ಧಾರವಾಡ –
ಸರ್ಕಾರಿ ಶಾಲೆಗಳು ಇನ್ನೇನು ಆರಂಭ ಆಗುವ ಭರವಸೆಯೊಂದಿಗೆ ಹುಬ್ಬಳ್ಳಿ ಗ್ರಾಮೀಣ ನವನಗರ ದ ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ಇಸ್ಮಾಯಿಲ್ ಮುಲ್ಲಾನವರ ಹಾಗೂ ಸಹಶಿಕ್ಷಕರು, ವಿವಿಧ ಬಡಾವಣೆಗಳಿಗೆ ತೆರಳಿ ಸರ್ಕಾರಿ ಶಾಲೆಗಳಲ್ಲಿ ಸಿಗುತ್ತಿರುವ ವಿವಿಧ ಸೌಲಭ್ಯಗಳು ಮಧ್ಯಾಹ್ನದ ಬಿಸಿಯೂಟ, ಸ್ಕಾಲರ್ಶಿಪ್, ಉಚಿತ ಪುಸ್ತಕ, ಹಾಗೂ ಶಾಲಾ ಸಮವಸ್ತ್ರ ಗಳು ಸೇರಿದಂತೆ ಸರ್ಕಾರಿ ಶಾಲೆಯ ಉಪಯೋಗದ ಕುರಿತು ಪಾಲಕರಿಗೆ ತಿಳಿಸಿ ಹೇಳುವುದರ ಜೊತೆಗೆ ಆರು ವರ್ಷ ತುಂಬಿದ ಮಕ್ಕಳನ್ನು ಗುರುತಿಸುವ ಕಾರ್ಯ ವನ್ನು ಭರದಿಂದ ಮಾಡಲಾಯಿತು.
ಎಲ್ಲಾ ಅಂಗನವಾಡಿ ಕಾರ್ಯಕರ್ತರ ಸಹಾಯ ದಿಂದ ಪಾಲಕರ ವಿಳಾಸ ಪಡೆದು ಅಂತಹ ಮಕ್ಕಳ ಮನೆಗೆ ತೆರಳುತ್ತಿದ್ದಾರೆ ಮುಖ್ಯ ಶಿಕ್ಷಕರ ಜೊತೆಗೆ ಶಾಲಾಭಿವೃದ್ದಿ ಸಮಿತಿಯ ಅದ್ಯಕ್ಷೆ ರಜಿಯಾಬಾನು ಸಾವಂತನವರ, ಸಹಶಿಕ್ಷಕರುಗಳಾದ ಎಲ್ ಡಿ ಬದ್ದಿ, ಸುನಂದ ಹರಪನಹಳ್ಳಿ, ಗೀತಾ ಓಂಕಾರಿ,ಸೀತಾ ಗುಡಿ,ಗೀತಾ ಇಟಗಿ ಮುಂತಾದವರು ಇದ್ದರು
ಪಾಲಕರು ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದು ತಮ್ಮ ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸಲು ಮುಂದಾ ಗುತ್ತಿದ್ದಾರೆ ಅದೇ ರೀತಿ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಸಹ ಮಲ್ಲಿಕಾರ್ಜುನ ಪರುತಪ್ಪ ಹೂಗಾರ ತನ್ನ ಟಿವಿಎಸ್ ಬೈಕ್ ನಲ್ಲಿ ಹೆಗಲಿಗೆ ಮೈಕ್ ಹಾಕಿಕೊಂಡು ಪಾಲಕರೇ ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ ಎಂಬ ಘೋಷವಾಕ್ಯದೊಂದಿಗೆ ಗ್ರಾಮದ ಬೀದಿಬೀದಿಗಳಲ್ಲಿ ಕೂಗಿ ಕೂಗಿ ಹೇಳುತ್ತಿದ್ದಾರೆ
ಗ್ರಾಮದ ಪಂಚಾಯತಿ ಅದ್ಯಕ್ಷೆ ತೇಜಸ್ವಿನಿ ತಲವಾ ಯಿ ಉಪಾದ್ಯಕ್ಷರು ಪಿಡಿಒ ಬಿಡಿ ಚೌರಡ್ಡಿ, ಸೇರಿದಂ ತೆ ಸರ್ವ ಸದಸ್ಯರ ಕಳಕಳಿ ಮೇರೆಗೆ ಕಳೆದ ಮೂರು ದಿನಗಳಿಂದ ಗ್ರಾಮದಲ್ಲಿ ಮಕ್ಕಳ ದಾಖಲಾತಿಯ ಪ್ರಚಾರ ಜೋರಾಗಿದೆ,