಗೌರಿ ಸುದ್ದಿ ಸಂತೆ ನ್ಯೂಸ್…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.